ಚಳ್ಳಕೆರೆ : ಕಳೆದ 30 ತಿಂಗಳ ಕಾಲ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಉತ್ತಮವಾಗಿ ಆಡಳಿತ ನಡೆಸಿದ್ದೇನೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಬಿ. ಶಂಕರ್ ಸ್ವಾಮಿ ಹೇಳಿದ್ದಾರೆ. ಅವರು ಶುಕ್ರವಾರ ಸಮೀಪದ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ನವೀಕರಿಸಿದ ಕಾರ್ಯಾಲಯವನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲಾ ಹಳ್ಳಿಗಳಲ್ಲಿ ಉತ್ತಮವಾಗಿ ಅಭಿವೃದ್ಧಿ ಕೆಲಸಗಳಾಗಿವೆ ಕಳೆದ 30 ತಿಂಗಳ ಕಾಲ ನನ್ನ ಆಡಳಿತ ಅವಧಿಯಲ್ಲಿ ಯಾವುದೇ ರೀತಿ ಲೋಪವಿಲ್ಲದೆ ಕಾರ್ಯನಿರ್ವಹಿಸಿದ್ದೇನೆ ನನಗೆ ಎಲ್ಲಾ ಸದಸ್ಯರು ಸಹಕಾರ ಹಾಗೂ ಬೆಂಬಲವನ್ನ ನೀಡಿದ್ದಕ್ಕೆ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಯಿತು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಬಿ ಶಂಕರಸ್ವಾಮಿ ತಿಳಿಸಿದರು..

ಊರಿನ ಯುವ ಮುಖಂಡ ಎಪಿ.ರೇವಣ್ಣ ಮಾತನಾಡಿ 30 ತಿಂಗಳ ಕಾಲ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಉತ್ತಮ ಆಡಳಿತವನ್ನು ನಡೆಸಿದ್ದಾರೆ ನಮ್ಮ ಗ್ರಾಮ ಪಂಚಾಯತಿ ಎಲ್ಲ ಸದಸ್ಯರು ನಾವು ಒಂದು ಕುಟುಂಬವಿದ್ದAತೆ ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಆಗುವುದು ಸಹಜ ಆದರಿಂದ ನಮ್ಮ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸಗಳು ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಗಲಿ ಎಂದರು.

ಗುAತಕೋಲಮ್ಮನಹಳ್ಳಿಯ ಮುಖಂಡ ಜಯಣ್ಣ ಮಾತನಾಡಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಕಳೆದ 30 ತಿಂಗಳ ಕಾಲ ಉತ್ತಮ ಆಡಳಿತವನ್ನು ನೀಡಿದ್ದಾರೆ ಅವರ ಕಾರ್ಯ ಶ್ಲಾಘನೀಯ ಈಗಾಗಲೇ ಅಧ್ಯಕ್ಷರ ಅವಧಿ ಮುಗಿಯುವ ಹಂತದಲ್ಲಿ ಇರುವುದರಿಂದ ಮುಂಬರುವ ಅಧ್ಯಕ್ಷರು ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ಆಗಲು ಎಲ್ಲಾ ಸದಸ್ಯರ ಸಹಕಾರ ಬೆಂಬಲ ಇರಲಿ ಎಂದರು.

ಇನ್ನೂ ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ ಶಂಕರ್ ಸ್ವಾಮಿ, ಹಾಗೂ ಉಪಾಧ್ಯಕ್ಷೆ ಕೆಸಿ.ರಾಧಾ ರವರಿಗೆ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ ಶಂಕರಸ್ವಾಮಿ, ಉಪಾಧ್ಯಕ್ಷೆ ಕೆಸಿ.ರಾಧ, ಎಲ್ಲಾ ಸದಸ್ಯರು, ಗ್ರಾಮ ಪಂಚಾಯತಿ ಪಿಡಿಒ ಮೋಹನ್ ದಾಸ್,ಇತರರು ಇದ್ದರು.

ರಾದ ಸುಮಿತ್ರಮ್ಮ, ಕೆ ಜಿ ತಿಪ್ಪೇಸ್ವಾಮಿ, ಪಟೀಲ್ ಗೋವಿಂದ ನಾಯಕ, ಸಣ್ಣ ಪಾಲಯ್ಯ ,ಮಂಜಮ್ಮ, ಬಿ ಗುಂಡಪ್ಪ , ಸಿದ್ದಲಿಂಗಮ್ಮ, ಬಿ ಅನಿತಮ್ಮ, ಬೋರಮ್ಮ, ಪಿ ಟಿ ನಾಗರಾಜ್, ಬಸಮ್ಮ , ಪಡ್ಲ ಬೋರಯ್ಯ, ಪಾಪಮ್ಮ, ಓ ವಿ ಸಣ್ಣೋಬಯ್ಯ, ಜೆ ಪಿ ಪ್ರಿಯಾಂಕ, ಮಾರಕ್ಕ, ಗಾದ್ರೇಪ್ಪ, ಶೇಖರ್ ಗೌಡ, ಗ್ರಾಮದ ಯುವ ಮುಖಂಡರಾದ ಎ ಪಿ ರೇವಣ್ಣ, ಪ್ರಕಾಶ್, ಗುಂತಕೋಲಮ್ಮನಹಳ್ಳಿ ಜಯಣ್ಣ, ಗ್ರಾಮ ಪಂಚಾಯತಿ ಪಿಡಿಒ ಮೋಹನ್ ದಾಸ್, ಸಿಬ್ಬಂದಿಗಳಾದ ಎಂ ಪಿ ಈಶ್ವರಪ್ಪ ಡಾಟಾ ಆಪರೇಟರ್, ಬಿಲ್ ಕಲೆಕ್ಟರ್ ಎ. ಚಂದ್ರಶೇಖರ್, ಗುಂತುಕೋಲಮ್ಮನಹಳ್ಳಿ
ಎಸ್ ಶಿವತಿಪ್ಪೇಸ್ವಾಮಿ, ಕಾರ್ಯದರ್ಶಿ ಗುರುಸ್ವಾಮಿ, ಚೌಳಕೆರೆ ಶಿವರಾಜ್ , ಸೇರಿದಂತೆ ಮುಂತಾದವರು ಇದ್ದರು

Namma Challakere Local News
error: Content is protected !!