ಚಳ್ಳಕೆರೆ : ಮಳೆಯ ಸಂದರ್ಭದಲ್ಲಿ ಗುಡುಗು ಸಿಡಿಲು ಬಗ್ಗೆ ಎಚ್ಚರಿಕೆ ವಹಿಸಬೇಕು ಪ್ರತಿಯೊಬ್ಬರ ಮೇಲೆ ಅವಲಂಬಿತ ಕುಟುಂಬವಿರುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಕಳೆದ ದಿನಗಳಲ್ಲಿ ಬಂದAತಹ ಮಳೆಯ ಸಮಯದಲ್ಲಿ ಚಿಕ್ಕಗೊಂಡನಹಳ್ಳಿ ಗ್ರಾಮದಲ್ಲಿ ಭಾಗ್ಯಮ್ಮ ಕೋಂ ಯರಿಸ್ವಾಮಿ ಇವರು ಸಿಡಿಲು ಬಡಿದು ಮೃತ ಪಟ್ಟಿದ್ದು ಸದರಿ ಸಂತ್ರಸ್ಮರ ಕುಟುಂಬಕ್ಕೆ ಸರ್ಕಾರದಿಂದ ಬಂದAತಹ ರೂ.5 ಲಕ್ಷಗಳ ಪರಿಹಾರ ಮೊತ್ತವನ್ನು ಮತ್ತು ಪೇಲೂರಹಟ್ಟಿ ಮಜಿರೆ ಹೊಸಕಾಟಪ್ಪನಹಟ್ಟಿ ಗ್ರಾಮದಲ್ಲಿ ಚಂದ್ರಣ ಬಿನ್ ಕರಡಿ ಬೋರಯ ಇವರಿಗೆ ಸೇರಿದ 5 ಕುರಿ ಹಾಗೂ 1 ಮೇಕೆಯು ಸಿಡಿಲು ಬಡಿದು ಮೃತ ಪಟ್ಟಿದ್ದು, ಸದರಿ ಕುರಿಗಳ ಮಾಲಿಕರಿಗೆ ಸರ್ಕಾರದಿದ ಬಂದAತಹ ರೂ.24,000/- ಗಳ ಪರಿಹಾರ ಮೊತ್ತವನ್ನು ಫಲಾನುಭವಿಗಳಿಗೆ ಶಾಸಕರು ವಿತರಿಸಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ತಾಲೂಕು ದಂಡಾಧಿಕಾರಿಗಳಾದ ನಾಗವೇಣಿ, ಕಂದಾಯ ನಿರೀಕ್ಷಕರಾದ ಎಂ.ಎನ್ ಸ್ವಾಮಿ ಮತ್ತು ತಾಲೂಕು ಕಚೇರಿ ಅಧಿಕಾರಿಗಳು ಹಾಜರಿದ್ದರು.