ಚಳ್ಳಕೆರೆ : ಆಯಿಲ್ ಸಿಟಿ ಚಳ್ಳಕೆರೆ ಕ್ಷೇತ್ರದಲ್ಲಿ 2023ರ ವಿಧಾನ ಸಭಾ ಚುನಾವಣೆ ಕಾವು ಭರ್ಜರಿಯಾಗಿ ರಂಗೇರುತ್ತಿದೆ
ಅದರAತೆ ರಾಜಾಕೀಯ ಪಕ್ಷಗಳನ್ನು ತ್ಯಜಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿದ ಕೆ.ಟಿ. ಕುಮಾರಸ್ವಾಮಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದರು.
ಮತದಾರರನ್ನು ಉದ್ದೇಶಿ ಮಾತನಾಡಿದ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ, ಕಳೆದ ಎರಡು ಬಾರಿ ನನ್ನನ್ನೂ ಅತೀ ಕಡಿಮೆ ಅಂತರದಲ್ಲಿ ಸೋಲಿಸಿದ್ದಿರೀ ಆದ್ದರಿಂದ ನಿಮ್ಮ ಮನೆಯ ಮಗನಾನು ನಿಮ್ಮ ಸೇವೆ ಮಾಡಲು ಕಳೆದ 2013ರಿಂದ ಇಲ್ಲಿಯವರೆಗೆ ನಿಮ್ಮ ಸೇವೆಯಲ್ಲಿ ಇದ್ದೆನೆ ಆದ್ದರಿಂದ 2023ಕ್ಕೆ ಪಕ್ಷೇತರವಾಗಿ ಮತ ನೀಡಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ನಿಮ್ಮ ಸ್ಥಳೀಯ ಅಭ್ಯರ್ಥಿಯನ್ನು ಬೆಂಬಲಿಸಿ ನಿಮ್ಮ ಮನೆಯ ಮಗ ಕೆಟಿ.ಕುಮಾರಸ್ವಾಮಿ ಅವರ ತಂದೆ ಸಚಿವರಾದ ತಿಪ್ಪೆಸ್ವಾಮಿ ಸೇವೆ ಚಳ್ಳಕೆರೆಯಲ್ಲಿ ಅನನ್ತವ ಆದ್ದರಿಂದ ಅವರ ಹಾದಿಯಲ್ಲಿ ಸಾಗುವ ಇವರನ್ನು 2023ಕ್ಕೆ ವಿಧಾನಸೌಧಕ್ಕೆ ಕಳಿಸಿದರೆ ನಿಮ್ಮ ಕ್ಷೇತ್ರದಲ್ಲಿ ತಾಂಡವಾಡುವ ನಿರುದ್ಯೋಗ ಸಮಸ್ಯೆ, ಹಲವಾರು ಖಾಯಿಲೆಗಳಿಂದ ಬಳಲುವ ರೋಗಿಗಳಿಗೆ ಹೈಟೆಕ್ ಆಸ್ವತ್ರೆ, ಯುವಕರ ಇತ ದೃಷ್ಠಿಯಿಂದ ಕ್ರೀಡೆ, ರೈತನಿಗೆ ಅವಶ್ಯವಾದ ವೇದಾವತಿ ಸಾಗದ ನೀರು ಈಗೇ ಹತ್ತು ಹಲವು ಯೋಜನೆಗಳ ಮೂಲಕ ನಿಮ್ಮ ಸೇವೆ ಮಾಡಲು ಬಯಸಿದ್ದ ನಿಮ್ಮ ಮಗನನ್ನು ದೂರ ಮಾಡದೆ ನಿಮ್ಮ ಆಲೋಚನೆ ತುಮಕೂರು, ಬೆಂಗಳೂರು ಕಡೆ ಹೋಗದೆ ಸ್ಥಳೀಯ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿಯ ಚಿನ್ಹೆ ತೆಂಗಿನ ತೋಟದ ಗುರುತಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಅಭ್ಯರ್ಥಿ ಕೆಟಿ.ಕುಮಾರಸ್ವಾಮಿ ಕ್ಷೇತ್ರದ ತುರುವನೂರು ಹೊಬಳಿಯ ಮುದ್ದಾಪುರ ಹೊಸಹಟ್ಟಿ ಈಗೇ ಹಲವು ಗ್ರಾಮಗಳಿಗೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಬೆಂಬಲಿಗರು, ಜೆಸಿಬಿಯಿಂದ ಬೃಹತ್ ಹೂವಿನ ಮಾಲೆ ಹಾಕುವುದರ ಮೂಲಕ ಅಭ್ಯರ್ಥಿಯನ್ನು ಸ್ವಾಗತಿಸಿದ್ದಾರೆ.
ಇನ್ನೂ ಪಕ್ಷೇತರ ಅಭ್ಯರ್ಥಿಗಿ ಎಲ್ಲೆಡೆ ಬೆಂಬಲ ವ್ಯಕ್ತವಾಗಿದ್ದು ಕೆಟಿ.ಕುಮಾರಸ್ವಾಮಿಗೆ ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ, ಮುಖಂಡ ಶಿವಪುತ್ರಪ್ಪ, ವಿಜಯೇಂದ್ರ ಈಗೇ ಕ್ಷೇತ್ರದ ಹಲವು ಮುಖಂಡರು ಸಾಥ್ ನೀಡಿದ್ದಾರೆ.

About The Author

Namma Challakere Local News
error: Content is protected !!