ಚಳ್ಳಕೆರೆ : ಕಾಂಗ್ರೆಸ್ ಸುಮಾರು ವರ್ಷಗಳ ಇತಿಹಾಸ ಇರುವ ಪಕ್ಷ. ಕಾಂಗ್ರೆಸ್ ಮಾಡಿದ ಕಾರ್ಯಗಳನ್ನು ಪಟ್ಟಿ ಮಾಡಲು ಸಾಧ್ಯವಿಲ್ಲ. ದೇಶಕ್ಕೆ ಸ್ವಾತಂತ್ರ÷್ಯ, ನೀರಾವರಿ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು ಕ್ಷೇತ್ರದ ಪಗಡಲಬಂಡೆ ಗ್ರಾಮದಲ್ಲಿ ಮತಯಾಚನೆ ಮಾಡುವ ವೇಳೆ ಮತದಾರರನ್ನು ಉದ್ದೆಶೀ ಮಾತನಾಡಿದ ಅವರು ಬಿಜೆಪಿಯ ದುರಾಡಳಿತದಿಂದಾಗಿ ಅಭಿವೃದ್ಧಿ ನಿಂತ ನೀರಾಗಿದೆ. ನನ್ನ ಎರಡು ಅವಧಿಯಲ್ಲಿ ಮಾಡಿದ ಅಭಿವೃದ್ದಿಗೆ ಬಿಜೆಪಿ ಸರಕಾರ ಕೆಲ ಅನುದಾನವನನು ತಡೆ ಹಿಡಿದಿದೆ ಆದ್ದರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮತ್ತೊಮ್ಮೆ ನನ್ನ ಮೇಲೆ ನಂಬಿಕೆ ಇಟ್ಟರೆ ನಿಮ್ಮ ಋಣ ತೀರಿಸುವೆ ಎಂದರು.

ಬಿಜೆಪಿ ಸರ್ಕಾರದಿಂದ ಜನರು ರೋಸಿ ಹೋಗಿದ್ದಾರೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಗರ ದುರ್ವರ್ತನೆ ಮಿತಿಮೀರಿದೆ. ಇದನ್ನು ಕೊನೆಗಾಣಿಸಲು ಕ್ಷೇತ್ರದ ಮತದಾರರು ತುದಿಗಾಲಲ್ಲಿ ನಿಂತಿದ್ದು, ಕಾಂಗ್ರೆಸ್ ಆಡಳಿತದ ಭರವಸೆಯ ದಿನಗಳು ಸನ್ನಿಹಿತವಾಗಿದೆ. ಭವಿಷ್ಯದಲ್ಲಿ ಚಳ್ಳಕೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ ಮಾತನಾಡಿ, ಈ ಬಾರಿ ಕ್ಷೇತ್ರದ ಜನರ ವಿಶ್ವಾಸಕ್ಕೆ ಮೂರನೇ ಬಾರಿಗೆ ಹಾಲಿ ಶಾಸಕರು ಕಣಕ್ಕಿಳಿದಿದ್ದು ರಘುಮೂರ್ತಿ ಅವರ ಗೆಲುವು ನಮ್ಮ ಸ್ವಾಭಿಮಾನದ ಉಳಿವು ಆಗಲಿದೆ , ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತವಾಗಿದೆ. ಶಾಸಕರ ಅವರ ಗೆಲುವು ಖಚಿತವಾಗಿದ್ದು, ಮತಗಳ ಅಂತರ ದಾಖಲೆ ಆಗಬೇಕೆಂಬುದು ನಮ್ಮ ಶಾಸಕ ರಘುಮೂರ್ತಿ ಅವರಂಥ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸುವುದು ಈ ಬಾರಿಯ ಚುನಾವಣೆಯಲ್ಲಿ ಅನಿವಾರ್ಯವಾಗಿದೆ. ಕ್ಷೇತ್ರದೆಲ್ಲೆಡೆ ಅವರು ಪ್ರಚಾರಕ್ಕೆ ಆಗಮಿಸಿದರೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.

ಪರುಶುರಾಂಪುರ ಭಾಗದ ಮುಖಂಡ ಚೆನ್ನಕೇಶವ ಮಾತನಾಡಿ, ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತ, ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ರೋಸಿಹೊಗಿದ್ದಾರೆ.
ಆನ ವಿರಫೋಧಿ ಆಡಲಿತದಿಂದ ಕ್ಷೇತ್ರದಲ್ಲಿ ರಾಜ್ಯದಲ್ಲಿ ಪ್ರಗತಿ ಕಾಣದು ಕೇವಲ ಅವರು ಅಭಿವೃದ್ದಿಯಾಗುತ್ತಾರೆ ಹೊರತು ಸಾರ್ವಜನಿಕರು ಅಲ್ಲ ಆದ್ದರಿಂದ ಸರ್ವರು ಸಹ ಕಾಂಗ್ರೆಸ್ ಪರ ಒಲವು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

Namma Challakere Local News
error: Content is protected !!