ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಕ್ಷೇತ್ರದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ ಅದರಂತೆ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಕ್ಷೇತ್ರದಲ್ಲಿ ಭರ್ಜರಿಯಾಗಿ ಮತಯಾಚನೆ ಮಾಡುತ್ತಿದ್ದಾರೆ.
ಇನ್ನೂ ನೆಚ್ಚಿನ ಅಭ್ಯರ್ಥಿ ಎಂ.ರವೀಶ್ ಕುಮಾರ್ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಮುಖಂಡರು ಹೂವಿನ ಮಾಲೆ ಹಾಕಿ ಅದ್ದೂರಿ ಸ್ವಾಗತ ಕೊರುತ್ತಿದ್ದಾರೆ.
ಅದರಂತೆ ಇಂದು ಕ್ಷೇತ್ರದ ಬುಡ್ನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರದಿಮ್ಮನಹಳ್ಳಿ ಬುಡ್ನಹಟ್ಟಿ ಈಗೇ ವಿವಿಧ ಗ್ರಾಮಗಳಲ್ಲಿ ಮಿಂಚಿನ ಸಂಚಾರ ನಡೆಸಿದ ಅಭ್ಯರ್ಥಿ ರವೀಶ್ ಕುಮಾರ್ ಗೆ ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ನಗರಸಭೆ ಸದಸ್ಯ ಪ್ರಮೋದ್, ಶ್ರೀನಿವಾಸ್, ದಲಿತ ಮುಖಂಡರಾದ ಟಿ.ವಿಜಯ್ ಕುಮಾರ್, ಚಂದ್ರು , ನಾಗರಾಜ್, ವೆಂಕಟೇಶ್, ಇನ್ನೂ ಅನೇಕ ಕಾರ್ಯಕರ್ತರು ಸಾಥ್ ನೀಡಿದರು.
ಇನ್ನೂ ಅಭ್ಯರ್ಥಿ ಎಂ.ರವೀಶ್ ಕುಮಾರ್ ಮಾತನಾಡಿ, 2023ಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ದ ಅದರಂತೆ ಮತದಾರರು ಚಳ್ಳಕೆರೆ ಕ್ಷೇತ್ರದಲ್ಲಿ ಆರ್ಶೀವಾದ ಮಾಡಿದರೆ ಇಮ್ಮ ಋಣ ತೀರಿಸುತ್ತೆನೆ ಅದ್ದರಿಂದ ನಮ್ಮ ಪಕ್ಷದ ಪ್ರಣಾಳಿಕೆಯಂತೆ ನಿಷ್ಠೆಯಿಂದ ಪ್ರಮಾಣಿಕ ಕೆಲಸ ಮಾಡುತ್ತ ನಿಮ್ಮ ಜೊತೆಯಲ್ಲಿರುತ್ತೆನೆ ಆದ್ದರಿಂದ ನಿಮ್ಮ ಕೆಲಸ ಮಾಡಲು ಈ ಬಾರಿ ಬದಲಾವನೆ ತನ್ನಿ ನಿಮ್ಮಿಂದ ಸಾಧ್ಯ ಎಂದರು ಮತದಾರರಲ್ಲಿ ಮನವಿ ಮಾಡಿದರು.