ಚಳ್ಳಕೆರೆ : ಆಯಿಲ್ ಸಿಟಿಯ ಚುಕ್ಕಾಣಿ ಹಿಡಿಯಲಿ ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಈ ಬಾರಿಯ ಚುನಾವಣೆಯಲ್ಲಿ ವೀರಶೈವ ಲಿಂಗಾಯತರ ಮತ ಸೆಳೆಯಲು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ.
ಅದರಂತೆ ಇಂದು ಖಾಸಗಿ ಕಛೇರಿಯಲ್ಲಿ ಕ್ಷೇತ್ರದ ವೀರಶೈವ ಲಿಂಗಾಯಿತರನ್ನು ಒಗ್ಗೂಡಿಸಿದ ಅವರು 2023ಕ್ಕೆ ಬಿಜೆಪಿ ಗೆ ಮನ ನೀಡಬೇಕೆಂದು ಕೋರಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ಬರುವುದು ಖಚಿತವಾಗಿರುವುದರಿಂದ ವೀರಶೈವ ಮುಖಂಡರು ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಮತ ನೀಡುವಂತೆ ವೀರಶೈವ ಮುಖಂಡರು ಮನವಿ ಮಾಡಿದ್ದಾರೆ.
ಕೇಂದ್ರ ಸರಕಾರದ ಪ್ರಧಾನಿ ನರೇಂದ್ರಮೋದಿ ಹಾಗೂ ರಾಜ್ಯಸರಕಾರದ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನತೆಗೆ ಉತ್ತಮಜನರ ಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಉತ್ತಮ ಆಡಳಿತ ನೀಡಿದ್ದಾರೆ.

ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ ಬಿಜೆಪಿ ಶಾಸಕ ಬಸವರಾಜ್ ಮಂಡಿಮಠ್ ಅವಧಿಯಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ಉಳುಮೆ ಮಾಡುವ ರೈತರಿಗೆ ಸಾಗುವಳಿ ಹಕ್ಕು ಪತ್ರ ನೀಡಿದ್ದು ಬಿಟ್ಟರೆ ಕಾಂಗ್ರೆಸ್ ಸರಕಾರ ನೀಡಿಲ್ಲ ಆದ್ದರಿಂದ ಮತೆ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಗೆಲ್ಲಿಸಿದರೆ ಸಾಗುವಳಿ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿದರು.
ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಮಾತನಾಡಿ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಹಕ್ಕು ಪತ್ರ, ವಸತಿ, ನಿವೇಶನ, ನಗರದ ಪ್ರತಿ ವಾರ್ಡ್ ಗಳ ರಸ್ತೆ , ಚರಂಡಿ. ಒಳಚರಂಡಿಯೋಜನೆ ಸೇರಿದಂತೆ ಹಲವು ಜನರ ಯೋಜನೆಗಳನ್ನು ಅಭೀವೃದ್ಧಿ ಪಡಿಸಲಾಗುವುದು ಎಂದು ಮಹಿಳೆಯರಿಗೆ ಮನವರಿಕೆ ಮಾಡಿದರು.
ಪ್ರದಾನಿ ನರೇಂದ್ರ ಮೋದಿ, ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಆಡಳಿತ ಡಬಲ್ ಇಂಜಿನ್ ಸರಕಾರ ಜನಮೆಚ್ಚುಗೆ ಗಳಿಸಿದ ಅವರ ಕೊಡುಗೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರೆತಿವೆ. ಹೀಗಾಗಿ ಬಿಜೆಪಿ ಪಕ್ಷಕ್ಕೆ ಕ್ಷೇತ್ರದಲ್ಲಿ ಸ್ವಯಂ ಪ್ರೇರಿತರಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಿರಂದ ಬಿಜೆಪಿ ಪಕ್ಷಕ್ಕೆ ಆನೆ ಭಲ ಬಂತಾಗಿದೆ ಹತ್ತು ವರ್ಷ ಕಾಂಗ್ರೆಸ್ ಶಾಸಕರಿಗೆ ಮತ ನೀಡಿದ್ದೀರಿ ಈ ಬಾರಿ ನನಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.

ಸಭೆಯಲ್ಲಿ ಬಾಳೆಕಾಯಿ ರಾಮದಾದ್, ಎಲೆ ಭದ್ರಣ್ಣ,ಸಿ.ಎಸ್.ಪ್ರಸಾದ್ , ಮಾತೃಶ್ರಿಮಂಜುನಾಥ್, ಕಿರುತೆರೆ ನಟ ಹೂಗಾರ್, ಇಂದಿರಾ ಅನಿಲ್‌ಕುಮಾರ್, ಪ್ರಭು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಮುಖಂಡರು ಹಾಗೂ ವಿವಿಧ ಗ್ರಾಮಗಳಿಂದ ವೀರಶೈವ ಮುಖಂಡರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!