ಚಳ್ಳಕೆರೆ : ಗ್ರಾಮಗಳ ಸರ್ವತೋಮುಖ ಅಭಿವೃದ್ದಿಯೇ ಸರಕಾರದ ಮುಖ್ಯ ಧ್ಯೇಯ ಆದ್ದರಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳ ಪಾತ್ರ ಕೂಡ ಪ್ರಮುಖವಾದದ್ದು,
ಅದರಂತೆ ಇಂದು ಆನ್‌ಲೈನ್‌ನಲ್ಲಿ ವಿಡಿಯೋ ಕಾನ್ಸ÷್ಪರೆನ್ಸ್ ಮೀಟಿಂಗ್ ಮಾಡುವ ಮೂಲಕ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್ ತಾಲೂಕಿನ ಎಲ್ಲಾ ಪಿಡಿಓಗಳಿಗೆ ಸೂಚನೆ ನೀಡಿದ್ದಾರೆ.
ಗ್ರಾಮಗಳಲ್ಲಿ ನೈರ್ಮಲ್ಯಕರಣ, ಸ್ವಚ್ಚತೆ, ಕುಡಿಯುವ ನೀರು, ಪಂಚರತ್ನ 2, ಆಸ್ತಿ ಸಮೀಕ್ಷೆ, ದೂರದೃಷ್ಠಿ, ಈಗೇ ಸರಕಾರದ ಮಹತ್ವದ ಯೋಜನೆಗಳನ್ನು ಗ್ರಾಮಗಳಿಗೆ ತಲುಪಿಸುವ ಮೂಲಕ ಮಂಚೂಣಿಯಲ್ಲಿರಬೇಕು ಎಂದಿದ್ದಾರೆ.
ಕಚೇರಿ ಸಿಬ್ಬಂದಿಗಳ ವೇತನವನ್ನು ಪಂಚತAತ್ರ ಹಾಜರಾತಿಯ ಆದಾರದ ಮೇಲೆ ಪಾವತಿ ಮಾಡಬೇಕು. ಇನ್ನು ಮುಂದೆ ಕರ್ತವ್ಯದ ವೇಳೆ ಎಲ್ಲೋ ಇದ್ದು ಕಚೇರಿಯಲ್ಲಿದ್ದೇನೆ ಎಂದು ಸುಳ್ಳು ಹೇಳುವಂತೆ ಕರ್ತವ್ಯದ ಅವಧಿಯಲ್ಲಿ ಮೊಬೈಲ್ ಲೊಕೇಶನ್ ದಾಖಲಿಸಲ್ಪಡುತ್ತದೆ.
ಪಂಚತAತ್ರ ಅರಿಯರ್ಸ್ ಬಾಕಿ ಎರಡು ದಿನದಲ್ಲಿ ಮುಕ್ತಾಯ ಮಾಡಬೇಕು ದಿನ ನಿತ್ಯವದ ಪಂಚಾಯಿತಿಯ ಮಾಹಿತಿಯನ್ನು ಅಪ್ಲೋಡ್ ಮಾಡಬೇಕು ಆಸ್ತಿ ಸಮೀಕ್ಷೆ ಮಾಸಾಂತ್ಯಕ್ಕೆ ಪೂರ್ಣಗೊಳಿಸುವುದು.
ಬೀದಿ ದೀಪ, ಸ್ವಚ್ಚತೆ. ಕುಡಿಯುವ ನೀರಿನ ಪೂರೈಕೆ ಸಮಸ್ಯೆಯಾಗದಂತೆ ನಿಗಾವಹಿಸ ಬೇಕು, ಪ್ರತಿ ಗ್ರಾಮದಲ್ಲಿರುವ ನೀರಿನ ಟ್ಯಾಂಕ್-ತೊಟ್ಟಿ ಸ್ವಚ್ಛಗೊಳಿಸುವುದು. 14 ನೇ ಹಣಕಾಸು ಬಾಕಿ ಮೊತ್ತ ಪಾವತಿಸಿ, ದಾಖಲೆ ನೀಡಬೇಕು ಎಂದಿದ್ದಾರೆ.

Namma Challakere Local News
error: Content is protected !!