ಚಳ್ಳಕೆರೆ : ರಾಜ್ಯದ ವಿಧಾನ ಸಭಾ ಚುನಾವಣೆಗೆ ಕೇಲವೆ ಕೆಲವು ದಿನಗಳು ಬಾಕಿ ಉಳಿದಿರುವಾಗಲೇ ವಿವಿಧ ಪಕ್ಷಗಳಿಂದ ಕಣಕ್ಕಿಳಿದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ತಾಮು ನೀ ಮುಂದು ಎಂದು ತಾಲೂಕು ಕಛೇರಿಯತ್ತ ದಾವಿಸುತ್ತಿದ್ದಾರೆ ಅದರಂತೆ ಇಂದು ಆಯಿಲ್ ಸಿಟಿಯಲ್ಲಿ ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಮೊದಲಿಗೆ ಆಮ್ ಆದ್ಮಿ ಪಕ್ಷದ ಬಿ.ಪಾಪಣ್ಣ, ಹಾಗೂ ಪತ್ನಿ ಮಾರಕ್ಕ ರವರು ಆಮ್ ಆದ್ಮಿ ಪಕ್ಷದಿಂದ ಕಣಕ್ಕಿಳಿದ್ದಾರೆ. ಇನ್ನೂ ಬಿಜೆಪಿ ಪಕ್ಷದಿಂದ ಆರ್.ಅನಿಲ್ ಕುಮಾರ್ ರವರು ನಾಮಪತ್ರ ಸಲ್ಲಿಸಿದರೆ ಜೆಡಿಎಸ್ ಪಕ್ಷದಿಂದ ಎಂ.ರವೀಶ್ ಕುಮಾರ್ ಎರಡು ನಾಮಪತ್ರ ಸಲ್ಲಿಸಿದ್ದಾರೆ.
ಒಟ್ಟಾರೆ ಆಯಿಲ್ ಸಿಟಿಯಲ್ಲಿ ಇಂದು ಐದು ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣೆ ಅಧಿಕಾರಿ ಬಿ.ಆನಂದ್ ತಿಳಿಸಿದ್ದಾರೆ.
ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಅಂಜಮ್ಮ ರವರು ಮೊದಲೆಯರವರು ಹಾಗಿದ್ದಾರೆ ನಂತರ ಕೆಆರ್ ಎಸ್ ಪಕ್ಷದಿಂದ ಬೋಜರಾಜ್ ರವರು ನಮಪತ್ರ ಸಲ್ಲಿಸಿದ್ದರು
ಇನ್ನೂ ಅಭೂತಪೂರ್ವವಾದ ಜನ ಬೆಂಬಲದಿAದ ನಗರದ ಚಳ್ಳಕೆರೆಮ್ಮ ದೇವಾಸ್ಥಾನದಿಂದ ಆಗಮಿಸಿದ ಜೆಡಿಎಸ್ ಅಭ್ಯರ್ಥಿ ಎಂ.ರವಿಶ್‌ಕುಮಾರ್ ನಾಮಪತ್ರ ಸಲ್ಲಿಸಲು ಮೆರವಣೆಗೆ ಮೂಲಕ ಆಗಮಿಸಿದರು.
ದಾರಿಯುದ್ದಕ್ಕೂ ವಿವಿಧ ಕಲಾ ತಂಡಗಳು ಮೆರಗು ತಂದವು ಇನ್ನೂ ಹಳ್ಳಿಗಳಿಂದ ವಿವಿಧ ವಾಹನಗಳಲ್ಲಿ ಬಿಸಿಲು ಲೆಕ್ಕಿಸದೆ ಆಗಮಿಸಿದ ಕಾರ್ಯಕರ್ತರು ಜೆಡಿಎಸ್ ಪರ ಜಯ ಘೋಷಣೆಗಳನ್ನು ಕೂಗುತ್ತ ತಾಲೂಕು ಕಛೇರಿಯತ್ತ ದಾವಿಸಿದರು.
ಇನ್ನೂ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಜೊತೆಗೆ ಸಹೋದರ ಹಾಗೂ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ನಗರಸಭೆ ಸದಸ್ಯ ವಿಶುಕುಮಾರ್, ಶ್ರೀಧರ್‌ಚಾರ್ ಮೊದಲಿಗೆ ಮುಖ್ಯಧ್ವಾರದಿಂದ ಆಗಮಿಸಿದರು ಇನ್ನೂ ಜೆಡಿಎಸ್ ಅಭ್ಯರ್ಥಿಗೆ ಸೂಚಕರಾಗಿದ್ದೆ ನಾನು, ನನ್ನನ್ನೆ ಒಳಗಡೆ ಬಿಡುವುದಿಲ್ಲ ಎಂದು ನಗರಸಭೆ ಸದಸ್ಯರೊಬ್ಬರು ಪೊಲೀಸರೊಂದಿಗೆ ವಾಗ್ದಾದ ಮಾಡಿ ನಂತರ ಒಳಗಡೆ ಪ್ರವೇಶ ಮಾಡಿದರು.

ಇದಕ್ಕೂ ಮುನ್ನವೇ ಬಿಜೆಪಿ ಪಕ್ಷದ ಸುಮಾರು ಜನರು ನಾಮಪತ್ರ ಸಲ್ಲಿಕೆಗೆ ಒಳ ನುಸುಳಿದ್ದರು.

ಜೆಡಿಎಸ್ ಕಾರ್ಯಕರ್ತರ ಜಯಘೊಷ :

ಇನ್ನೂ ಈಡೀ ಜೆಡಿಎಸ್ ಕಾರ್ಯಕರ್ತರು ಮುಖಂಡರು ದಂಡು ತಾಲೂಕು ಕಚೇರಿ ಬಳಿ ಇರುವಾಗ ಬಿಜೆಪಿ ಪಕ್ಷದ ಅಭ್ಯರ್ಥಿ ಆರ್.ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿ ವಾಪಸ್ಸ್ ಬರುವಾಗ ತಮ್ಮ ಕಾರನ್ನು ತಾಲೂಕು ಕಛೇರಿ ಗೇಟ್ ಸಮೀಪ ತಂದು ಕಾರು ಹತ್ತಲು ಹೋದಾಗ ಪಕ್ಕದಲ್ಲೆ ನೆರೆದಿದ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್‌ಗೆ ಜಯ ಘೋಷಣೆಗಳನ್ನು ಕೂಗಿ ಜೆಡಿಎಸ್ ಬಾವುಟ ಹಿಡಿದು ಕಾರು ಸುತ್ತುವರೆದರು ಇನ್ನೂ ಮಂಡಲ ಅಧ್ಯಕ್ಷರನ್ನು ಹಾಗೂ ಇತರರನ್ನು ಸುತ್ತವರೆದು ಕಾರ್ಯಕರ್ತರು ಈ ಬಾರಿ ಜೆಡಿಎಸ್ ಗೆಲ್ಲುತ್ತೆ ನಮ್ಮ ಅಭ್ಯರ್ಥಿ ಎಂ.ರವೀಶ್ ಎಂಎಲ್‌ಎ ಹಾಗುತ್ತಾರೆ ಎಂದು ಜಯ ಘೊಷಣೆಗಳನ್ನು ಕೂಗುವ ದೃಶ್ಯಗಳು ಎಲ್ಲೆಡೆ ಕೇಳಿಬಂದವು

ಇನ್ನೂ ಪೊಲೀಸರ ಸಹಾಯದಿಂದ ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಇತರರು ಸ್ಥಳದಿಂದ ಕಾಲ್‌ಕ್ಕಿತ್ತರು .
ಈಗೇ ಇಂದು ಜೆಡಿಎಸ್ ಅಬ್ಬರದ ಮದ್ಯೆ ಬಿಜೆಪಿ ಪಕ್ಷದ ಮುಖಂಡರಿಗೆ ಬಾರೀ ಮುಖ ಭಂಗವಾಯಿತು ಎಂದು ಸಾರ್ವಜನಿಕರು ಗುಸು ಗುಸು ಗುಡುವ ಮಾತುಗಳು ಎಲ್ಲೆಡೆ ಕೇಳಿಬಂದವು
ಬಾಕಿ ಉಳಿದ ಅಭ್ಯರ್ಥಿಗಳು :
ಒಟ್ಟಾರೆ ಆಯಿಲ್ ಸಿಟಿಯ ರಾಜಾಕೀಯಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ರಘುಮೂರ್ತಿ ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಮಾತ್ರ ನಾಮಪತ್ರ ಸಲ್ಲಿಸಲು ಬಾಕಿ ಉಳಿದಿದ್ದು ಏಪ್ರಿಲ್20 ರಂದು ಕೊನೆ ದಿನದ ವರೆಗೆ ಎಷ್ಟೆಲ್ಲಾ ನಾಮಪತ್ರ ಸಲ್ಲಿಕೆಯಾಗುತ್ತಾವೆ ಎಂಬುದು ಮಾತ್ರ ಕಾದು ನೋಡಬೇಕಿದೆ.
ಪೋಟೋ..

  1. ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಕಾರು ಸುತ್ತುವರೆದ ಜೆಡಿಎಸ್ ಕಾರ್ಯಕರ್ತರು
  2. ನಾಮಪತ್ರಕ್ಕೆ ಬಿಜೆಪಿ ಪಕ್ಷದ ಸುಮಾರು ಜನರು ಬಾಗಿ
  3. ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ರೋಡ್ ಶೊ
  4. ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ನಾಮಪತ್ರ ಸಲ್ಲಿಕೆ
  5. ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ನಾಮಪತ್ರ ಸಲ್ಲಿಕೆ
  6. ಆಮ್ ಆದ್ಮಿ ಪಕ್ಷದ ಬಿ.ಪಾಪಣ್ಣ ನಾಮಪತ್ರ ಸಲ್ಲಿಕೆ
Namma Challakere Local News
error: Content is protected !!