ನಾಯಕನಹಟ್ಟಿ:: ಪಟ್ಟಣದ 5 ಮತ್ತು 9ನೇ ವಾರ್ಡಿನ ಬಿಜೆಪಿ ಮಹಿಳಾ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕ ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ತಿಪ್ಪೇಸ್ವಾಮಿ ಗೆಲುವಿಗಾಗಿ ಗುಂತಕೋಲಮ್ಮನಹಳ್ಳಿಯ ವರವಲಯದಲ್ಲಿರುವ ಕಾವಲು ಆಂಜನೇಯನಿಗೆ ಪಾದಯಾತ್ರೆಯ ಮೂಲಕ ಆಗಮಿಸಿ ಶ್ರೀ ಆಂಜನೇಯನಿಗೆ ವಿಶೇಷ ಪೂಜ್ಯ ಸಲ್ಲಿಸಿದರು.
ಇನ್ನೂ ಇದೇ ವೇಳೆ ಮಲ್ಲೂರಹಳ್ಳಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಓ ಮಂಜುನಾಥ್ ಮಾತನಾಡಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಮತ್ತು ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ತಿಪ್ಪೇಸ್ವಾಮಿ ನೂರಕ್ಕೆ ನೂರರಷ್ಟು ಗೆಲುವು ಖಚಿತ ನಾಯಕನಹಟ್ಟಿ ಪಟ್ಟಣದ 5 ಮತ್ತು 9ನೇ ವಾರ್ಡಿನ ಮಹಿಳಾ ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಎಸ್ ತಿಪ್ಪೇಸ್ವಾಮಿ ಗೆಲುವಿಗಾಗಿ ಕಾವಲು ಆಂಜನೇಯ ಸ್ವಾಮಿಗೆ ವಿಶೇಷ ಪೂಜಿಸಲ್ಲಿಸಿರುವುದು ಸಂತಸ ತಂದಿದೆ ಎಂದು ಮಹಿಳಾ ಕಾರ್ಯಕರ್ತರಿಗೆ ಅಭಿನಂದನೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಲ್ಲೂರಹಳ್ಳಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಓ ಮಂಜುನಾಥ್, ಬಿಜೆಪಿ ಮುಖಂಡ ಡ್ರೈವರ್ ಓಬಣ್ಣ, ಬಿಜೆಪಿ ಮಹಿಳಾ ಕಾರ್ಯಕರ್ತರಾದ ವೇದಾವತಿ, ಸ್ವಾಮಿ, ಕಿರಣ್ ಕುಮಾರ್, ನಾಗರತ್ನಮ್ಮ ದೇವಿರಮ್ಮ ಚೌಡಮ್ಮ ಬಸಮ್ಮ ಆಶಾ ಸೇರಿದಂತೆ ಮುಂತಾದ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು