ಚಳ್ಳಕೆರೆÀ : ಆಯಿಲ್ ಸಿಟಿಯ ಕದನಕ್ಕೆ ರಣ ಕಲಿಗಳು ಈಗಾಗಲೇ ಆಖಾಡ ಸಜ್ಜು ಮಾಡಿದ್ದು ತಮ್ಮ ತಮ್ಮ ಪಕ್ಷದ ವರಿಷ್ಠರಿಂದ ಬಿ.ಪಾರಂ ಪತ್ರವನ್ನು ಕೂಡ ತಮ್ಮ ಕೈಗೆ ಪಡೆದು ಏಪ್ರಿಲ್ 16ರಿಂದ ಬಿರುಸಿನ ಪ್ರಚಾರ ಕೈಗೊಳ್ಳಲು ಅಭ್ಯರ್ಥಿಗಳು ಭರ್ಜರಿ ತಾಲೀಮು ನಡೆಸುತ್ತಿದ್ದಾರೆ
ಅದರಂತೆ ಹಾಲಿ ಶಾಸಕ ಟಿ.ರಘುಮೂರ್ತಿ ರವರು ಕಾಂಗ್ರೇಸ್ ಪಕ್ಷದ ಬಿ.ಪಾರಂ ತಂದು ಏಪ್ರಿಲ್ 19 ರಂದು ನಾಮ ಪತ್ರ ಸಲ್ಲಿಸಲು ನಗರದಲ್ಲಿ ಮತಯಾಚನೆ ಮಾಡುತ್ತಿದ್ದಾರೆ.
ಅದರಂತೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ರವೀಶ್ ಕುಮಾರ್ ಕೂಡ ಜೆಡಿಎಸ್ ಪಕ್ಷದ ವರಿಷ್ಠರಿಂದ ಬಿ.ಪಾರಂ ಪತ್ರ ತಂದು ಭದ್ರವಾಗಿ ತಮ್ಮ ಕಿಸೆಯೊಳೆಗೆ ಸೇರಿಸಿ ಮತಯಾಚನೆಯಲ್ಲಿ ತೊಡಗಿದ್ದಾರೆ
ಚಳ್ಳಕೆರೆ ಜನತೆಯ ಬಹು ನೀರೀಕ್ಷೆಯೆ ಬಿಜೆಪಿ ಟಿಕೆಟ್ ಆರ್. ಅನಿಲ್ ಕುಮಾರ್ ದಕ್ಕಿಸಿಕೊಂಡು ಬಿ.ಪಾರಂ ಕೂಡ ತನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಈಗೇ ಮೂರು ಪಕ್ಷಗಳಿಂದ ತಮ್ಮ ನಾಯಕರುಗಳು ಬಿ.ಪಾರಂ. ಪತ್ರವನ್ನು ಪಡೆದು ಸಮಯ ನೋಡಿ ನಾಮ ಪತ್ರ ಸಲ್ಲಿಕೆಗೆ ಶಾಸ್ತç ಕೇಳಿ ನಾಮಪತ್ರ ಸಲ್ಲಿಸುವ ವಾಡಿಕೆಯು ಕೂಡ ಇಲ್ಲಿ ನಾವು ಕಾಣಬಹುದು. ಅದರಂತೆ ತಮ್ಮ ವರ್ಚಸ್ಸು ಪಡೆಯಲು ಕ್ಷೇತ್ರದ ಜನತೆಯಟ್ಟಿಗೆ ನಾಮಪತ್ರ ಸಲ್ಲಿಸುವುದು ಹಾಗೂ ತಮ್ಮ ರಾಜಾಕೀಯ ರಣ ಕಹಳೆ ನಾಮಪತ್ರದಿಂದ ಮೊಳಗಿಸುವುದು ಇದೇ ಮೊದಲೇನಲ್ಲ ಆದ್ದರಿಂದ ಏಪ್ರಿಲ್ 20ರ ಕೊನೆಯ ದಿನಾಂಕದೊಳಗೆ ನಾಮಪತ್ರ ಸಲ್ಲಿಸಿ ನಿಜವಾದ ರಾಜಕೀಯಕ್ಕೆ ಎಂಟ್ರಿ ಕೊಡುವ ಅಭ್ಯರ್ಥಿಗಳ ನಿಲುವು ಕಾದು ನೊಡಬೇಕಿದೆ.