ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಚುನಾವಣೆ ರಣಕಣದ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ
ಅದರAತೆ ಪ್ರಾದೇಶಿಕ ಪಕ್ಷದÀ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಕೂಡ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ.
ಅದರಂತೆ ಇಂದು ದೊಡ್ಡೆರಿ ಗ್ರಾಪಂ ವ್ಯಾಪ್ತಿಯ ಕೆಂಚವೀರನಹಳ್ಳಿ, ದಾಸನಾಯಕನಹಟ್ಟಿ, ದೊಡ್ಡೆರಿ ಗೊಲ್ಲರಹಟ್ಟಿ, ಈಗೇ ಹಲವು ಗ್ರಾಮಗಳಲ್ಲಿ ಮತಬೇಟೆ ನಡೆಸುತ್ತಿರುವ ಅಭ್ಯರ್ಥಿ ಎಂ.ರವೀಶ್ ಕುಮಾರ್ ಗೆ ಗ್ರಾಮಗಳಲ್ಲಿ ಕಾರ್ಯಕರ್ತರು ಮುಖಂಡರು ಅದ್ದೂರಿ ಸ್ವಾಗತ ಕೋರುತ್ತಿದ್ದಾರೆ.
ಇನ್ನೂ ನೂತನವಾಗಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡ ಪರುಶುರಾಂಪುರ ಭಾಗದ ಯಾದವ ಸಮುದಾಯದ ಮುಖಂಡ ರಂಗಣ್ಣ, ಚಿಕ್ಕಣ ಇತರರು ಅಭ್ಯರ್ಥಿ ಎಂ.ರವೀಶ್ ಕುಮಾರ್ ಪರ ವಿವಿಧ ಗ್ರಾಮಗಳಲ್ಲಿ ಮತಯಾಚನೆ ನಡೆಸುತ್ತಿದ್ದಾರೆ.
ಇನ್ನೂ ಪತ್ರಿಕೆಯೊಂದಿಗೆ ಮಾತನಾಡಿದ ಮಾಜಿ ಜಿಪಂಸ ಸದಸ್ಯ ರಂಗಣ್ಣ, ಈಡೀ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ದಿಯಾಗಬೇಕಾದರೆ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಗೆ ಮತ ನೀಡಿ ನಿಮ್ಮ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ನಿಮ್ಮ ಸೇವೆಕನಾಗಿ ನಿಮ್ಮ ಮನೆಯ ಮಗನಾಗಿ ಸ್ಥಳೀಯವಾಗಿ ಇರುವ ರವೀಶ್ ಸಮಾಜ ಮುಖಿಯಾಗಿ ಕೆಲಸ ಮಾಡುವ ಇವರ ಸೇವೆ ಅನನ್ಯ ಆದ್ದರಿಂದ 2023ಕ್ಕೆ ಜೆಡಿಎಸ್ ಗೆ ಮತ ನೀಡುವಂತೆ ಕೋರಿದರು.

About The Author

Namma Challakere Local News
error: Content is protected !!