ಚಳ್ಳಕೆರೆ : ದಿನ ನಿತ್ಯ ಸಾರ್ವಜನಿಕರ ಒತ್ತಡದಲ್ಲಿ ಇರುವ ಅಧಿಕಾರಿ ಸಿಬ್ಬಂದಿ ವರ್ಗದವರು ಮಾನಸಿಕ ಒತ್ತಡದಿಂದ ಆಚೆ ಬರಲು ನಿಮ್ಮ ದೈನಂದಿನ ಬದುಕಿನಲ್ಲಿ ಬದಲಾವಣೆ ತನ್ನಿ ಎಂದು ಬ್ರಹ್ಮ ಕುಮಾರಿ ಈಶ್ವರಿ ವಿದ್ಯಾಲಯಾದ ರೇಷ್ಮಾ ಅಕ್ಕನವರು ಹೇಳಿದ್ದಾರೆ.
ಅವರು ನಗರದ ತಾಲೂಕು ಪಂಚಾಯಿತಿ ಕಛೇರಿಯಲ್ಲಿ ಆಯೋಜಿಸಿದ್ದ ಪಿಡಿಓ ಹಾಗೂ ಕಂಪ್ಯೂಟರ್ ಆಪರೇಟರ್ ಅಧಿಕಾರಿ ಸಿಬ್ಬಂದಿಗಳಿಗೆ ಮಾನಸಿಕ ಒತ್ತಡದ ಪ್ರವಚನ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಮನುಷ್ಯನ ಮಾನಸಿಕ ಒತ್ತಡವು ಇಡೀ ದೇಹದ ಮೇಲೆ ಪರೀಣಾಮಿ ಬೀರುತ್ತದೆ ಆದ್ದರಿಂದ ಅಧಿಕಾರಿಗಳು ತಮ್ಮ ವೃತ್ತ ಮಾಡುವ ಜಾಗದಲ್ಲಿ ನಯ ವಿನಯದಿಂದ ಸಾರ್ವಜನಿಕರೊಂದಿಗೆ ಯಾವ ರೀತಿಯಲ್ಲಿ ವರ್ತಿಸಬೇಕು ನಿತ್ಯದ ತೊಳಲಾಟದಲ್ಲಿ ಮಾನಸೀಕ ಒತ್ತಡ ನಿವಾರಣೆ ಹೇಗೆ ಎಂಬುದು ಕಂಡುಕೊಳ್ಳಬೇಕು, ದಿನದ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಒತ್ತಡದ ಜೀವನ ಸಾಗಿಸುವುದು ಕಷ್ಟ ಸಾಧ್ಯ ಎಂದರು.
ಇನ್ನೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಹೊನ್ನಯ್ಯ ಮಾತನಾಡಿ, ಅಧಿಕಾರಿಗಳು ಪ್ರತಿನಿತ್ಯವೂ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರೊಟ್ಟಿಗೆ ಯಾವ ರೀತಿಯಲ್ಲಿ ಸ್ಪಂಧಿಸಬೇಕು ಎಂಬುದು ಈ ಮಾನಸಿಕ ನಿವಾರಣೆಯಿಂದ ಮಾತ್ರ ತಿಳಿಯಬಹುದು ಈಂತಹ ಪ್ರವಚನಗಳು ನಮ್ಮ ಆರೋಗ್ಯಕರ ವಾತವರಣೆಕ್ಕೆ ಪೂರಕವಾಗಿವೆ ಎಂದರು.
ಈದೇ ಸಂಧರ್ಭದಲ್ಲಿ ತಾಲೂಕಿನ ಎಲ್ಲಾ ನಲವತ್ತು ಗ್ರಾಮ ಪಂಚಾಯಿತಿಗಳ ಪಿಡಿಓಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

About The Author

Namma Challakere Local News
error: Content is protected !!