ಚಳ್ಳಕೆರೆ : ತಾಲೂಕಿನ ಸಾಣೀಕೆರೆ ಗ್ರಾಮಪಂಚಾಯತ್ ವ್ಯಾಪ್ತಿಯ ಹೆಗ್ಗೆರೆ ಗ್ರಾಮದ ಸಮೀಪವಿರುವ ಪ್ರಕಾಶ್ ಸ್ಟಾಂಟ್ ಐರನ್ ಪವರ್ ಲಿ.ವತಿಯಿಂದ ಸುಮಾರು 24 ಲಕ್ಷರೂ ವೆಚ್ಚದಲ್ಲಿ ಕಾಪಾರಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಎರಡು ಕೊಠಡಿಗಳ ಕಾಮಗಾರಿಗೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದರು.
ಈಡೀ ರಾಜ್ಯದಲ್ಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ಮೊದಲ ಸ್ಥಾನದಲ್ಲಿದೆ ಅದರಂತೆ ಚಳ್ಳಕೆರೆ ತಾಲೂಕು ಕೂಡ ಜಿಲ್ಲೆಗೆ ಮೊದಲನೆಯದಾಗಿದೆ ಎಂದು ಆದ್ದರಿಂದ ಇಂತಹ ಬಯಲು ಸೀಮೆಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಉತ್ತಮವಾಗಿದೆ ಆದ್ದರಿಂದ ಸಂಘ ಸಂಸ್ಥೆಗಳು ಹಾಗೂ ಕಾರ್ಖಾನೆಗಳ ಸಹಕಾರದಿಂದ ಸರಕಾರಿ ಶಾಲೆಗಳನ್ನು ಉನ್ನತೀಕರಿಸಿದಾಗ ಮಾತ್ರ ಶೈಕ್ಷಣಿಕ ಮಟ್ಟ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.
ಇನ್ನೂ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಬಡಕುಟುಂಬದ ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚು ವ್ಯಾಸಂಗ ಮಾಡುತ್ತಿದ್ದು ಅನೇಕ ಸರಕಾರಿ ಶಾಲಾ ಕಟ್ಟಡಗಳು ಅನುದಾನದ ಕೊರತೆಯಿಂದ ಶಿಥಿಲವಾಗಿದೆ ಈಗಾಗಲೆ ಪ್ರಕಾಶ್ ಐರನ್ ಕಾರ್ಖಾನೆಯಿಂದ ಸಾಣೀಕೆರೆ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರು, ಆರೋಗ್ಯ ತಪಾಸಣೆ, ಹೆಗ್ಗೆರೆ ಗ್ರಾಮದಲ್ಲಿ 4, ಕಮ್ಮತ್ ಮರಿಕುಂಟೆ 2 ಒಟ್ಟು 6 ಕೊಠಡಿಗಳ ಕಾಮಗಾರಿ ಪೂರ್ಣಗೊಂಡ ಬೆನ್ನಲ್ಲೇ ಈಗ ಕಾಪರಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 24 ಲಕ್ಷ ರೂ ವೆಚ್ಚದಲ್ಲಿ 2 ನೂತನ ಕೊಠಡಿಗಳನ್ನು ನಿರ್ಮಿಸಿಕೊಡುತ್ತಿರುವ ಸಂಸತ ತಂದಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್.ಸುರೇಶ್ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿರುವ ಈ ಕಾರ್ಖಾನೆ ಇದರಿಂದ ಗ್ರಾಮೀಣ ಪ್ರದೇಶಗಳ ಬಡ ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಾಯವಾಗಲಿದೆ ಪೋಷಕರು ತಮ್ಮ ಮಕ್ಕಳನ್ನು ತಪ್ಪದೆ ಶಾಲೆಗೆ ಕಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಕಾಶ್ ಸ್ಟಾಂಟ್ ಐರನ್ ಪವರ್ ಲಿ.ಹಿರಿಯ ವ್ಯವಸ್ಥಾಪಕ ರಾಜೇಂದ್ರಕುಮಾರ್,ಸಹಾಯಕ ವ್ಯವಸ್ಥಾಪಕ ಮಂಜುನಾಥ. ಅಧಿಕಾರಿಗಳಾದ ರುದ್ರಪ್ಪ, ನಾಗರಾಜ್‌ನಾಯಕ, ಮಂಜುನಾಥ, ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ , ಮುಖ್ಯ ಶಿಕ್ಷಕರು ಇತರರಿದ್ದರು.

Namma Challakere Local News
error: Content is protected !!