ಚಳ್ಳಕೆರೆ : ಆಷಾಡ ಮಾಸದಲ್ಲಿ ಮೂರು ವರ್ಷ ತುಂಬಿದ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವುದು ಸರ್ವ ಶ್ರೇಷ್ಠವಾದ ಮಾಸ ಎಂದು ಶ್ರೀ ರಘು ಸ್ವಾಮೀಜಿ ಹೇಳಿದ್ದಾರೆ.
ಅವರು ನಗರದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಕ್ಷರ ಅಭ್ಯಾಸ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಕ್ಷರ ಅಭ್ಯಾಸ ಎಂಬುದು ಶಾಲಾ ಹಂತದಿAದ ನಡೆಯಬೇಕು ಮಠ ಮಾನ್ಯಗಳಿಗೆ ಹೋಗುವುದು ಒಂದು ಪದ್ದತಿಯಾದರೆ ಶಾಲಾ ಹಂತದಲ್ಲಿ ನಿತ್ಯವೂ ಅಕ್ಷರ ಕಲಿಯುವ ದೇಗುಲದಲ್ಲಿ ನಿರಂತರ ಅಭ್ಯಾಸ ಶಾಶ್ವತವಾಗಿರುತ್ತದೆ, ಮಕ್ಕಳಿಗೆ ಮೊದಲ ದೇಗುಲ ಶಾಲಾ ಕೊಠಡಿ ಇಂತಹ ದೇಗುಲದಲ್ಲಿ ಮುಗ್ದ ಮಕ್ಕಳು ಸಂಸ್ಕರ, ಸಂಸ್ಕೃತಿ ಈಗೇ ಉತ್ತಮ ನಡವಳಿಕೆ ಕಲಿಯು ವಿಶಿಷ್ಠವಾದ ಈ ದೇಗುಲ ನಿರಂತವಾಗಿ ನಡೆಯುತ್ತಿದೆ ಎಂದರು.
ಇನ್ನೂ ಸಹ್ಯಾದ್ರಿ ಶಾಲೆಯ ಶಿಕ್ಷಕರಾದ ಮಂಜುನಾಥ್ ಮಾತನಾಡಿ, ಬಾಲ್ಯದಲ್ಲಿ ಮಕ್ಕಳಿಗೆ ಯಾವ ರೀತಿಯಲ್ಲಿ ನಾವು ಕಲಿಸುತ್ತೆವೆ ಎಂಬುದು ಪ್ರಮುಖ ಪಾತ್ರ ವಹಿಸುತ್ತದೆ ಆದ್ದರಿಂದ ಕೇವಲ ಅಕ್ಷರ ಎಂಬುದು ಅಕ್ಷರ ಅಲ್ಲ ಅದು ಬದಲಾಗಿ ಮನುಷ್ಯನ ಸರ್ವಗೀಣ ಸರ್ವತೋಮುಖ ಅಭಿವೃಧ್ದಿಗೆ ನಾಂದಿ ಹಾಡುತ್ತದೆ ಆದ್ದರಿಂದ ಬಾಲ್ಯದಲ್ಲಿ ಮೂರು ವರ್ಷ ತುಂಬಿದ ಮಗುವಿಗೆ ಅಕ್ಷರ ಅಭ್ಯಾಸ ಎಂಬ ಕಾರ್ಯ ಕ್ರಮ ನಮ್ಮ ಶಾಲೆಯಲ್ಲಿ ಆಮ್ಮಿಕೊಂಡಿರುವದು ಸಂತಸ ತಂದಿದೆ, ಅಕ್ಷರ ಅಭ್ಯಾಸದಲ್ಲಿ ಮೊದಲಿಗೆ ಗಣೇಶನ ನಮನ, ಸರಸ್ಪತಿ ನಮನ, ಗುರು ನಮನ ಈಗೇ ಮೂರು ಹಂತದಲ್ಲಿ ಪೂಜೆ ನಂತರ ಓಂ ನಮಾಯ ಶಿವಾಯ ಬರೆಯುವ ಬಾಲ್ಯದ ಮಗು ಉತ್ತಮ ಕಲಿಕೆಯಲ್ಲಿ ತೊಡಗುವ ದೃಡ ವಿಶ್ವಾಸವಿದೆ ಎಂದರು.

ಈದೇ ಸಂಧರ್ಭದಲ್ಲಿ ಸ್ವಾಮೀಜಿಯಾದ ರಘುಸ್ವಾಮಿ, ಶಾಲಾ ಶಿಕ್ಷಕರಾದ ಸುಶೀಲ ಗೌಡ, ಸೌಮ್ಯ, ರ‍್ಮಿನ್, ಮಂಜುನಾಥ್ ಅನಿತಾ, ನಾಗವೇಣಿ, ರಾಮಪ್ರಸಾದ್ ಇತರರು ಇದ್ದರು.

Namma Challakere Local News
error: Content is protected !!