ಚಳ್ಳಕೆರೆ : ಕಳೆದ ಹತ್ತು ವರ್ಷ ಕ್ಷೇತ್ರದಲ್ಲಿ ಅಧಿಕಾರ ವಹಿಸಿಕೊಂಡ ಹಾಳಿ ಶಾಸಕ ಅಭಿವೃದ್ದಿ ಶೂನ್ಯ ಅವರ ಸಾಧನೆ ಕ್ಷೇತ್ರದಲಿ ಏನು ಇಲ್ಲ ಎಂದು ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಹಾಳಿ ಶಾಸಕ ಟಿ.ರಘುಮೂರ್ತಿ ವಿರುದ್ದಧ ವಾಗ್ದಾಳಿ ನಡೆಸಿದರು.
ಅವರು ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ಪಕ್ಷೇತರ ಅಭ್ಯರ್ಥಿ ಕಛೇರಿಯಲ್ಲಿ ಪತ್ರಿಕಾ ಗೊಷ್ಠಿಯಲ್ಲಿ ಮಾತನಾಡಿದರು, ನಗರದಲ್ಲಿ ಕಳೆದ ಹತ್ತು ವರ್ಷಗಳಿಂದ ಶಾಸಕರಿಗಿದ್ದು ಯಾವ ಅರ್ಥಕ್ಕೆ ಎಂಬುವುದು ಮತದಾರರು ಪರಿಗಣಿಸಬೇಕಿದೆ.
ನಗರದಲ್ಲಿ ಸುಸಜ್ಜಿತವಾದ ವಾರ್ಡಗಳಲ್ಲಿ ಯುಜಿಡಿ ಇಲ್ಲ, ಹೈಟೆಕ್ ಆಸ್ವತ್ರೆ ಇಲ್ಲ, ಕಳೆದ ಐವತತು ವರ್ಷಗಳಿಂದ ನಗರದಲ್ಲಿ ಅನಾಮಧೇಯವಾಗಿ ವಾಸ ಮಾಡುವ ಬಡ ಕುಟುಂಬಕ್ಕೆ ಆಶ್ರಯವಾಗಬೇಗಿದ್ದ ಶಾಸಕರು ಕನಿಷ್ಠ ಪಕ್ಷಕ್ಕೆ ಅವರಿಗೆ ಮನೆಗಳ ಹಕ್ಕು ಪತ್ರ ನೀಡುವ ಕೆಲಸವಾದರೂ ಮಾಡಿಲ್ಲ, ಇನ್ನೂ ಸಾವಿರಾರು ರೈತರು ತಮ್ಮ ಭೂ ಒಡೆತನಕ್ಕೆ ಸರಕಾರಕೆ ಅರ್ಜಿ ಹಾಕಿ ಬಕಪಕ್ಷಿಯಂತೆ ಸಾಗುವಳಿ ಚೀಟಿಗಾಗಿ ಕಾಯುತ್ತಿದ್ದಾರೆ.
ಇನ್ನೂ ಜಲನಾಯಕ ಎಂಬ ಬಿರುದುಗಳು ಬೇರೆ ಯಾವ ಭಾಗಕ್ಕೆ ನೀರು ಹರಿಸಿದ್ದರೆ ಎಲ್ಲಿ ರೈತರಿಗೆ ನೆರವಾಗಿದೆ ಅವರ ಕನಸು ಏನು ಎಂಬುದು ಈಡೀ ಕ್ಷೇತ್ರದ ಜನತೆಗೆ ಗೊತ್ತಿದೆ ಕೇವಲ ಡಾಂಭಿಕತೆಗೆ ಅವರು ಅಭಿವೃದ್ದಿ ಹರಿಕಾರ, ಜಲನಾಯಕ ಈಗೇ ಕೇವಲ ಬಿರುದುಗಳು ಹಾಕಿಕೊಂಡರೆ ಸಾಲದು ಅವುಗಳನ್ನು ಪ್ರಗತಿಯತ್ತ ಕೊಂಡುಯ್ಯಬೇಕು, 2008ರಲ್ಲಿ ನಮ್ಮ ತಂದೆ ಶಾಸಕರಾಗಿದ್ದ ಅವಧಿಯಲ್ಲಿ ವೇದಾವತಿ ಡ್ಯಾಂ ಗೆ ಚೆಕ್‌ಡ್ಯಾಂ ನಿರ್ಮಿಸುವ ಪರಿಕಲ್ಪನೆ ಹೊಂದಿಅಮದಿನ ಸರಕಾರದಲ್ಲಿ ಅನುದಾನ ತಂದಿದ್ದರು ಆದರೆ ಅವಧಿ ಮುಗಿದ ಕಾರಣ ನಂತರದ ಶಾಸಕರು ಅದರ ಬಾಬ್ತು ಪಡೆದು ಚೆಕ್ ಡ್ಯಾಂ ನಿರ್ಮಿಸಿದ್ದಾರೆ ಈಗೀರುವಾಗಿ ಆಧುನಿಕ ಭಗೀರಥ ಹೇಗೆ ಹಾಗಲು ಸಾಧ್ಯ ಅವರ ಕನಸಾರು ಇತ್ತ ಈ ಭಾಗದ ಜನತೆಗೆ ಎಂದು ಸವಾಲ್ ಎಸೆದರು.
ಇನ್ನೂ ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಈಡೀ ಕ್ಷೇತ್ರದಲ್ಲಿ ಜನತೆ ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ, ಕ್ಷೇತ್ರದಲ್ಲಿನಿರುದ್ಯೋಗ ತಾಂಡವಾಡುತ್ತಿದೆ, ರೈತರಿಗೆ ಪೂರಕವಾದ ಜಮೀನು ನೀಡದರೆ ಸಾಗುವಳಿ ಚೀಟಿ ನೀಡದೆ, ನಗರದ ವಾಸಿಗಳಿಗೆ ಸುಮಾರು ಮುವತೈದು ಸಾವಿರಕ್ಕೂ ಹೆಚ್ಚು ನಗರವಾಸಿಗಳು ಸ್ವಂತ ಕಟ್ಟಡದ ಮೇಲೆ ಅಧಿಕಾರ ವಿಲ್ಲದೆ ಕಛೇರಿಗೆ ಅಲೆಯುತ್ತಿದ್ದಾರೆ, ನಗರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಆಧುನಿಕ ಶ್ಪರ್ಷ ನೀಡಬೇಕು, ಮಲ್ಟಿ ಸ್ಪೆಷಲಿಸ್ಟ್ ಆಸ್ವತ್ರೆ ಕಟ್ಟಬೇಕು ನಿರುದ್ಯೋಗ ವಂತ ಯುವಕರಿಗೆ ಸ್ಥಳದಲ್ಲಿ ಉದ್ಯೋಗ ನೀಡುವಂತ ಕೈಗಾರಿಕೆ ಉದ್ಯಾಮಗಳನ್ನು ಸ್ಥಾಪಿಸಬೇಕು ಆದ್ದರಿಂದ ಒಂದು ಬಾರಿ ನಿಮ್ಮ ಮನೆಯ ಮಗನಿಗೆ ಅವಕಾಶ ಕೊಡಿ ನಿಮ್ಮ ಕ್ಷೇತ್ರ ಬದಲಾವಣೆ ತನ್ನಿ ಎಂದರು.
ಇದೇ ಸಂಧರ್ಭದಲ್ಲಿ ಮುಖಂಡ ಶಿವಪುತ್ರಪ್ಪ, ವಿಜೇಂದ್ರಣ್ಣ, ಸಣ್ಣ ಸೂರಯ್ಯ, ಉಮೇಶ್ ಚಂದ್ರ ಬ್ಯಾನರ್ಜಿ, ಇತರರು ಪಾಲ್ಗೊಂಡಿದ್ದರು.