ಚಳ್ಳಕೆರೆ : ಬಿಜೆಪಿಗರು ಸೋಲುವು ಬೀತಿಯಲ್ಲಿ ಕಾಂಗ್ರೇಸ್ ಪಕ್ಷದ ಶಾಸಕರ ಮೇಲೆ ಇಲ್ಲ ಸಲ್ಲದ ಆರೋಪಗಳು ಮಾಡುತ್ತಾರೆ.
ಕಳೆದ ಹತ್ತು ವರ್ಷಗಳಿಂದ ಅಭವೃದ್ದಿ ಪಥದತ್ತ ಸಾಗುವ ಶಾಸಕರ ಹೇಳಿಗೆ ಸಹಿಸದ ಬಿಜೆಪಿಗರು ಸೋಲುತ್ತೆವೆ ಎಂಬ ಭಯದಿಂದ ತಾವೇ ಅಧ್ಯಕ್ಷರು ಕಾರಿನ ಮೇಲೆ ಹಲ್ಲೆ ಮಾಡಿಸಿಕೊಂಡು ಕಾಂಗ್ರೇಸ್ ಪಕ್ಷದ ಮೇಲೆ ಹಾಕಿ ಮತ ಗಿಟ್ಟಿಸಿಕೊಳ್ಳುವ ಕೀಳು ಮಟ್ಟದ ರಾಜಾಕೀಯ ಬಿಜೆಪಿಗರು ಮಾಡುತ್ತಾರೆ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ವೀರಭದ್ರಯ್ಯ ವಾಗ್ದಾಳಿ ನಡೆಸಿದರು.
ಅವರು ನಗರದ ಅಂಬೇಡ್ಕ್ ವೃತ್ತದಲ್ಲಿ ಪುತ್ಥಳಿಗೆ ಹೂವಿನ ಮಾಲೆ ಹಾಕಿ ನೂರಾರು ಕೈ ಕಾರ್ಯಕರ್ತರು ಸೇರಿ ಮಾಧ್ಯಮದೊಂದಿಗೆ ಮಾತನಾಡಿದರು.
ಇನ್ನೂ ಮಾಜಿ ಜಿಪಂ.ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ ಮಾತನಾಡಿ, ಸೂರನಹಳ್ಳಿ ಶ್ರೀನಿವಾಸ್ ಎಂಬ ಹುಡಗನನ್ನು ಬಿಜೆಪಿ ಪಕ್ಷದ ಮಂಡಲದ ಅಧ್ಯಕ್ಷನನ್ನು ಮಾಡಿ ಅವರಿಂದ ಈಡೀ ಮಾದಿಗ ಜನಾಂಗ ಒಗ್ಗೂಡಿಸಲು ಇಂತಹ ಅಪಪ್ರಚಾರ ಮಾಡಿಸುತ್ತಾರೆ ನಿಜವಾಗಲೂ ರೌಡಿಸಂ. ಯಾರಿಂದ ಹಾಗುತ್ತೆ ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ, ತಾಪಂ.ಇಓ ರವರ ಮೇಲೆ ಗುಂಡಾಗಿರಿ ಮಾಡಿದ್ದು ಯಾರು ಎಂಬುದು ಎಲ್ಲಾರಿಗೂ ಗೊತ್ತಿದೆ ಎಂದು ಹೇಳಿದರು.
ಇನ್ನೂ ಕಾಂಗ್ರೇಸ್ ಮುಖಂಡ ಸೈಯದ್ ಮಾತನಾಡಿ, ಹಾಲಿ ಶಾಸಕರು ಇಂತಹ ಇನಾಯವಾದ ಕೃತ್ಯ ಎಂದು ಬಳಸಿದವರಲ್ಲ ಆದರೆ ಇಂತಹ ಅಪಪ್ರಚಾರ ಮಾಡುವ ಕುಚೋಧ್ಯ ಮನಸ್ಸುಗಳಿಂದ ಶಾಸಕರಿಗೆ ನೋವಾಗಿದೆ, ರಾಜಾಕರಣ ರಾಜಾಕರಣ ರೀತಿಯಲ್ಲಿ ಮಾಡಿ ಅದನ್ನು ಬಿಟ್ಟು ಇತರ ಕೊಲೆ ಆರೋಪಗಳಿ ಶಾಸಕರು ಎಂದು ಆಸ್ಪಾದ ನೀಡಿದವರಲ್ಲ ಎಂದು ಕಿಡಿ ಕಾರಿದರು.
ಇದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ವೈ ಪ್ರಕಾಶ್, ರಾಘವೇಂದ್ರ, ಚಳ್ಳಕೆರೆಪ್ಪ, ಸುಜಾತ ಪಾಲಯ್ಯ, ಆರ್.ಪ್ರಸನ್ನ ಕುಮಾರ್, ಮಾರಣ್ಣ, ತಿಪ್ಪೆಸ್ವಾಮಿ, ಭದ್ರಿ, ಆಂಜನೇಯ, ಗಿರಿಯಪ್ಪ, ವೀರಶ್, ಪರಸಪ್ಪ, ನಾಗರಾಜ್, ಭಾಗ್ಯಮ್ಮ, ಉಷಾ, ಸರಸ್ಪತಿ, ಮಂಜುಳಾ, ಇತರರು ಪಾಲ್ಗೊಂಡಿದ್ದರು.