ಚಳ್ಳಕೆರೆ : ವಿಜ್ಞಾನ ನಗರಿ ಚಳ್ಳಕೆರೆಯಲ್ಲಿ ಮುಂಬರುವ ದಿನಗಳಲ್ಲಿ ಈಡೀ ಪ್ರಪಂಚದಲ್ಲೆ ಒಂದು ಉತ್ತಮವಾದ ವಿಜ್ಞಾನ ನಗರಿಯಾಗಿ ಹೊರಹೊಮ್ಮಲಿದೆ ಆದ್ದರಿಂದ ಇಲ್ಲಿನ ಯುವಕರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಸಂಖ್ಯಾತ ಅವಕಾಶಗಳಿದ್ದು, ವಿದ್ಯಾರ್ಥಿಗಳು ತಮಗೆ ಸರಿಹೊಂದುವ ಅವಕಾಶಗಳನ್ನು ಆದ್ಯತೆಯ ಮೇರೆಗೆ ಬಳಸಿಕೊಳ್ಳಬೇಕು ಎಂದು ಪ್ರಾಚಾರ್ಯ ಡಾ.ಆರ್.ರಂಗಪ್ಪ ಹೇಳಿದರು.

ನಗರದ ಹೆಚ್.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಕಲರವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇಂದು ಸಮಾಜದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಪರ್ಧಾತ್ಮಕತೆ ಕಂಡುಬರುತ್ತದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ತುಂಬಾ ಎಚ್ಚರಿಕೆಯಿಂದ ತಮಗೆ ಬೇಕಿರುವ ಅವಕಾಶವನ್ನು ಬಾಚಿಕೊಳ್ಳುವತ್ತ ಚಿತ್ತನೆಟ್ಟಿರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಉದ್ಯೋಗ, ಶಿಕ್ಷಣ, ಹಾಗೂ ಜೀವನ ಭದ್ರತೆಯ ಬಗ್ಗೆ ಪದವಿ ಮುಗಿದ ನಂತರ ಆಲೋಚಿಸಿದರಾಯಿತು ಎಂದು ಸುಮ್ಮನಿರಬಾರದು. ಬದಲಾಗಿ ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಯಾವ ಹುದ್ದೆಯನ್ನು ಪಡೆದುಕೊಳ್ಳಬೇಕು, ಯಾವ ಗುರಿಯನ್ನು ಮುಟ್ಟಬೇಕು ಎಂದು ಮೊದಲೇ ನಿಶ್ಚಯಿಸಿಕೊಂಡಿರಬೇಕು. ನಂತರ ಆ ಗುರಿಯ ಕಡೆಗೆ ಮುನ್ನುಗ್ಗಬೇಕು. ಅದಕ್ಕಾಗಿ ಪದವಿಯ 3 ವರ್ಷಗಳನ್ನು ಕಷ್ಟಪಟ್ಟು ಓದಬೇಕು. ನಂತರ ತಾವು ಉದ್ಯೋಗ ಅವಕಾಶವನ್ನು ಪಡೆದ ಹಲವಾರು ಸ್ನೇಹಿತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಸೃಷ್ಟಿಸುವ ಹಂತಕ್ಕೆ ಬೆಳೆದು ನಿಲ್ಲಬೇಕು. ಹಾಗಾದಾಗ ಮಾತ್ರ ಪೋಷಕರಿಗೆ, ಕಾಲೇಜಿಗೆ ಉತ್ತಮ ಗೌರವ ಕೀರ್ತಿ ತಂದು ಕೊಟ್ಟಂತಾಗುತ್ತದೆ.
ಅಪ್ಪಟ ಬಯಲು ಸೀಮೆಯಲ್ಲಿರುವ ನಮ್ಮ ಹೆಚ್.ಪಿ.ಸಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಾವಿರಾರು ಬಡ ಮಕ್ಕಳ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡಿದೆ. ಕಾಲೇಜಿನಲ್ಲಿ ನಿರಂತರವಾಗಿ ಉತ್ತಮವಾದ ಪಾಠ ಪ್ರವಚನಗಳು ನಡೆಯುತ್ತಿದ್ದು ವಿಶ್ವವಿದ್ಯಾನಿಲಯದ ಶೈಕ್ಷಣಿಕ ವರ್ಷದ ದಿನಚರಿಯಂತೆ ಕಾರ್ಯ ನಿರ್ವಹಿಸುತ್ತಿದೆ ಹಾಗೆ ಕಾಲೇಜಿನಲ್ಲಿರುವ ಎಲ್ಲಾ ವಿಭಾಗಗಳಲ್ಲೂ ಉತ್ತಮವಾದ ಫಲಿತಾಂಶ ದೊರೆಯುತ್ತಿದೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿ ಮೂಡಿ ಬರುತ್ತದೆ ಅದರಲ್ಲೂ ಸ್ನಾತಕೋತ್ತರ ಪದವಿ ಬಯಲು ಸೀಮೆಯ ಸಾವಿರಾರು ವಿದ್ಯಾರ್ಥಿಗಳಿಗೆ ವರದಾನವಾಗಿದೆ ಸತತವಾಗಿ ಪ್ರತಿ ವರ್ಷವೂ ಸಹ ಸ್ನಾತಕೋತರ ವಿಭಾಗದಲ್ಲಿ ಉನ್ನತ ಶ್ರೇಣಿಯ ಫಲಿತಾಂಶಗಳು ದಾಖಲಾಗುತ್ತಿರುವುದು ಕಾಲೇಜಿಗೆ ಹೆಮ್ಮೆಯ ಸಂಗತಿಯಾಗಿದ್ದು, ಅಂತಿಮ ಪದವಿ ಹಂತದಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಪದವಿಗೆ ವಿದ್ಯಾಭ್ಯಾಸವನ್ನು ಮೊಟುಕುಗೊಳಿಸುವ ಬದಲು ಸ್ನಾತಕೋತ್ತರ ಪದವಿಯನ್ನು ಪಡೆಯುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಂಡು ಉದ್ಯೋಗಾವಕಾಶವನ್ನು ಹೊಂದಬೇಕು ಎಂದು ಹೇಳಿದರು.
ಇದೇವೇಳೆ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ರಂಗಸ್ವಾಮಿ, ಡಾ.ಲೀಲಾವತಿ, ಉಪನ್ಯಸಕರಾದ ಬ್ರಹ್ಮನಂದರೆಡ್ಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಬೊಮ್ಮಯ್ಯ, ಯರ್ರಿಸ್ವಾಮಿ, ಬಸವರಾಜ್, ತಿಮ್ಮಣ್ಣ, ಅಶ್ವಿನಿದೇಸಾಯಿ, ಮಾರುತಿ, ವಲೀವುಲ್ಲಾ, ರಜನೀಶ್ ಇದ್ದರು.

Namma Challakere Local News
error: Content is protected !!