ಚಳ್ಳಕೆರೆ : 2023ರ ವಿಧಾನ ಸಭೆ ಎಲೆಕ್ಷನ್, ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ ಅದರಂತೆ ಕಲ್ಲಿನ ಕೋಟೆಯ ಚಳ್ಳಕೆರೆ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಹಾಲಿ ಶಾಸಕ ಟಿ.ರಘುಮೂರ್ತಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ.ಅದರಂತೆ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಹಾಗೂ ಜನ ಪರ ಯೋಜನೆಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ಕಾರ್ಯಕರ್ತರು ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹರ್ಷವ್ಯಕ್ತಪಡಿಸಿದರು.
ಕ್ಷೇತ್ರದ ತುರುವನೂರು ಹೋಬಳಿಯ ಬೋಗಳರಹಟ್ಟಿ ಗ್ರಾಮದ ಹಲವು ಮುಖಂಡರು ಗ್ರಾಮದಲ್ಲಿ ಸ್ವಯಂ ಪ್ರೇರಿತರಾಗಿ ಬಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಹಾಗೂ ವಿಧಾಸನ ಸಭೆ ಚುನಾವಣೆ ಮತಯಾಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ ಸರಕಾರ ಅವಧಿಯಲ್ಲಿ ರಾಜ್ಯದಲ್ಲಿ ಗುಡಿಸಲು ಮುಕ್ತ ಮಾಡುವ ಉದ್ದೇಶದಿಂದ ಆಶ್ರಯ, ಅಂಬೇಡ್ಕರ್, ಸೇರಿದಂತೆ ವಿವಿಧ ವಸತಿ ಯೋಜನೆಯಡಿ ಕ್ಷೇತ್ರದಲ್ಲಿ ಸಾಕಷ್ಟು ವಸತಿ ಸೌಲಭ್ಯ ಕಲ್ಪಿಸಿದ್ದು. ಬಿಜೆಪಿ ಸರಕಾರದಲ್ಲಿ ಮನೆಗಳನ್ನು ನೀಡಿಲ್ಲ ನಾನು ಕಾಂಗ್ರೆಸ್ ಶಾಸಕ ಎಂದು ಕ್ಷೆತ್ರದಕ್ಕೆ ಅನುದಾನ ಬಿಡುಗಡೆ ಮಾಡಿದ ಅನುದಾನ ಹಿಂಪಡೆದಿದ್ದಾರೆ ಇದರಿಂದ ಅಭಿವೃದ್ಧಿಗೆ ಸ್ವಲ್ಪ ಹಿನ್ನೆಡೆಯಾಗಿದೆ.
ಶಾಸಕನಾಗಿ ಆಯ್ಕೆಯಾದ ದಿನದಿಂದ 10 ವರ್ಷಗಳ ಅವಧಿಯಲ್ಲಿ ಸಹಕಾರದಿಂದ ಸಾರ್ವಜನಿಕರ ಅವಶ್ಯಕತೆಗಳನ್ನು ಅರಿತು ಸಮಯ ಪ್ರಜ್ಞೆಯಿಂದ ನಾನು ಕರ್ತವ್ಯವನ್ನು ನಿರ್ವಹಿಸಿದ್ದೇನೆ ಮತ್ತೊಮ್ಮೆ ನಿಮ್ಮ ಮುಂದೆ ಮತಯಾಚನೆ ಮಾಡಲು ಬಂದಿದ್ದೇನೆ ಮತ್ತೋಮ್ಮೆ ಮತದಾರ ಆರ್ಶೀವಾದ ಮಾಡುವಂತೆ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಈ ಬಾರಿಯೂ ನಾನು ಶಾಸಕ ನಾಗುವುದು ಖಚಿತ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
ಇನ್ನೂ ಕ್ಷೇತ್ರದ ತುರುವನೂರು ಹೋಬಳಿಯ ಬೋಗಳರಹಟ್ಟಿ ಗ್ರಾಮದ ಹಲವು ಮುಖಂಡರು, ಕಾಂಗ್ರೇಸ್ ಪಕ್ಷಕ್ಕೆ ಸೆರ್ಪಡೆಗೊಂಡರು
ಇನ್ನೂ ಎಂದಿನAತೆ ಮತಬೇಟೆಯಲ್ಲಿ ತೊಡಗಿದ ಹಾಲಿ ಶಾಸಕ ಟಿ.ರಘುಮೂರ್ತಿ ಕ್ಷೇತ್ರದ ಮೀರಸಾಬಿಹಳ್ಳಿ, ವೀಡಪನಕುಮಟೆ, ರಂಗವ್ವನಹಳ್ಳಿ, ಕರಿಕೇರೆ ಹಾಗೂ ಕರಿಕೆರೆ ಗೊಲ್ಲರಹಟ್ಟಿಗಳಲ್ಲಿ ಮತಯಾಚನೆ ಮಾಡಿದ ರಘುಮೂರ್ತಿಗೆ ಅಭೂತರ್ವಾವಾದ ಬೆಂಬಲ ವ್ಯಕ್ತವಾಯಿತು.
ಇನ್ನೂ ಹಾಲಿ ಶಾಸಕ ಟಿ.ರಘುಮೂರ್ತಿ ಹೋಗುತ್ತಿದ್ದಂತೆ ಕೈ ಕಾರ್ಯಕರ್ತರು ಬೃಹತ್ ಹೂವಿನ ಮಾಲೆ ಹಾಕುವುದರ ಮೂಲಕ ಅದ್ದೂರಿ ಸ್ವಾಗತ ಕೋರಿದರು.

About The Author

Namma Challakere Local News
error: Content is protected !!