ಎಸ್ ಆರ್ ಎಸ್ ಹೆರಿಟೇಜ್ ಶಾಲೆಯಲ್ಲಿ ಪರಿಸರ ದಿನಾಚರಣೆ

ಚಳ್ಳಕೆರೆ ನಗರದಲ್ಲಿ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಅಗ್ರಿ ಕ್ಲಬ್ ನ ಸದಸ್ಯರಾದ 5ನೇ ತರಗತಿ ವಿದ್ಯಾರ್ಥಿಗಳು ಶಿಕ್ಷಕರಾದ ದೇವರಾಜ್ ಮತ್ತು ಚಳ್ಳಕೆರೆಯ ಪ್ರಗತಿಪರ ರೈತರಾದ ಗುರುನಾಥ್ ಅವರ ಸಹಕಾರದೊಡನೆ ಶಾಲಾ ಆವರಣದಲ್ಲಿ ತರಕಾರಿ ತೋಟವನ್ನು ಆರಂಭಿಸಿದರು.
ನಂತರ ಬೇವು, ಮಾವು, ಹಲಸು ಹುಣಸೆ ಹೀಗೆ ವಿವಿಧ ಬೀಜಗಳನ್ನು ಬಳಸಿ ಬೀಜದ ಉಂಡೆಗಳನ್ನು ತಯಾರಿಸಿ. ಬೀಜದ ಉಂಡೆಗಳನ್ನು ಎಸ್ ಆರ್ ಎಸ್ ಅಗ್ರಿ ಕ್ಲಬ್ ನ ಸದಸ್ಯರು ಚಳ್ಳಕೆರೆ ಅರಣ್ಯ ವಲಯದ ರಾಜೇಶ್ ರವರ ಸಹಕಾರದೊಂದಿಗೆ
ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ನೆಟ್ಟರು. ಶಾಲೆಯ ಪ್ರಾಂಶುಪಾಲರಾದ ಬಿಎಸ್.ವಿಜಯ ಈ ಕಾರ್ಯದ ನೇತೃತ್ವವನ್ನು ವಹಿಸಿದ್ದರು.
ಈ ಕಾರ್ಯವನ್ನು ಎಸ್ ಆರ್ ಎಸ್ ಸಂಸ್ಥೆಯ ಅಧ್ಯಕ್ಷರಾದ ಬಿಎ.ಲಿಂಗಾರೆಡ್ಡಿ ಕಾರ್ಯದರ್ಶಿಗಳಾದ ಸುಜಾತ ಲಿಂಗಾರೆಡ್ಡಿ ಅರಣ್ಯವೋತ್ಸವ ಕಾರ್ಯಕ್ರಮವನ್ನು ಕುರಿತು ಶ್ಲಾಘಿಸಿದ್ದಾರೆ.

Namma Challakere Local News
error: Content is protected !!