ಚಳ್ಳಕೆರೆ : ರಾಜ್ಯ ಸರಕಾರದ ಐದು ಗ್ಯಾರಂಟಿ ಗಳಲ್ಲಿ ಮೊದಲ ಹಂತವಾಗಿ ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಸೇವೆ ನೀಡುವ ಶಕ್ತಿ ಯೋಜನೆ ನಿನ್ನೆ ವಿಧಾನ ಸೌಧ ಮುಂಬಾಗದಲ್ಲಿ ಚಾಲನೆ ದೊರೆಯಿತು
ಅದರಂತೆ ಇಂದು ಚಳ್ಳಕೆರೆ ತಾಲೂಕಿನ ಘಟಪರ್ತಿ ಗ್ರಾಮದಲ್ಲಿ ಮಹಿಳೆಯರು ಕಾಂಗ್ರೇಸ್ ಸರಕಾರದ ಉಚಿತ ಬಸ್ ಸೇವೆಗೆ ಬಹಳ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ರವಿಕುಮಾರ್ ಮಾತನಾಡಿ, ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ “ಶಕ್ತಿ” ಯೋಜನೆ ರಾಜ್ಯ ಸರ್ಕಾರದ ಬಹುದೊಡ್ಡ ಯೋಜನೆಯಾಗಿದೆ. ಚುನಾವಣೆ ಪೂರ್ವದಲ್ಲಿ ನೀಡಿದ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಭಾನುವಾರದಂದು ಚಾಲನೆ ನೀಡಲಾಗಿದ್ದು, ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರು ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದ ಅವರು, ಶಕ್ತಿ ಯೋಜನೆ ಮೂಲಕ ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಒತ್ತು ನೀಡಿದೆ ಎಂದು ಹೇಳಿದರು.

ಗ್ರಾಪಂ.ಸದಸ್ಯ ನಿರಂಜನಗೌಡ ಮಾತನಾಡಿ ಏಕಕಾಲದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಶಕ್ತಿ ಯೋಜನೆ ಆರಂಭ ಮಾಡಲಾಗಿದೆ, ಮಹೀಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಸರ್ಕಾರದ ದಿಟ್ಟ ಹೆಜ್ಜೆಯಾಗಿದೆ. ಇದು ಮಹಿಳೆಯರ ಶಿಕ್ಷಣ, ಉದ್ಯೋಗಗಳಲ್ಲಿ ಸಬಲೀಕರಣ ಹೊಂದಲು ಅವಕಾಶ ನೀಡುತ್ತದೆ. ಮಹಿಳಾ ಹಾಗೂ ವಿದ್ಯಾರ್ಥಿಗಳಿಗೆ ಓಡಾಟಕ್ಕೆ ಶಿಕ್ಷಣದ ಪ್ರಗತಿಗೆ ಸಹಾಯಕವಾಗಿದೆ. ಮಹಿಳೆಯರ ಸಾಮಾಜಿಕ ಸಂಪರ್ಕಕ್ಕೆ ಶಕ್ತಿ ಯೋಜನೆ ಪೂರಕವಾಗಿದ್ದು, ಗ್ರಾಮೀಣ ಭಾಗದ ಸಮಸ್ತ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಇದನ್ನು ಕುಟುಂಬ, ಸಮಾಜ ಹಾಗೂ ದೇಶವನ್ನು ಸಧೃಡವಾಗಿಸಲು ಬಳಸಿಕೊಳ್ಳಬೇಕು ಎಂದರು.

ಇನ್ನೂ ಗ್ರಾಮಿಣ ಭಾಗದ ಮಹಿಳೆಯರು ಈ ಮಹಿಳಾ ಶಕ್ತಿ ಯೋಜನೆ ಬಗ್ಗೆ ಸಂತಸದ ಮಾತುಗಳನ್ನು ಹಾಡುತ್ತಾ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಇನ್ನೂ ಇದಕ್ಕೆ ಗ್ರಾಮ ಪÀಂಚಾಯಿತಿ ಸದಸ್ಯ ಕೆ.ಬಿ.ರವಿಕುಮಾರ್, ನಿರಂಜನಗೌಡ, ಮಾಜಿ ಅಧ್ಯಕ್ಷಯಲ್ಲಪ್ಪ, ಬೋರವೆಲ್ ರಾಜಣ್ಣ, ಹೊನ್ನೂರು ರವಿಕುಮಾರ್, ದಿನೇಶ್, ಸದ್ದಾಮ್, ಪರಮೇಶ್ವರ ರೆಡ್ಡಿ, ಮಂಜುನಾಥ್, ರಾಜಣ್ಣ ಜಿ. ಊರಿನ ಮುಖಂಡರು ಪಾಲ್ಗೊಂಡಿದ್ದರು.

Namma Challakere Local News
error: Content is protected !!