ಚಳ್ಳಕೆರೆ : ತಾಲೂಕಿನಲ್ಲಿ ನಿಮಗೆ ಕೆಲಸ ಮಾಡಲು ಇಷ್ಟ ವಿಲ್ಲದಿದ್ದರೆ ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ, ನಾನೇ ಬೇಕಿದ್ದರೆ ನಿಮ್ಮ ಮೇಲಾಧಿಕಾರಿಗಳ ಬಳಿ ಮಾತನಾಡಿ ನಿಮ್ಮಗೆ ವರ್ಗಾವಣೆ ಕೊಡಿಸುತ್ತೆನೆ ಎಂದು ನೂತನ ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳ ಮೊದಲ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಹೌದು ಈ ಸನ್ನಿವೇಶ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರೀಶಿಲನ ಸಭೆಯಲ್ಲಿ ಲ್ಯಾಂಡ್‌ಆರ್ಮಿ, ಹಾಗು ನಿರ್ಮಿತಿ ಕೇಂದ್ರದ ಅಧಿಕಾರಿ ದೇವರಾಜ್ ಹಾಗೂ ಸಿದ್ದೇಶ ರವರ ಮೇಲೆ ಗರಂ ಹಾದ ಶಾಸಕರು ನಗರದಲ್ಲಿ ಮಕ್ಕಳಿಗೆ ವಿದ್ಯಾಕೇಂದ್ರವಾದ ಬಿಎಂಜಿಹೆಚ್‌ಎಸ್ ಪ್ರೌಢಶಾಲೆ ಕಟ್ಟಡ ಯಾವ ಹಂತದಲ್ಲಿ ಇದೆ ಎಂಬುದು ಒಬ್ಬರಿಗೂ ಮಾಹಿತಿ ಇಲ್ಲದೆ ನಿಮಗೆ ಬೇಕಾದ ರೀತಿಯಲ್ಲಿ ಕಾಮಗಾರಿ ಮಾಡುತ್ತಿರಿ, ಇನ್ನೂ ವಾಲ್ಮೀಕಿ ಭವನದ ಕಂಪೌಡ ಗೊಡೆ ನಿರ್ಮಿಸದೆ ನೀವು ದುಬಾರಿ ವಸ್ತುಗಳು ಮೊದಲಿಗೆ ಹಾಕಿದರೆ ಯಾರು ಹೊಣೆ ನಾನು ಹೇಳಿದ್ದು ಒಂದು ನೀವು ಮಾಡಿದ್ದು ಇನ್ನೊಂದು ಎಂದು ಗರಂ ಹಾದರು.
ಇನ್ನೂ ತಾಲ್ಲೂಕಿನ ಸಾರ್ವಜನಿರಿಗೆ ಅಗತ್ಯವಾದ ಶುದ್ದ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೊಗಿದ್ದು ಇದರ ಬಗ್ಗೆ ಮಾಹಿತಿ ನೀಡಿ ಎಂದು ಶಾಸಕರು ಕೇಳಿದ ತರುವಾಯ ಅಧಿಕಾರಿ ತಿಪ್ಪೆಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಸುಮಾರು ಮೂವತ್ತೈದು ಶುದ್ಧ ಕುಡಿಯುವ ನೀರಿನ ಘಟಕಗಳು ಅದಗೆಟ್ಟು ಹೋಗಿವೆ ಇವುಗಳನ್ನು ಇನ್ನು ಒಂದು ವಾರದೊಳಗೆ ರೀಪೆರಿ ಮಾಡಿಸುತ್ತೆನೆ ಎಂದು ಭರವಸೆ ನೀಡಿದರು.
ಒಂದು ಊರಿಂದ ಇನ್ನೊಂದು ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸೀಮಿ ಜಾಲಿ ಕಳ್ಳೆಯಿಂದ ಮುಚ್ಚಿಹೊಗಿವೆ ಆದ್ದರಿಂದ ಜಂಗಲ್ ಕಟ್ಟಿಗೆ ನೈರ್ಮಲ್ಯಕರಣ ಯೋಜನೆಯಲ್ಲಿ ನಮ್ಮ ರಸ್ತೆ ನಮ್ಮ ಹೊಲ ಬಗ್ಗೆ ಗಮನಹರಿಸಿ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು.
ಇನ್ನು ತಾಲೂಕಿನಲ್ಲಿ ಕಳೆದ ಬಾರಿ ನಡೆದ ಹಾಗೆ ಯಾರೋ ಬ್ಲಾಕ್ ಮೇಲ್ ಅಥವಾ ಒತ್ತಡಕ್ಕೆ ಮಣಿದು ಸ್ಮಶಾನ. ವಸತಿ .ರೈತರ ಹೊಲಗಳಿಗೆ ಹೋಗುವ ರಸ್ತೆ ಸೇರಿದಂತೆ ಬಾಕಿ ಉಳಿಸಿಕೊಂಡು ಅಧಿಕಾರಿಗಳು ಎಚ್ಚರದಿಂದ ಸಾರ್ವಜನಿಕರಿಗೆ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಕಡಕ್ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಅಲೆಮಾರಿ ವಸತಿ ಫಲಾನುಭವಿಗಳಿಗೆ ನಿವೇನದ ಕೊರತೆಯಿಂದ ಮನೆಗಳ ನಿರ್ಮಾಣಕ್ಕೆ ವಿಳಂಭವಾಗುತ್ತಿದ್ದು ಸರಕಾರಿ ಗೋಮಾಳದಲ್ಲಿ ಅಂತಹ ಫಲಾನುಭವಿಗಳನ್ನು ಗುರುತಿಸಿ ಆಶ್ರಯ ವಸತಿ ಯೋಜನೆಯಲ್ಲಿ ನಿವೇಶನ ಮಂಜುರಾತಿ ಮಾಡಿಸಬೇಕು. ಗ್ರಾಪಂ ವ್ಯಾಪ್ತಿಯ ನಿವೇಶ ಹಾಗೂ ವಸತಿ ರಹಿತರ ಪಟ್ಟಿಯಲ್ಲಿರುವವರು ಆಶ್ರಯ ಬಡವಾಣೆ ನಿವೇನ ಹಂಚಿಗೆ ಪ್ರಸ್ತಾವನೆ ಕಳಿಸಿದ್ದು ಅವುಗಳನ್ನು ಕೂಡಲೆ ಮಂಜುರಾತಿ ಮಾಡಿಸುವ ಜವಾಬ್ದಾರಿ ನಿಮ್ಮ ಕಂದಾಯ ಇಲಾಖೆ ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಫಲಾನುಭವಿಗಳ ಪಟ್ಟಿಗಳ ಕಡತಗಳನ್ನು ಕಚೇರಿಯಲ್ಲಿಟ್ಟು ಕೂರದೆ ಸಂಬAಧಪಟ್ಟಿ ಇಲಾಖೆಗಳಿಗೆ ಕಡತಗಳನ್ನು ತೆಗೆದುಕೊಂಡು ಹೋಗಿ ಮಂಜುರಾತಿ ಮಾಡಿ ಬೇಕು ಎಂದರು.
ಇನ್ನು ಸಬ್ ರಿಜಿಸ್ಟರ್ ಕಛೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಅವರಿಂದ ಬಂದರೆ ಮಾತ್ರ ಕೆಲಸವಾಗುತ್ತವೆ ಎಂಬ ಆರೋಗಳು ಕೇಳಿ ಬರುತ್ತಿದ್ದು ಇಂದಿನಿAದ ಸರಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು ಹಾಗೇ ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿ ಕರಿವಾಣ ಹಾಕಿ ಎಂದು ಮ್ಯಾನೇಜರ್ ನಿಂಗರಾಜ್ ಗೆ ಸೂಚಿಸಿದರು.
ಸ್ಮಶಾನ, ಆಶ್ರಯ ಸೇರಿದಂತೆ ಸಾರ್ವಜನಿಕ ಉಪಯೋಗಕ್ಕೆ ಮೀಸಲಿಟ್ಟ ಸರಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿದವರ ವಿರುದ್ದ ನಿದ್ರಾಕ್ಷೀಣವಾಗಿ ತೆರವುಗಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರೆ,
ತಾಲೂಕಿನಲ್ಲಿ ರೈತರಿಗೆ ನೀರುವ ಬೀಜ ಗೊಬ್ಬರ ಬಗ್ಗೆ ಕೃಷಿ ಅದಿಕಾರಿ ಜೆ.ಅಶೋಕ್, ಹಾಗೂ ತೋಟಗಾರಿಕೆ ಅಧಿಖಾರಿ ವಿರುಪಾಕ್ಷಕ್ಕೆ ಕ್ರಮ ವಹಿಸಬೇಕು, ಮಳೆ ಬೀಳುವ ಲಕ್ಷಣಗಳಿದ್ದು ರೈತರಿಗೆ ಅಗತ್ಯ ಬೀಜ, ಗೊಬ್ಬರ ದಾಸ್ತಾನು ಮಾಡ ಬೇಕು , ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಬೆಳೆ ನಷ್ಟದ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ನೀಡುವ ಮೂಲಕ ರೈತರಿಗೆ ಕೂಡಲೆ ಪರಿಹಾರ ದೊರಕಿಸಿ ಕೊಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ತಹಶೀಲ್ದಾರ್ ರೆಹಾನ್ ಪಾಷ, ತಾಪಂ ಸಹಾಯಕ ನಿರ್ದೇಕ ಸಂಪತ್ ಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.