ಚಳ್ಳಕೆರೆ : ತಡ ರಾತ್ರಿ ನಡೆದ ಬಿಜೆಪಿ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಕಾರಿನ ಮೇಲೆಯ ಹಲ್ಲೆ ಖಂಡಿಸಿ
ಇಂದು ಚಳ್ಳಕೆರೆ ಮಂಡಲ ಬಿಜೆಪಿ ಪಕ್ಷದ ಪದಾಧಿಕಾರಿಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಸೇರಿ ಅಂಬೇಡ್ಕರ್ ಪುತ್ಥಳಿ ಗೆ ಹೂವು ಮಾಲೆ ಹಾಕಿ, ನಂತರ ಪಟಾಕಿ ಸಿಡಿಸಿ ಕಾಂಗ್ರೆಸ್ ಪಕ್ಷದ ಹಲವು ಕಿಡಿಗೆಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಆರೋಪ ಮಾಡಿದರು.
ನಂತರ ಬಿಜೆಪಿ ಪಕ್ಷದ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಮಾಧ್ಯಮ ದೊಂದಿಗೆ ಮಾತನಾಡಿ ಹಾಲಿ ಶಾಸಕರು ಈ ಕೃತ್ಯ ಮಾಡಿಸಿರುವುದು ಅವರು ಸೊಲಿನ ಬೀತಿಯಲ್ಲಿ ಹತಾಶೆಯಿಂದ ಈತರ ಕೃತ್ಯ ಮಾಡಿಸುತ್ತಾರೆ ಮತದಾರರೆ ಇಂತಹ ಪಕ್ಷಕ್ಕೆ ನಾವು ಮೇ.10 ರಂದು ಮತದಾನದ ಮೂಲಕ ತೋರಿಸಬೇಕು ಎಂದು ಹಾಲಿ ಶಾಸಕರ ವಿರುದ್ದ ಕಿಡಿಕಾರಿದರು.
ಇನ್ನೂ ಪಕ್ಷದ ಮುಖಂಡ ಎಂ.ಶಿವಮೂರ್ತಿ ಮಾತನಾಡಿ ಇಂತರ ಕೃತ್ಯಗಳನ್ನು ಮಾಡಿಸುವುದು ಹಾಲಿಶಾಸಕರದ್ದು ಮೊದಲೆನೆದ್ದು ಅಲ್ಲ ಈ ಹಿಂದೆ ಹಲವು ಅಧ್ಯಕ್ಷರ ಮೇಲೆ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ರೌಡಿಪಟ್ಟ ಕಟ್ಟಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಸ್ಥಳದಲ್ಲಿ ನೂರಾರು ಕಾರ್ಯಕರ್ತರ ಜಮಾಯಿಸಿದ್ದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ಜಿಲ್ಲಾ ಕಾರ್ಯದರ್ಶಿ ಜಯಪಾಲಯ್ಯ, ಜಿಲ್ಲಾ ಯುವ ಮೊರ್ಚಾ ಅಧ್ಯಕ್ಷ ಕಾಲುವೆಳ್ಳಿ ಪಾಲಯ್ಯ, ಜೆಡಿಎಸ್ ಮುಖಂಡ ಟಿ.ವಿಜಯ್ ಕುಮಾರ್, ಇತರರು ಹಲವಾರು ಪಾಲ್ಗೊಂಡಿದ್ದರು.