ಚಳ್ಳಕೆರೆ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಚಿತ್ರದುರ್ಗ ಜಿಲ್ಲಾ ಸಂಚಾಲಕ ಮಹೇಶ್ ನಗರಂಗೆರೆ ರವರು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದಕ್ಕೆ ಚಳ್ಳಕೆರೆ ತಾಲೂಕು ಸಮಿತಿಯಿಂದ ಸನ್ಮಾನ ಮಾಡಿದರು.
ಇನ್ನೂ ಚಳ್ಳಕೆರೆ ತಾಲೂಕು ಅಧ್ಯಕ್ಷರಾದ ಮಾರುತಿ ಮಾತನಾಡಿ, 2023 ಸಾವರ್ತಿಕ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಯಾದ ಹಾಗೂ ಕಾರ್ಯದರ್ಶಿಯಾದ ಭೋಜರಾಜ.ಸಿ ರವರಿಗೆ ಪ್ರಾಮಾಣಿಕವಾಗಿ ಮತದಾನ ಮಾಡಿರುವ ಮತದಾರರಿಗೆ ಅಭಿನಂದನೆಗಳನ್ನು ಸಲ್ಲಿಸಿ ಹಾಗೂ ಮುಂಬರುವ ತಾಲೂಕ್ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸ್ಪರ್ಧೆ ಮಾಡಲು ಹಾಗೂ ಆಸಕ್ತಿ ಉಳ್ಳವರು ಸಂಪರ್ಕಿಸಿ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಸ್ಪರ್ಧೆ ಮಾಡಿ ಎಂದು ಕೋರಿದ್ದಾರೆ.
ಈ ಸಮಾರಂಭ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷರಾದ ಮಾರುತಿ, ಕಾರ್ಯದರ್ಶಿ ಭೋಜರಾಜ ಸಿ, ತಾಲೂಕು ಯುವ ಘಟಕ ಅಧ್ಯಕ್ಷ ಬಾಲರಾಜು, ವಿದ್ಯಾರ್ಥಿ ಘಟಕದ ಅಧ್ಯಕ್ಷ ಮನೋಹರ್‌ರೆಡ್ಡಿ, ಶಿವರಾಮ ಎನ್. ದೇವರಹಳ್ಳಿ ದಾನವೇಂದ್ರ ಮಣಿಕಂಠ ಮತ್ತು ಇತರರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!