ನಾಯಕನಹಟ್ಟಿ:: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ವತಿಯಿಂದ ಜಾಗನೂರಹಟ್ಟಿ ಗ್ರಾಮಕ್ಕೆ ಪ್ರತ್ಯೇಕ ಅಂಚೆ ಕಚೇರಿ ಕಲ್ಪಿಸುವಂತೆ ಪಟ್ಟಣದ ಅಂಚೆ ಕಚೇರಿಯ ಉಪ ಅಂಚೆಪಾಲಕ ತಿಪ್ಪೇಸ್ವಾಮಿ ರವರಿಗೆ ಮನವಿ ಸಲ್ಲಿಸಲಾಯಿತು.
ಉಪ ಅಂಚೆಪಾಲಕ ತಿಪ್ಪೇಸ್ವಾಮಿ ಪ್ರತಿಕ್ರಿಯಿಸಿ ಮನವಿಯನ್ನು ಮೇಲೇಧಿಕಾರಿಗಳಿಗೆ ವರ್ಗಾಯಿಸಿ ವರ್ಗಾಯಿಸಲಾಗುವುದು ಎಂದರು.
ಇದು ವೇಳೆ ಸಂಪನ್ಮೂಲ ವ್ಯಕ್ತಿ ಎಸ್ ಪಿ ಪಾಲಯ್ಯ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಹೋಬಳಿ ಅಧ್ಯಕ್ಷ ತಿಪ್ಪೇಸ್ವಾಮಿ, ಸಂಘಟನಾ ಕಾರ್ಯದರ್ಶಿ ವಿಶ್ವನಾಥ್, ಗೌರವಾಧ್ಯಕ್ಷ ಜಾಗನೂರಹಟ್ಟಿ ಮುತ್ತಯ್ಯ, ಉಪಾಧ್ಯಕ್ಷ ಬೋರೆಯ್ಯ, ಸಂಘಟನಾ ಕಾರ್ಯದರ್ಶಿ ಗಡ್ಡಯ್ಯ, ನಗರ ಘಟಕ ಅಧ್ಯಕ್ಷ ಕಾಟಯ್ಯ, ಯುವ ಘಟಕ ಅಧ್ಯಕ್ಷ ಸುರೇಶ್, ಸಂಚಾಲಕ ಶಿವರಾಜ್, ಸೇರಿದಂತೆ ಮುಂತಾದವರು ಭಾಗವಹಿಸಿದ್ದರು