ಒಂದು ಬಾರಿ ಪಕ್ಷೇತರ ಅಭ್ಯರ್ಥಿ ಕೆಟಿ.ಕುಮಾರಸ್ವಾಮಿಗೆ ಅವಕಾಶ ನೀಡಿ ಗೆಲ್ಲಿಸಿ ..!
ಬಯಲು ಸೀಮೆಯ ಚಿತ್ರಣ ನೋಡಿ..!!

ಚಳ್ಳಕೆರೆ : ಒಂದು ಬಾರಿ ನನಗೆ ಅವಕಾಶ ಕೊಡಿ ನಮ್ಮ ತಂದೆಯ ಹಾದಿಯಲ್ಲಿ ಈಡೀ ಕ್ಷೇತ್ರದಲ್ಲಿ ಅಭಿವೃದ್ದಿ ಪಥದತ್ತ ಕೊಂಡುಯ್ಯುತ್ತೆನೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಹೇಳಿದರು
ಅವರು ತಾಲೂಕಿನ ದೇವರ ಮರಿಕುಂಟೆ ಗ್ರಾಮದಲ್ಲಿ 2023ರ ವಿಧಾನ ಸಭಾ ಚುನಾವಣೆಯಲ್ಲಿ ಮತಯಾಚನೆ ಮಾಡುವ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಿದರು
ನಮ್ಮ ತಂದೆ ಯಾವಾಗಲು ನಾನು ಚಿಕ್ಕವನಿದ್ದಾಗ ಹೇಳುತ್ತಿದ್ದರು ದೇವರ ಮರಿಕುಂಟೆ ನನಗೆ ತವರು ಮನೆ ಇಲ್ಲಿನ ಜನ ಹೃದಯಶೀಲವಂತರು ಅವರನ್ನು ಎಂದಿಗೂ ಮರೆಯಬೇಡ ಎಂಬ ಸಂದೇಶ ಮೊದಲೆ ಹೇಳಿದ್ದರು ಅದರಂತೆ ನಾನು ಅವರ ಹಾದಿಯಲ್ಲಿ ಇಂದಿಗೂ ಅವರ ಹೇಳಿದ ವಾಖ್ಯ ಮರೆತಿಲ್ಲ ಅವರಂತೆ ನನಗೂ ಕೂಡ ಗ್ರಾಮದಲ್ಲಿ ಮತ ನೀಡಿ ನಿಮ್ಮ ಸೇವೆಗೆ ಅವಕಾಶ ನೀಡಿ ಎಂದು ಟಾವೆಲ್ ಹೊಡ್ಡಿ ಮತಬಿಕ್ಷೆ ಕೇಳಿದರು.
ಇನ್ನೂ ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ನಿಮ್ಮ ಕಷ್ಟ ಕಾಲದಲ್ಲಿ ನೆರವಾಗುವಂತೆ ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸಿ ಇಲ್ಲವಾದರೆ ನಿಮ್ಮ ಕಷ್ಟ ನೋವುಗಳಿಗೆ ಬೆಂಗಳೂರು ದೇವನಹಳ್ಳಿಗೆ, ತುಮಕೂರಿಗೆ ಬಸ್ ಚಾರ್ಜ್ ಇಲ್ಲದೆ ಅವರ ಬಳಿ ಹೋಗದ ಸ್ಥಿತಿ ನಿಮಗೆ ಬೇಕಾ ಮತದಾರರೆ ಒಂದು ಬಾರಿ ಆಲೋಚಿಸಿ ನಿಮ್ಮ ಮತ ನೀಡಿ
ಇಂದಿನ ದಿನದಲ್ಲಿ ಒಬ್ಬ ರಾಜಾಕರಣೀ ಮೂರಿಂದ ಆರು ತಲೆಮಾರಿನ ಮಕ್ಕಳು ಮೊಮ್ಮಕ್ಕಳು ತಿನ್ನುವಷ್ಟು ಕಪ್ಪು ಹಣವನ್ನು ಸಂಪಾದಿಸುತ್ತಾರೆ ಆದರೆ ನಿಮ್ಮ ಮನೆಯಲ್ಲಿ ಬಜ್ಜಿ ಮುದ್ದೆ ತಿಂದು ಎರಡು ಬಾರಿ ಶಾಸಕರಾಗಿ ಸಚಿವರಾಗಿ ಇಂದು ಒಬ್ಬ ಮಗನಿಗೆ ಸಾಕಗುವಷ್ಟು ಆರ್ಥಿಕತೆ ಮಾಡಿಲ್ಲ ಎಂದರೆ ನೀವೇ ಲೆಕ್ಕಾಗಿ ಇಂತಹ ಅಭ್ಯರ್ಥಿಗಳು ಬೇಕಾ ಇಲ್ಲ ನಿಮ್ಮ ಸೇವೆಗೆ ತಮ್ಮ ಜೀವನ ಮುಡಪಾಗಿಟ್ಟ ಕುಮಾರಸ್ವಾಮಿಯಂತ ನಿಶ್ಕಲ್ಮಶವಾದ ಅಭ್ಯರ್ಥಿ ಬೇಕಾ ಎಂದು ಮತದಾರರಲ್ಲಿ ಮನವಿ ಮಾಡಿದರು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆ ಕಣ ರಂಗೇರಿದೆ ಅದರಂತೆ
ಆಯಿಲ್ ಸಿಟಿಯಲ್ಲಿ ರಾಜಾಕೀಯ ರಣ ಕಹಳೆ ಅಭ್ಯರ್ಥಿಗಳು ಮೊಳಗಿಸುತ್ತಿದ್ದಾರೆ ಅದರಂತೆ ಇಂದು ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಕ್ಷೇತ್ರದ ದೇವರಮರಿಕುಂಟೆ, ಗೊಲ್ಲರಹಟ್ಟಿ ಈಗೇ ಹಲವು ಗ್ರಾಮಗಲ್ಲಿ ಮತಭೇಟೆ ನಡೆಸುತ್ತಿರುವ ಕುಮಾರಸ್ವಾಮಿಗೆ ಕಾರ್ಯಕರ್ತರು ಹಾಗೂ ಬೆಂಬಲಿಗರು ಹೂವಿನ ಸುರಿಮಳೆ ಸುರಿಸುವುದರ ಮೂಲಕ ಬೃಹತ್ ಹೂವಿನ ಮಾಲೆ ಹಾಕಿ ಗ್ರಾಮಕ್ಕೆ ಅದ್ದೂರಿ ಸ್ವಾಗತ ಕೋರುತ್ತಿದ್ದಾರೆ.
ಇನ್ನೂ ಮಹಿಳೆಯರು ಆರತಿ ಬೆಳಗಿ ಹೋಕಳಿ ಹಾಕುವುದರ ಮೂಲಕ ನಮ್ಮ ಬೆಂಬಲ ನಿಮಗೆ ಎಂಬ ವಿಶ್ವಾಸದ ಮಾತುಗಳುನ್ನು ಹಾಡುತ್ತಾ ಕುಮಾರಸ್ವಾಮಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಅದರಂತೆ ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ, ಮುಖಂಡ ಶಿವಪುತ್ರಪ್ಪ, ವಿಜೇಂದ್ರ, ಗೆಜ್ಜೆಪ್ಪ, ನಾಗೇಶ್, ಬೋರಯ್ಯ ಇತರ ಮುಖಂಡರು ಈಡೀ ದಿನ ಸಾಥ್ ನಿಡಿದರು.

About The Author

Namma Challakere Local News
error: Content is protected !!