ಚಳ್ಳಕೆರೆ : ಚುನಾವಣೆ ನೀತಿ ಸಂಹಿತೆ ಮೇ8 ರ ಸಂಜೆ 6 ಗಂಟೆಯಿAದ ಪ್ರಾರಂಭವಾಗಿದೆ ಆದ್ದರಿಂದ ಚುನಾವಣೆ ನೀತಿ ಸಂಹಿತೆ 144 ಸೆಕ್ಷನ್ ಕಾಯ್ದೆಯಂತೆ ಕ್ಷೇತ್ರದಲ್ಲಿ ಯಾರು ಕೂಡ ಹೊರಗಿನ ಮತದಾರರು ಹಾಗೂ ಪಕ್ಷ ಚಟುವಟಿಕೆಗಳಿಗೆ ಬಾಗಿಯಾದರು ಕ್ಷೇತ್ರದಲ್ಲಿ ಇರಬಾರದು ಎಂದು ಚುನಾವಣೆ ಅಧಿಕಾರಿ ಬಿ.ಆನಂದ್ ಹೇಳಿದರು.
ಅವರು ನಗರದ ಚುನಾವಣೆ ಅಧಿಕಾರಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮತದಾನ ಪ್ರಕ್ರಿಯೆಗೆ 48 ಗಂಟೆಗಳ ಮುಂಚೆ ಕ್ಷೇತ್ರದಲ್ಲಿ 144 ಸೆಕ್ಷನ್ ಜಾರಿಗಿದೆ ಆದ್ದರಿಂದ ರಾಜಾಕೀಯ ಪಕ್ಷದ ಮುಖಂಡರುಗಳು ತಮ್ಮ ವಾಹನಗಳನ್ನು ದ್ವಿಗೊಣಗೊಳಿಸಿ ಕೇವಲ ಪರವಾನಿಗೆ ಮೇಲೆ 2ಕ್ಕೆ ಮಾತ್ರ ಅವಕಾಶವಿದೆ
ಆದ್ದರಿಂದ ಗುಂಪು ಸೇರಿಕೊಂಡು ಪ್ರಚಾರ ಮಾಡುವಂತಿಲ್ಲ, ಮೈಕ್ ಹಿಡಿದು ಕ್ಯಾಂಪೇನ್ ಮಾಡುವಂತಿಲ್ಲ ನೀತಿ ಸಂಹಿತಿ ಉಲ್ಲಂಘನೆಯಾದರೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ದೇಶದಲ್ಲಿ ಪ್ರಥಮ ಶಾಯಿ ಬಾಟಲ್ ಸ್ಟಾಂಡ್ :
ಪ್ರತಿ ವರ್ಷ ಚುನಾವಣೆ ಆಯೋಗ ಪ್ರತಿ ಮತಗಟ್ಟೆಗಳಲ್ಲಿ ಶಾಯಿ ಹಾಕುವಾಗ ಪ್ಲಾಸ್ಟಿಕ್ ಬಟ್ಟಲದಲ್ಲಿ ಮರಳು ತುಂಬಿ ಇಡುವ ಪದ್ದತಿ ಇತ್ತು ಆದರೆ ಈ ಬಾರಿ ವಿಶೇಷವಾಗಿ ಈಡೀ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅದು ಕೂಡ ಚಳ್ಳಕೆರೆ ಕ್ಷೇತ್ರದಲ್ಲಿ ಮಾತ್ರ ಪ್ರಯೋಗಿಕವಾಗಿ ಮತದಾನ ಮಾಡುವ ಮುನ್ನ ಹಾಕು ಈ ನೀಲಿ ಶಾಯಿ ಬಾಟಲ್ ಸ್ಟಾಂಡ್ ವಿಶೇಷವಾಗಿದೆ.
ವಿಶೇಷತೆ : ಇದು ಚೌಕಾರದಲ್ಲಿ ಇದ್ದು ತೆಂಗಿನ ನಾರಿನಿಂದ ಮಾಡಲ್ಪಟ್ಟಿದೆ ಇದನ್ನು ಬಳಸಿ ಮತ್ತೆ ಬಿಸಾಡಿದರೆ ಮಣ್ಣಿನಲ್ಲಿ ಕೊಳೆಯುತ್ತೆ ಆದ್ದರಿಂದ ಇದು ಪರಿಷರ ಸ್ನೇಹಿಯಾಗಿದೆ ಇನ್ನೂ ಶಾಯಿ ಬಾಟಲ್ ಬೀಳದಂತೆ ಅದರ ಗಾತ್ರದ ರಂದ್ರ ಮಾಡಲಾಗಿದೆ ಮತ್ತು ಶಾಯಿ ಹಾಕುವ ಬ್ರೆಶ್ ಇಡಲು ಜಾಗವಿದೆ ಈಗೇ ಇದ ಈ ದೇಶದಲ್ಲಿ ವಿಸ್ತರಿಸರಣೆ ಮಾಡಲು ಮೊದಲ ಬಾರಿಗೆ ಚಳ್ಳಕೆರೆ ಕ್ಷೇತ್ರದಲ್ಲಿ ಪ್ರಯೋಗಿಕವಾಗಿ ಮತಗಟ್ಟೆಗೆ ನೀಡಲಾಗುತ್ತದೆ
ವಿಶೇಷ ಮತಗಟ್ಟೆ ಐದು :
ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಇರುವ ಕಾರಣ ಸಖಿ ಮತಗಟ್ಟೆ ತೆರಯಾಲಾಗಿದೆ, ಈ ಮತಗಟ್ಟೆಯನ್ನು ಪಿಂಕ್ ಬಣ್ಣದಿಂದ ಅಲಂಕರಿಸಿ ನಂತರ ಅಲ್ಲಿನ ಸಿಬ್ಬಂದಿ ಕೂಡ ಪಿಂಕ್ ಕಲರ್ ಬಣ್ಣ ವಸ್ತç ಧರಿಸಿರುತ್ತಾರೆ ಒಟ್ಟಾರೆ ಇದರಿಂದ ಮತಗಟ್ಟೆಗೆ ಬರುವ ಮತದಾರರಿಗೆ ಆಕರ್ಷಣೆಗೆ ಸಿದ್ದವಾಗಿದೆ.
ವಿಶೇಚ ಚೇತನ ಮತಗಟ್ಟೆ
ಕ್ಷೇತ್ರದಲ್ಲಿ ಒಂದು ಮಗಟ್ಟೆಯನ್ನು ವಿಶೇಷ ಚೇತನ ಮತಗಟ್ಟೆ ತೆರೆಯಲಾಗಿದೆ ಇಲ್ಲಿನ ಎಲ್ಲಾ ಸಿಬ್ಬಂದಿ ವಿಶೇಷ ಚೇತನರಾಗಿರುತ್ತಾರೆ ಈ ಮತಗಟ್ಟೆ ಕಡಿಮೆ ಸಂಖ್ಯೆ ಮತದಾನವಾಗುವ ಸ್ಥಳದಲ್ಲಿ ಅವರಿಗೆ ಆಧ್ಯತೆ ನೀಡಲಾಗಿದೆ,.
ಯುವ ಮತದಾರರ ಮತಗಟ್ಟೆ :
ಇಲ್ಲಿ ಯುವ ಮತದಾರರೇ ಹೆಚ್ಚಿರುವ ಕಾರಣ ಈ ಮತಗಟ್ಟೆ ಮಾಡಲಾಗಿದೆ ಇಲ್ಲಿನ ಸಿಬ್ಬಂದಿ ಕೂಡ ಯುವ ವಯಸ್ಕರಾಗಿರುತ್ತಾರೆ ಆದ್ದರಿಂದ ಇವರಿಗೆ ಕೂಡ ಆಧ್ಯತೆ ನೀಡಲಾಗಿದೆ.
ಕಲ್ಲಿನ ಕೋಟೆಯ ಮಾದರಿ :
ಇನ್ನೂ ಚಿತ್ರದುರ್ಗ ಕೋಟೆ ಮಾದರಿಯಲ್ಲಿ ಮತಗಟ್ಟೆ ನಿರ್ಮಿಸಿರುವುದು ಈ ಬಾರಿಯ ಚುನಾವಣೆಯಲ್ಲಿ ವಿಶೇಷತೆ ಕೋಟೆಯಲ್ಲಿ ಮತಗಟ್ಟೆ ಹಾಕಿದಂತೆ ಬಾಸವಾಗುವ ರೀತಿಯಲ್ಲಿ ಇಲ್ಲಿನ ಆಕರ್ಷಣೆ ಇರುತ್ತದೆ ಒಟ್ಟಾರೆ ಮತದಾನದ ಶೇಖಡ ಹೆಚ್ಚು ಮಾಡುವ ಉದ್ದೇಶ ಕೂಡ ಹಾಗಿದೆ ಇನ್ನೂ ಇಲ್ಲಿನ ಸ್ಥಳೀಯ ಬುಡಕಟ್ಟು ಸಂಪ್ರಾದಯಕ್ಕೆ ಸಂಬAದಿಸಿದAತೆ ವಿಶೇಷ ಮತಗಟ್ಟೆಗೆ ಆದ್ಯತೆ ನೀಡಿದೆ ಎಂದರು.
ಇನ್ನೂ ಎರಡು ದಿನ ಮುಂಚೆ ಬಾರ್‌ಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಇನ್ನೂ ಲಾಡ್ಜ್ಗಳಿಗೆ ಬರುವ ವ್ಯಕ್ತಿಗಳನ್ನು ಕಣ್ಗಾವಲಿನಲ್ಲಿ ಇರಿಸಲಾಗಿದೆ.
ಸಿಸಿಟಿವಿ ಕಣ್ಗಾವಲು :
ಈಡೀ ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಸಿಸಿಟಿವಿ ಕಣ್ಗಾವಲ್ಲಿನಲ್ಲಿ ಕರ್ತವ್ಯ ನಿರ್ವಸಹಿಲಿವೆ ಏಕ ರೂಪದಲ್ಲಿ ಈಡೀ ಕ್ಷೇತ್ರದ ಎಲ್ಲಾ ಮತಗಟ್ಟೆಗಳ ಪರೀಶಿಲನೆಯಲ್ಲಿ ಇಡಲಾಗಿದೆ ಒಂದು ವೇಳೆ ಮತಗಟ್ಟೆ ಸಿಬ್ಬಂದಿ ಜಾಗೂರುಕತೆಯಿಂದ ಮತಗಟ್ಟೆಯಲ್ಲಿ ವರ್ತಿಸಬೇಕು ಮೈಮರೆಯದಂತೆ ಮಹಿಳಾ ಸಿಬ್ಬಂದಿ ಕೂಡ ತಮ್ಮ ವಿಶಾಂತ್ರಿ ಪಡೆಯಲು ಪಕ್ಕದ ಕೊಠಡಿಯನ್ನು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದಿದ್ದಾರೆ.