ಚಳ್ಳಕೆರೆ : ಬಯಲು ಸೀಮೆ ಸಾರ್ವಜನಿಕರು ಹಾಗೂ ಸಂಘಸAಸ್ಥೆಗಳು ಬಡ ರೋಗಿಗಳಿಗೆ ಉಪಯೋಗವಾಗಲಿ ಎಂದು ನೀಡಿದ ಯಂತ್ರಗಳಲ್ಲಿ ಆಸ್ಪತ್ರೆಯ ವೈದ್ಯರು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಬಡರೋಗಳಿಗೆ ಗುಣ ಮಟ್ಟದ ಆರೋಗ್ಯ ಸೇವೆ ನೀಡುವಂತೆ ಶಾಸಕ ಟಿ.ರಘುಮೂರ್ತಿ ಕಿವಿಮಾತು ಹೇಳಿದರು.
ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಸುಮಾರು 12 ಲಕ್ಷ ರೂ ಮೌಲ್ಯದ ಕೊಡುಗೆ ನೀಡಿದ ಡಯಾಲಿಸಿಸ್ ಯಂತ್ರಕ್ಕೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿ ಮಾತನಾಡಿದರು.
ಇಂತಹ ಬಯಲು ಸೀಮೆಯಲ್ಲಿ ಬಡ ಜನರಿಗೆ ಉಪಯೋಗ ವಾಗುವಂತಹ ಸರ್ಕಾರದ ಜೊತೆಗೆ ಖಾಸಗಿ ಸಂಘ-ಸAಸ್ಥೆಗಳು ಕೈಜೋಡಿಸಿದಾಗ ಮಾತ್ರ ಸಾರ್ವಜನಿಕ ಆಸ್ಪತ್ರೆಗೆ ಬರುವ ಬಡರೋಗಿಗಳಿಗೆ ಸಹಾಯವಾಗುತ್ತದೆ ಚಳ್ಳಕೆರೆ ತಾಲೂಕು ಮೊಳಕಾಲ್ಮುರು ಗಡಿ ಗ್ರಾಮಗಳನ್ನು ಹಂಚಿಕೊAಡಿರುವ ಹಿನ್ನಲೆಯಲ್ಲಿ ಇಲ್ಲಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿರುತ್ತದೆ ಆದ್ದರಿಂದ ಸಂಘ ಸಂಸ್ಥೆಗಳು ನೆರವು ಅಗತ್ಯ ಇಂತಹ ಸಂಸ್ಥೆಗಳು ನೀಡಿದ ಯಂತ್ರಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ರೋಗಿಗಳಿಗೆ ಉತ್ತಮ ಸೇವೆ ನೀಡಬೇಕು ಎಂದು ಆಡಳಿತಾಧಿಕಾರಿ ಡಾ.ವೆಂಕಟೇಶ್ ಗೆ ಸೂಚನೆ ನೀಡಿದರು.
ಆಡಳಿತಾಧಿಕಾರಿ ವೆಂಕಟೇಶ್ ಮಾತನಾಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದೆ ಡಯಾಲಿಸಿಸ್ ಯಂತ್ರ ಇತ್ತು. ಇದರ ಜೊತೆಗೆ ಲಯನ್ಸ್ ಕ್ಲಬ್ ವತಿಯಿಂದ ನೂತನ ಡಯಾಲಿಸಿಸ್ ಯಂತ್ರ ನೀಡಿರುವುದರಿಂದ ವಾರದಲ್ಲಿ 9 ಜನರಿಗೆ ಚಿಕಿತ್ಸೆ ನೀಡಲು ಅನುಕೂಲವಾಗಿದೆ ಕಿಡ್ನಿ ಸಂಪೂರ್ಣ ವಿಫಲವಾದಾಗ ರೋಗಿಗೆ ಡಯಾಲಿಸಿಸ್ ಮೂಲಕ ಕೃತ ರಕ್ಷ ಶೋದಿಸುವ ಮೂಲಕ ಕೆಲವು ದಿನಗಳ ಕಾಲ ಬದುಕಲು ಅವಕಾಶವಿರುತ್ತದೆ ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಜಿಲ್ಲಾಧ್ಯಕ್ಷ ಎಂ.ಕೆ. ಭಟ್, ತಾಲ್ಲೂಕು ಅಧ್ಯಕ್ಷ ಎಸ್.ಕೆ. ಮರಳಿ ಮಾತನಾಡಿದರು. ಸದಸ್ಯರಾದ ಮಹಮ್ಮದ್ ಮಹರಾಲಿ, ರವಿ, ಸಿದ್ದಾರ್ಥ್ ಇತರರಿದ್ದರು.

Namma Challakere Local News
error: Content is protected !!