ಚಳ್ಳಕೆರೆ : ಮನುಷ್ಯನ ಸ್ವಾರ್ಥಕ್ಕೆ ನಾಶವಾಗುತ್ತಿರುವ ಅರಣ್ಯ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ರಾಜಯೋಗ ವಿದ್ಯಾಶ್ರಮದ ದೇನಾಭಗತ್ ಸ್ವಾಮೀಜಿ ಹೇಳಿದರು.
ಚಳ್ಳಕೆರೆ ತಾಲೂಕಿನ ರೇಖಲಗೆರೆ ಸಮೀಪದ ಅರಣ್ಯ ಭೂ ಪ್ರದೇಶದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಡೆಡ್ಯೂಸ್ ಟೆಕ್ನಾಲಜಿ ಸಹಯೋಗದಲ್ಲಿ 10 ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ರಾಜಯೋಗ ವಿದ್ಯಾಶ್ರಮದ ದೇನಾಭಗತ್ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿದರು.
ಇನ್ನೂ ಕಾರ್ಯಕ್ರಮ ಕುರಿತು ಮಾತನಾಡಿದ ಅವರು ಗಿಡಮರಗಳ ನಾಶ ಮಾಡುವುದರಿಂದ ಬರಗಾಲದ ಪರಿಸ್ಥಿತಿ ಕಾಣುತ್ತೇವೆ. ಮಳೆಯ ಕೊರತೆ ಎದುರಿಸುತ್ತ ಪ್ರಾದೇಶಿಕವಾಗಿ ಬಡತನದ ಕೂಪವಾಗುತ್ತದೆ. ವನ್ಯ ಜೀವ ಸಂಕುಲ ನಾಶವಾಗುತ್ತವೆ. ಸಮೃದ್ದ ಸಮಾಜ ಬೆಳವಣಿಗೆಗೆ ಪರಿಸರ ಉಳಿಸಬೇಕಿದೆ. ಪ್ರತಿಯೊಬ್ಬ ಪ್ರಜೆಯು ಅರಣ್ಯ ಸಂಪತ್ತು ರಕ್ಷಣೆಗೆ ಜಾಗೃತಿ ವಹಿಸುವುದು ತುರ್ತು ಕೆಲಸವಾಗಿದೆ ಎಂದು ಹೇಳಿದರು.

ಸಾಹಿತಿ ಹಾಗೂ ಕವಿ ಕೊರಲಕುಂಟೆ ಜೆ ತಿಪ್ಪೇಸ್ವಾಮಿ ಮಾತನಾಡಿ ಆಧುನಿಕ ಯುಗದಲ್ಲಿ ನಾವಿದ್ದು ಮನುಷ್ಯನಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತಿದೆ. ಇದನ್ನು ಅರಿತು ವಿದ್ಯಾರ್ಥಿಗಳು ಹಾಗೂ ಪ್ರತಿಯೊಬ್ಬರೂ ಹೆಚ್ಚು ಹೆಚ್ಚು ಮರಗಿಡಗಳನ್ನ ಬೆಳೆಸುವಂಥಾಗಬೇಕು ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದರು.

ಡೆಡ್ಯೂಸ್ ಟೆಕ್ನಾಲಜಿ ಸಂಸ್ಥೆಯ ಡಿಜಿಎಂ ಜಿ.ವಿ. ಪ್ರಭಾಕರರೆಡ್ಡಿ ಮಾತನಾಡಿ, 150 ಎಕರೆ ಅರಣ್ಯ ಪ್ರದೇಶದಲ್ಲಿ ಗಿಡ ನೆಡೆಸುವ ಉದ್ದೇಶ ಇದೆ. ಈಗಾಗಲೇ ಸಾವಿರಾರು ಗಿಡಗಳನ್ನು ನಡೆಸಿ ಪೋಷಣೆ ಮಾಡಲಾಗುತ್ತದೆ. ನೀರಿನ ಕೊರತೆಯಲ್ಲಿ ಗಿಡಗಳ ರಕ್ಷಣೆ ಒಂದು ಸವಾಲಾಗಿದೆ. ಎರಡುಪೋಷಣೆ ಕ್ರಮವಾಗಿ ಬೋರ್‌ವೆಲ್‌ಗಳನ್ನು ಕೊರೆಸಲಾಗಿದ್ದು, ಜತೆಗೆ ಟ್ಯಾಂಕರ್ ನೆರವಿನಿಂದಲೂ ಗಿಡಗಳ ಪೋಷಣೆಕ್ರಮವಾಗಿ ನಡೆಯುತ್ತಿದೆ. ಈ ಮಳೆಗಾಲ ಅವಧಿಯಲ್ಲಿ ಸುಮಾರು 10 ಸಾವಿರ ಗಿಡ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಮಣ್ಣಿನ ಫಲವತ್ತತೆಗೆಅನುಗುಣವಾಗಿ ಹೊನ್ನೆ, ಹೊಂಗೆ, ಬೇವು, ಮಹಗಾನಿ, ನೇರಳೆ, ಕಾಡುನಲ್ಲಿ ವಿವಿಧ ರೀತಿಯ ಗಿಡಗಳನ್ನುಮನವಿಯ ನಡೆಸಲಾಗುತ್ತಿದೆ. ಗಿಡಗಳ ಬೆಳೆಸಲು ಸ್ಥಳೀಯರ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದರು.
ಪರಿಸರ ಪ್ರೇಮಿ ತಳುಕಿನ ಟಿ.ಜಿ. ಓಬಣ್ಣ ಮಾತನಾಡಿ, ಪ್ರತಿಯೊಬ್ಬರಲ್ಲೂ ಪರಿಸರ ಕಾಳಜಿ ಬೆಳೆಯಬೇಕು. ತನಗೆ ಮಾಸಿಕವಾಗಿ ಬರುತ್ತಿದ್ದ ವಯೋವೃದ್ದ ಪಿಂಚಣಿ 800ರೂ ಬಳಸಿಕೊಂಡು ತಳುಕು ಗ್ರಾಮದ ರೈಲ್ವೆ ನಿಲ್ದಾಣ ಸಮೀಪ 300 ಬೇವು, 300 ಹೊಂಗೆ ಗಿಡಗಳನ್ನು ಬೆಳೆಸಲಾಗಿದೆ. ಪ್ರಸ್ತುತ ಸಮೃದ್ದವಾಗಿ ಬೆಳೆದು ಇತರರಿಗೆ ನೆರಳಾಗಿರುವುದು ನನಗೆ ಜೀವನದ ಸಾರ್ಥಕತೆ ಅನಿಸುತ್ತದೆ ಎಂದು ಹೇಳಿಕೊಂಡರು.

ನಾಯಕನಹಟ್ಟಿ ಗ್ರಾಮದ ಎಚ್‌ಎಂಟಿ ಪದವಿ ಪೂರ್ವ ಕಾಲೇಜು ಮತ್ತು ರೇಖಲಗೆರೆ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಗಿಡಗಳ ನೆಡಲು ನರವು ನೀಡಿದರು.
ಸಂಸ್ಥೆಯ ಜಿ.ಬಿ. ವಿಶ್ವನಾಥ, ವಿ.ವಿ. ಮನೋಹರ, ಸಣ್ಣ ಬೋರಯ್ಯ, ಬೊಮ್ಮಯ್ಯ, ರಮೇಶ್‌ನಾಯಕ, ಮಂಜಣ್ಣ ಮತ್ತಿತರರು ಇದ್ದರು.

Namma Challakere Local News
error: Content is protected !!