ನಾಯಕನಹಟ್ಟಿ:: ಸಮಾಜದ ಅಂಕುಡೊಂಕು ಸಿದ್ದುವಲ್ಲಿ ವಿಶ್ವಗುರು ಬಸವಣ್ಣನವರ ಪಾತ್ರ ಮಹತ್ವವಾದದ್ದು ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಎಸ್ ಮಂಜಣ್ಣ ಹೇಳಿದ್ದಾರೆ. ಅವರು ಭಾನುವಾರ ಗ್ರಾಮದ ಬಸವಣ್ಣನವರ ದೇವಸ್ಥಾನದ ಆವರಣದಲ್ಲಿ ಬಸವ ಕೇಂದ್ರ ವತಿಯಿಂದ ವಿಶ್ವಗುರು ಬಸವಣ್ಣನವರ 890ನೇ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಮಾತನಾಡಿದ್ದಾರೆ. ಇವನ್ಯಾರವ ಇವನ್ಯಾರವ ಎಂಬದಿರಯ್ಯ ಇವ ನಮ್ಮವ ಇವ ನಮ್ಮವ ಎನಿರಯ್ಯ ಎಂದು ಜಗತ್ತಿಗೆ ಸಾರಿದ ಮಹಾನ್ ಚೇತನ ವಿಶ್ವಗುರು ಬಸವಣ್ಣನವರು ಎಂದು ತಿಳಿಸಿದರು.
ಬಸವ ಕೇಂದ್ರ ಅಧ್ಯಕ್ಷ ಕೆ ನಾಗರಾಜ್ ಮಾತನಾಡಿ. ಗ್ರಾಮದಲ್ಲಿ ಪ್ರತಿ ವರ್ಷವೂ ಎಲ್ಲಾ ಸಮುದಾಯದವರ ಜೊತೆಗೂಡಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಆಚರಣೆ ಮಾಡುತ್ತೇವೆ ಎಂದರು.
ಗ್ರಾಮದ ಯುವ ಮುಖಂಡ ಜಿ ಎಸ್ ತಿಪ್ಪೇಸ್ವಾಮಿ ಮಾತನಾಡಿ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಎಲ್ಲಾ ಸಮುದಾಯವನ್ನ ಸೇರಿಸಿಕೊಂಡು ಅನುಭವ ಮಂಟಪವನ್ನು ಸ್ಥಾಪಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಯಾವುದೇ ಜಾತಿ ಧರ್ಮ ಭೇದವಿಲ್ಲದೆ ಅಂತರ್ಜಾತಿ ವಿವಾಹ ಮಾಡುವ ಮೂಲಕ ಇಡೀ ವಿಶ್ವಮಟ್ಟದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದ್ದಾರೆ ಅವರ ತತ್ವ ಸಿದ್ಧಾಂತಗಳನ್ನ ರೂಡಿಸಿಕೊಳ್ಳುವಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ವವಾದಿದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ ಎಸ್. ಮಂಜಣ್ಣ, ಗ್ರಾಮ ಪಂಚಾಯತಿ ಸದಸ್ಯೆ ಶ್ರೀಮತಿ ಪ್ರೇಮಲತಾ ಶಂಕರ್ ಮೂರ್ತಿ, ಬಸವ ಕೇಂದ್ರ ಅಧ್ಯಕ್ಷ ಕೆ ನಾಗರಾಜ್, ಶರಣರಾದ ಬಸವ ಕೇಂದ್ರ ಕಾರ್ಯದರ್ಶಿ ಡಿ ಎಸ್ ತಿಪ್ಪೇಸ್ವಾಮಿ, ಜಿ ಆರ್ ಸೋಮಶೇಖರ್, ಟಿ ಶಂಕರ್ ಮೂರ್ತಿ, ಎಸ್ ಎಂ ವಿಜಯ್ ಕುಮಾರ್, ಎಸ್ ಟಿ ರಾಜಣ್ಣ, ಡಿ ಎಸ್ ಮನೋಹರ್, ಡಿ ಎಂ ರಾಜೇಶ್, ಜಿ ಎಸ್ ತಿಪ್ಪೇಸ್ವಾಮಿ, ಜಿ ನಾಗರಾಜ್, ಶಾಂತಕುಮಾರ್, ದರ್ಶನ್, ಗೌಡ್ರು ಶಿವಕುಮಾರ್, ಜಿಲ್ಲಾ ಡಿಎಸ್ಎಸ್ ಸಂಚಾಲಕ ಜಿ ಬಿ ತಿಪ್ಪೇಸ್ವಾಮಿ, ಸಂತೋಷ್,
ಶರಣೀಯರಾದ ವಿಜಯಮ್ಮ, ತಿಪ್ಪಮ್ಮ ,ಕೆ ಟಿ ನಾಗರತ್ನಮ್ಮ, ಶಾಂತಮ್ಮ ,ಶ್ರೀಮತಿ ಪ್ರತಿಭಾ, ಮುಂತಾದವರು ಭಾಗವಹಿಸಿದ್ದರು,