ಚಳ್ಳಕೆರೆ : ಆಂದ್ರದ ಗಡಿ ಭಾಗವಾದ ಚಳ್ಳಕೆರೆ ತಾಲೂಕಿನಲ್ಲಿ ನಕಲಿ ವೈಧ್ಯರ ಹಾವಳಿ ಎಚ್ಚಗಿದೆ ಇನ್ನೂ ಮುಗ್ದ ಗ್ರಾಮೀಣ ಪ್ರದೇಶದ ಜನರನ್ನೇ ಗುರುಯಾಗಿಸಿಕೊಂಡ ನಕಲಿ ವೈದ್ಯರು ಸಾರ್ವಜನಿಕರಿಗೆ ಮಂಕುಬೂದಿ ಎರಚುವುದರಲ್ಲಿ ಎರಡು ಮಾತಿಲ್ಲ
ಅದರಂತೆ ಕಳೆದ ಹಲವು ದಿನಗಳಿಂದ ನಕಲಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಚಿತ್ರನಾಯ್ಕನಹಳ್ಳಿ ಗ್ರಾಮದ ಮಹಿಳೆಗೆ ಚಿಕಿತ್ಸೆ ಕೊಡುತ್ತೆನೆ ಎಂದು ನಂಬಿಸಿ ಸಾವಿರಾರು ರೂಪಾಯಿಗಳನ್ನು ತೆಗೆದುಕೊಂದು ಪಾರರಾಯಾಗಿದ್ದಾನೆ
ಇನ್ನೂ ಸಂಪೂರ್ಣ ವಿಳಾಸ ಕೂಡ ನೀಡದೆ ಕೇವಲ ಮಹಿಳೆಯರಿಗೆ ನಂಬಿಸಿ ಅವರ ಖಾಯಿಲೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿ ಹಣ ಪೀಕುವ ಹಲವು ನಕಲಿ ವೈದ್ಯರ ಕಡಿವಾಣಕ್ಕೆ ಆರೋಗ್ಯ ಇಲಾಖೆ ಮುಂದಾಗುವುದಾ ಕಾದು ನೊಡಬೇಕಿದೆ