ಎನ್ ದೇವರಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಮತ್ತು ಬಸವೇಶ್ವರ ದೇವಸ್ಥಾನದ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ವತಿಯಿಂದ ಡಿಡಿ ಚೆಕ್ ವಿತರಣೆ ತಾಲೂಕು ಯೋಜನಾಧಿಕಾರಿ ಪಿ ಎಸ್ ಅಣ್ಣಪ್ಪ

ನಾಯಕನಹಟ್ಟಿ::ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾಯಕನಹಟ್ಟಿ ಯೋಜನಾ ಕಚೇರಿ ವ್ಯಾಪ್ತಿಯ ಎನ್ ದೇವರಹಳ್ಳಿ
ಗ್ರಾಮದಲ್ಲಿ ಹೊಸದಾಗಿ ನಿರ್ಮಾಣ ಹಂತ ದಲ್ಲಿರುವ
ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಮತ್ತು ಬಸವೇಶ್ವರ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಪೂಜ್ಯರು ಮಂಜೂರು ಮಾಡಿದ 3,00,000 ಮೊತ್ತದ
ಡಿ ಡಿಯನ್ನು ತಾಲೂಕಿನ ಯೋಜನಾಧಿಕಾರಿಗಳಾದ ಅಣ್ಣಪ್ಪ ಪಿ ಎಸ್ ರವರು ವಿತರಣೆ ಮಾಡಿದರು.

ಇದೆ ವೇಳೆ ತಾಲೂಕು ಯೋಜನಾಧಿಕಾರಿ ಪಿ ಎಸ್ ಅಣ್ಣಪ್ಪ.
ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗ್ರಾಮಗಳಲ್ಲಿ ಸ್ವಸಹಾಯ ಸಂಘಗಳನ್ನು ರಚನೆ ಮಾಡಿ ಅವರಿಗೆ ಬ್ಯಾಂಕಿನ ಮುಖಾಂತರ ಆರ್ಥಿಕ ನೆರವನ್ನು ನೀಡುವುದರೊಂದಿಗೆ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದರೊಂದಿಗೆ ಅವರಿಗೆ ಸುಲಭದಲ್ಲಿ ಬ್ಯಾಂಕಿನಿಂದ ವ್ಯವಹಾರ ಮಾಡುವಂತೆ ಅನುಕೂಲವಾಗಿದೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಹಾಲಿನ ಡೈರಿಗಳಿಗೆ.
ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ನೇಮಕ ಮಾಡುವ ಕುರಿತು ಮಕ್ಕಳ ಉನ್ನತ ವೃತ್ತಿಪರ ಶಿಕ್ಷಣಗಳಿಗೆ ಯೋಜನೆಯಿಂದ ದೊರೆಯುವ ಸುಜ್ಞಾನ ನಿಧಿ ಶಿಷ್ಯವೇತನ ಹಾಗೂ ಜನ ಮಂಗಲ ಕಾರ್ಯಕ್ರಮದಡಿಯಲ್ಲಿ ವಿಕಲಚೇತನರಿಗೆ ದೊರೆಯುವ ಸೌಲಭ್ಯಗಳ ಕುರಿತು ಇನ್ನಿತರ ಸಮಾಜಮುಖಿ ಕಾರ್ಯಕ್ರಮಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನ ಮಾಡುತ್ತಿರುವ ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಮೇಲ್ವಿಚಾರಕಿ ಸೌಮ್ಯರಾಣಿ ದೇವಸ್ಥಾನ ದ ಸಮಿತಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಟಿ ತಿಪ್ಪೇಸ್ವಾಮಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್ ನಾಗರಾಜ್, ಕೆ ಟಿ ಚಂದ್ರಣ್ಣ, ಕೆ ಎಸ್ ಮಲ್ಲಣ್ಣ, ಎಂ ಟಿ ಶಂಕ್ರಣ್ಣ, ಕೆ ಲೋಕೇಶ್, ಸಿದ್ದಯ್ಯ, ಹಾಗೂ ಇನ್ನಿತರ ಊರಿನ ಗಣ್ಯರು ಪ್ರಗತಿ ಬಂದು ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಸೇವಾ ಪ್ರತಿನಿಧಿಗಳು ಸದಸ್ಯರು ಭಾಗವಹಿಸಿದ್ದರು*

Namma Challakere Local News
error: Content is protected !!