ಚಳ್ಳಕೆರೆ : ಮತದಾನದ ರೂಪದಲ್ಲಿ ನೀಡಿದ ನಿಮ್ಮ ಸಾಲವನ್ನು ಇನ್ನೂ ಐದು ವರ್ಷಗಳ ಕಾಲ ಅವಧಿಯಲ್ಲಿ ತೀರಿಸುತ್ತೇನೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ವಾಲ್ಮಿಕಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶ್ರೀ ರೇವಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ ಹಾಗೂ ಚಳ್ಳಕೆರೆ ತಾಲ್ಲೂಕಿನ ಕುರುಬ ಸಮುದಾಯದ ವತಿಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ನೂತನ ಸಚಿವರು ಮತ್ತು ಶಾಸಕರುಗಳಿಗೆ ಸನ್ಮಾನ ಸಮಾರಂಭ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನನ್ನನ್ನು ಮೂರು ಬಾರಿ ಶಾಸಕನ್ನಾಗಿ ಮಾಡಿದ ಹಾಲು ಮತಸ ಮಾಜದ ಋಣ ತೀರಿಸುತ್ತೆನೆ, ನಿಮ್ಮ ಭೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ನಗರದ ನಿರ್ಮಾಣ ಹಂತದಲ್ಲಿ ಇರುವ ಕನಕ ಭವನ ಅತೀ ಶಿಘ್ರದಲ್ಲಿ ಉದ್ಘಾಟನೆಗೆ ಕ್ರಮವಹಿಸುತ್ತೆನೆ, ಕಂಬಳಿ ಮಾರುಕಟ್ಟೆ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳುವೆ, ಹಾಗೂ ಕನಕ ವೃತ್ತಕ್ಕೆ ನಿರ್ಮಾಣಕ್ಕೆ ಸೂಚಿಸುವೆ ಎಂದರು.
ಹೊಸದುರ್ಗ ವಿಧಾನ ಸಭಾ ಕ್ಷೇತ್ರದ ಶಾಸಕ ಗೊವಿಂದಪ್ಪ ಮಾತನಾಡಿ, ಗುರುಗಳ ಮಾರ್ಗದರ್ಶನದಲ್ಲಿ ನಡೆಯುವ ನಾವು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕುರುಬ ಸಮಾಜ ಸಾಗುತ್ತದೆ, ಈಡೀ ಜಿಲ್ಲೆಯಲ್ಲಿ ಹೊಸದುರ್ಗ ತಾಲೂಕು ಬಿಟ್ಟರೆ ರಾಜಕೀಯ ಶಕ್ತಿ, ಆರ್ಥಿಕ ಬೆಳವಣಿಗೆ ಸಾಮಾಜಿಕ ಚಿಂತನೆ ನೀಡಿದ ಹಾಲು ಮತಸ್ತ ಸಮುದಾಯ ಇದು ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ ಎಂದರು.
ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಚಂದ್ರಪ್ಪ ಮಾತನಾಡಿ, ಬಯಲು ಸೀಮೆಯಲ್ಲಿ ರೈತ ಬದುಕು ದುಸ್ಥಿರವಾಗಿ ಇನ್ನೂ ಇಲ್ಲಿನ ರೈತರು ಆರ್ಥಿಕವಾಗಿ ಮೇಲೆ ಬರಲು ಇಲ್ಲಿನ ಶಾಸಕ ಟಿ.ರಘುಮೂರ್ತಿ ವೇದಾವತಿ ಮೂಲಕ ನೀರು ತಂದಿದ್ದು, ಇನ್ನು ಭದ್ರಾ ಮೇಲ್ದೆಂಡೆ ಯೋಜನೆಯ ನೀರು ಕೂಡ ಬರವ ಸಾಧ್ಯತೆಗಳಿವೆ. ಇನ್ನೂ ಹಾಲು ಮತಸ್ತ ತಾಯಿಯ ಹಾಲು ಕುಡಿದು ಬೆಳೆದವನು ನಾನು ಆದ್ದರಿಂದ ನಾನು ಹುಟ್ಟಿದ್ದು ಬೇರೆ ಸಮುದಾಯದಲ್ಲಿದ್ದರು ಕೂಡ ನಾನು ಕುರುಬ ಜನಾಂಗದ ಮೇಲೆ ಅಪಾರವಾದ ಗೌರವವಿದೆ ಎಂದರು.
ಶ್ರೀ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ರವರ ಮಾತನಾಡಿದರು. ನಂತರ ಎಸ್‌ಎಸ್‌ಎಲ್‌ಸಿ ಉತ್ತೀðಣಾರದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಹೊಸದುರ್ಗ ಶಾಸಕರಾದ ಬಿ.ಜಿ.ಗೋವಿಂದಪ್ಪ, ಹೊಳಲ್ಕೆರೆ ಶಾಸಕರಾದ ಎಂ.ಚAದ್ರಪ್ಪ, ಹಾಗೂ ಸಮುದಾಯದ ಅಧ್ಯಕ್ಷ ಮಲ್ಲೇಶಪ್ಪ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶಶಿಕಲಾ ಸುರೇಶ್ ಬಾಬು, ನಗರಸಭಾ ಸದಸ್ಯರಾದ ರಾಘವೇಂದ್ರ, ರಮೇಶ್ ಗೌಡ, ಮುಖಂಡರುಗಳಾದ ಬಸವರಾಜ, ಜಗದೀಶ್, ಮಲ್ಲಿಕಾರ್ಜುನ್, ಪರಸಪ್ಪ, ಹನುಮಂತ, ಮುಖಂಡರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Namma Challakere Local News
error: Content is protected !!