ಚಳ್ಳಕೆರೆ : ಕಲ್ಲಿನ ಕೋಟೆ ಚಿತ್ರದುರ್ಗ ಜಿಲ್ಲೆ ಈಡೀ ಮಧ್ಯಕರ್ನಾಟಕದ ಅವಿಭಾಜ್ಯ ಅಂಗವಾಗಿ ಹೊರಹೊಮ್ಮಿದೆ ಆದರೆ ಇಂತಹ ಜಿಲ್ಲೆಗೆ ಜಿಲ್ಲಾ ಉಸ್ತೂವಾರಿ ನೇಮಕ ಮಾಡುವಲ್ಲಿ ಸರಕಾರ ಬೇರೆದೊಂದು ಜಿಲ್ಲೆಯ ಮಂತ್ರಿಯನ್ನು ನೇಮಿಸದೆ ಸ್ಥಳೀಯ ಶಾಸಕರಿಗೆ ಮಂತ್ರಿಗಿರಿ ಕೊಟ್ಟು ತಮ್ಮ ಕಲ್ಲಿನ ಕೋಟೆಗೆ ಅದಿಪತ್ಯ ವಹಿಸÀಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಕಲ್ಲಿನ ಕೋಟೆಯ ಮತದಾರರ ಅಭಿಪ್ರಾಯವಾಗಿದೆ
ಇನ್ನೂ ಅದರಂತೆ ಕಳೆದ 2018ರಲ್ಲಿ ಬಿಜೆಪಿ ಸರಕಾರ ಇದೇ ತಪ್ಪು ಮಾಡಿ ಇಂದು ತಮ್ಮ ಐದು ಕ್ಷೇತ್ರಗಳ ಸ್ಥಾನಗಳನ್ನು ಕೈ ವಶಕ್ಕೆ ನೀಡಿದೆ ಮತ್ತೆ ಕಾಂಗ್ರೇಸ್ ಸರಕಾರ ಇದೇ ತಪ್ಪು ಮಾಡದೆ ಬೇರೋಂದು ಜಿಲ್ಲೆಯ ಮಂತ್ರಿಯನ್ನು ನೇಮಿಸದೆ ಸ್ಥಳಿಯ ಶಾಸಕರಿಗೆ ಜಿಲ್ಲಾ ಉಸ್ತೂವಾರಿ ಮಂತ್ರಿ ಸ್ಥಾನ ನೀಡಬೇಕು ಎಂದು ಕ್ಷೇತ್ರದ ಜನರು ತಮ್ಮ ಹಿಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಅದರಂತೆ ಇನ್ನೂ ಕಲ್ಲಿನ ಕೋಟೆಯ ಐದು ಜನ ಶಾಸಕರು ಇಂದು ದೆಹಲಿಯತ್ತ ಮುಖ ಮಾಡಿದ್ದು ಕಾಂಗ್ರೇಸ್ ವರಿಷ್ಟರನ್ನು ಬೇಟಿ ಮಾಡಿ ತಮ್ಮ ಹಿಂಗಿತ ವ್ಯಕ್ತಪಡಿಸಿದ್ದಾರೆ.
ಇನ್ನೂ ಹಿರಿಯೂರು ಕ್ಷೇತ್ರದ ಶಾಸಕ ಡಿ.ಸುಧಾಕರ್, ಹೊಸದುರ್ಗ ಕ್ಷೇತ್ರದ ಶಾಸಕ ಬಿ.ಜಿ.ಗೋವಿಂದಪ್ಪ, ಚಳ್ಳಕೆರೆ ಕ್ಷೆತ್ರದ ಹ್ಯಾಟ್ರಿಕ್ ಶಾಸಕ ಟಿ.ರಘುಮೂರ್ತಿ, ಚಿತ್ರದುರ್ಗ ಕ್ಷೇತ್ರದ ನೂತನ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಇವರೊಟ್ಟಿಗೆ ಕೆಪಿಸಿಸಿ ಉಪಾಧ್ಯಕ್ಷರಾದ ಹೆಚ್.ಆಂಜನೇಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಿ. ಎನ್. ಚಂದ್ರಪ್ಪ ಕಲ್ಲಿನ ಕೋಟೆಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಶಾಸಕರಿಗೆ ಸಾಥ್ ನೀಡಿದ್ದಾರೆ.
ಆದರೆ ಇಲ್ಲಿನ ಒಗ್ಗಟ್ಟ÷ ನೊಡಿದ್ದರೆ ಈಡೀ ಜಿಲ್ಲೆಯಲ್ಲಿ ಯಾರಿಗಾದರೂ ಮಂತ್ರಿ ಸ್ಥಾನ ನೀಡಲಿ ಎಂಬ ಮಂತ್ರ ಜಪಿಸಿತ್ತಾ ಇರುವುದು ಇಲ್ಲಿನ ನೂತನ ಶಾಸಕರ ಒಗ್ಗಟಿನ ಪೋಟೊ ಸಾಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್ ಹಾಗಿದೆ.