ಚಳ್ಳಕೆರೆ : ನಿಮ್ಮ ಮನೆಯ ಮಗಳಾಗಿ ನಿಮ್ಮ ಮುಂದೆ ನಿಂತಿರುವುದು ಕೇವಲ ಮತಯಾಚನೆ ಮಾಡಲು ಅಲ್ಲ, ನಮ್ಮ ಸಮುದಾಯ ಸಂಕಷ್ಟದಲ್ಲಿ ಇದ್ದಾಗ ಯಾರು ಕಂಬನಿ ಮಿಡಿದಿದ್ದರು ಯಾರು ನಮ್ಮ ಬೆಂಗಾವಲಿಗೆ ಬಂದ್ದಿದರೊ ಅಂತವರ ಪರ ಇಂದು ಮತಯಾಚನೆ ಮಾಡಲು ಬಂದಿರುವ ಎಂದು ಜೆಡಿಎಸ್ ಮಹಿಳಾ ಕಾರ್ಯಧ್ಯಕ್ಷರಾದ ನಜ್ಮಾ ನಾಜೀರ್ ಹೇಳಿದರು
ಅವರು ನಗರದ ಖಾಸಗಿ ರೆಸಾರ್ಟ್ವೊಂದರಲ್ಲಿ ಅಲ್ಪಸಂಖಾತ್ಯರ ಸಭೆಯಲ್ಲಿ ಮಾತನಾಡಿದ ಅವರು. ನಮ್ಮ ಅಲ್ಪ ಸಂಖ್ಯಾತರ ಸಮುದಾಯಕ್ಕೆ ಹಿಜಾಬ್, ಅಲಾಲ್ ಕಟ್ ಈಗೇ ಹಲವು ತೊಂದರೆಗಳನ್ನು ಕೊಟ್ಟ ಬಿಜೆಪಿ ದುರಾಡಳಿತವನ್ನು ಈಡೀ ದೇಶ ಹಾಗೂ ರಾಜ್ಯದಲ್ಲಿ ಕಿತ್ತೊಗೆಯಲು ಸಂಕಲ್ಪಮಾಡಬೇಕು, ಒಂದು ವೇಳೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಆಡಳಿತಕ್ಕೆ ಬಂದರೆ ಮುಸ್ಲಿಂ ಸಮುದಾಯದ ಮಹಿಳೆಯರು ಒಂಟಿಯಾಗಿ ಹಿಜಾಬ್ ಧರಿಸಿ ಓಡಾಡುವಂತಿಲ್ಲ, ಅಂತಹ ಕಾನೂನು ಕೂಡ ಮಾಡಲು ಹೊರಟಿದ್ದಾರೆ ಆದ್ದರಿಂದ ನೀವು ಈ ಬರಿ ಜೆಡಿಎಸ್ ಗೆ ಮತ ನೀಡಿ ನಿಮ್ಮ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ ಕುಮಾರಣ್ಣ ಗೆಲ್ಲಿಸಿ ರಾಜ್ಯದಲ್ಲಿ ಕುಮಾರಣ್ಣ ಮುಖ್ಯಮಂತ್ರಿ ಮಾಡಿ ಎಂದರು.
ಸರ್ವ ಜಾನಂಗದಪರ ಆಡಳಿತ ನಡೆಸುವ ನಮ್ಮ ಜೆಡಿಎಸ್ ಸರಕಾರವನ್ನು ಕಾಂಗ್ರೆಸ್ ಪಕ್ಷ ಕುಂತತ್ರ ರೂಪಿಸಿ ಕೆಳಗಿಸಿತು, ಆದರೆ ಬೇರೆ ವಿರೋಧಿ ಬಿಜೆಪಿ ಸರಕಾರಕ್ಕೆ ಆಡಳಿತ ಬಂದು ಹಿಂದೂ ಮುಸ್ಲಿಂ ಭೇಧ ಬಾವಿಲ್ಲದೆ ಜೀವನ ನಡೆಸು ನಮಗೆ, ಧರ್ಮ ಧರ್ಮ ಒಡೆಯುವ ಕೆಲಸ ಮಾಡಿದ ಬಿಜೆಪಿಗೆ ಮತ ನೀಡಬೇಡಿ ಎಂದರು.
ಆದರೆ ದೇವೇಗೌಡರ ಸರಕಾರ ಇದ್ದಾಗ ಅಲ್ಪಸಂಖ್ಯಾರಿಗೆ ಶೇಖಡ 4ರಷ್ಟು ಮೀಸಲಾತಿ ಕೊಟ್ಟು ಉದ್ಯೋಗಕ್ಕೆ ಅನುಕೂಲ ಮಾಡಿತ್ತು ಆದರೆ ಬಿಜೆಪಿ ಸರಕಾರ ಅದನ್ನು ಕಿತ್ತುಕೊಂಡು ನಮ್ಮ ಮಕ್ಕಳ ಭವಿಷ್ಯವನ್ನು ಚಿಂತೆಗೀಡು ಮಾಡಿದೆ ಎಂದರು.
ಜೆಡಿಎಸ್ ಅಭ್ಯರ್ಥಿ ಎಂ.ರವಿಶ್ ಕುಮಾರ್ ಮಾತನಾಡಿ, ಚುನಾವಣೆ ಬಂದಾಗ ಮಾತ್ರ ನಿಮ್ಮ ಮನೆಗೆ ಬರುತ್ತಾರೆ, ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣ ಜೆಡಿಎಸ್ ನಿಂದ ಮಾತ್ರ ಸಾಧ್ಯ, ಮತಕ್ಕೊಸ್ಕರ ಬೇರೆ ಬೇರೆ ಮಾಡುವ ಅನ್ಯ ಪಕ್ಷದ ಕುಂತ್ರಕ್ಕೆ ಕಡಿವಾಣ ಹಾಕಿ, ನಿಮಗೆ ಕೊಟ್ಟ ಮೀಸಲಾತಿಯನ್ನು ಬಿಜೆಪಿ ರದ್ದುಪಡಿಸಿದೆ ಆದರೆ ನಮ್ಮ ಜೆಡಿಎಸ್ ಸರಕಾರ ಬಂದರೆ ಮರು ವಾಪಸ್ ಕೊಡಲಾಗುವುದು, ನಿಮ್ಮಗೆ ಹಿಜಾಬ್, ಅಲಾಲ್ ಕಟ್ ವಿವಾದ ಬಂದಾಗ ನಿಮ್ಮ ಸಂಕಷ್ಟಕ್ಕೆ ನೆರವಾದ ಜೆಡಿಎಸ್ ಪಕ್ಷ ಮಾತ್ರ ನಿಮ್ಮ ಪರವಾಗಿ ಇದೆ.
ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಟ್ಟಿರಿ, ಆದರೆ ನಿಮ್ಮ ಕ್ಷೇತ್ರದಲ್ಲಿ ಶಾದಿಮಾಹಲ್ ಕಟ್ಟಿಲ್ಲ, ಸರಿಯಾದ ಶೌಚಾಲಯ ಇಲ್ಲ ಅದ್ದರಿಂದ ನಾನು ಗೆದ್ದರೆ ಆರು ತಿಂಗಳೊಳಗೆ ಮಾಡಿಕೊಡುತ್ತೆನೆ, ನಿಮ್ಮ ಸಮಯ ಬಂದಿದೆ ಉಪಯೋಗಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಈದೇ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ನಗರಸಭೆ ಸದಸ್ಯ ಶ್ರೀನಿವಾಸ್, ಪ್ರಮೋದ್, ವಿಶುಕುಮಾರ್, ಮಾಜಿ ಸದಸ್ಯ ವಿಜಯ್ ಕುಮಾರ್, ಭಿಮಣ್ಣ, ಸಲ್ವೆ, ಇತರ ಮುಸ್ಲಿಂ ಮುಖಂಡರು ಮಹಿಳೆಯರು ಪಾಲ್ಗೊಂಡಿದ್ದರು.