ಚಳ್ಳಕೆರೆ : ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದೆನೆ, ಕಳೆದ ಹತ್ತು ವರ್ಷದ ಅವಧಿಯಲ್ಲಿ ಪ್ರತಿಯೊಂದು ಸಮುದಾಯಕ್ಕೂ, ಪ್ರತಿಯೊಂದು ವರ್ಗಕ್ಕೂ ನ್ಯಾಯ ಸಮ್ಮತವಾದ ಮೂಲ ಭೂತ ಸೌಲಭ್ಯ ಹೊದಗಿಸಿದ್ದೆನೆ ಇನ್ನೂ ಹೆಚ್ಚಿನದಾಗಿ ಶಿಕ್ಷಣಕ್ಕೆ ಹಾಗೂ ನೀರಾವರಿಗೆ ಮಹತ್ವ ನೀಡಿದ್ದೆನೆ ಆದ್ದರಿಂದ ಈ ಭಾರಿ ಮತದಾರರು ನನ್ನ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಮ್ಮ ಹಿಂಗಿತ ವ್ಯಕ್ತಪಡಿಸಿದರು.
ಅವರು ನಗರದ ವಾಲ್ಮೀಕಿ ನಗರ, ರಹಿಂ ನಗರ, ತ್ಯಾಗರಾಜ್ ನಗರ ಈಗೇ ವಿವಿಧ ವಾರ್ಡ್ಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಮನೆ ಮನೆಗೆ ಬೇಟಿ ನೀಡುವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.
ನಿಮ್ಮ ಸರ್ವಾಂಗೀನ ಅಭಿವೃದ್ದಿಗೆ ಕಾಂಗ್ರೇಸ್‌ಗೆ ಕೈ ಜೋಡಿಸಿ, ಶೂನ್ಯ ಅಭಿವೃದ್ದಿ ಸರ್ಕಾರಗಳನ್ನು ಕಿತ್ತೆಸೆಯಿರಿ, ನಿಮ್ಮ ಕ್ಷೇತ್ರದ ಅಭಿವೃದ್ದಿಗೆ ನಿಮ್ಮ ಮಕ್ಕಳ ಭವಿಷ್ಯಕ್ಕೆ ಕಾಂಗ್ರೇಸ್‌ಗೆ ಮತ ನೀಡಿ ಎಂದರು.
ಇನ್ನೂ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ವೀರಭದ್ರಯ್ಯ ಮಾತನಾಡಿ, ಈಡೀ ರಾಜ್ಯದಲ್ಲಿ ಯಾವ ಶಾಸಕರು ಮಾಡದೆ ಇರುವ ಅಭಿವೃಧ್ದಿ ಚಳ್ಳಕೆರೆ ಶಾಸಕರು ಮಾಡಿದ್ದರೆ.ವಿಂತಹ ವ್ಯಕ್ತಿಗಳು ನಮಗೆ ನಮ್ಮ ಕ್ಷೇತ್ರಕ್ಕೆ ಸಿಕ್ಕಿರುವುದು ಪುಣ್ಯ ಎಂದರು.
ಈದೇ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ಜಿಪಂ.ಮಾಜಿ ಸದಸ್ಯ ಬಿ.ಪ್ರಕಾಶ್ ಮೂರ್ತಿ, ನಗರಸಭೆ ಸದಸ್ಯ ರಾಘವೇಂದ್ರ, ಟಿ.ಮಲ್ಲಿಕಾರ್ಜುನಾ, ಸುಮಕ್ಕ ಭರಮಣ್ಣ, ಕವಿತಾ ಬೋರಯ್ಯ, ಜಯಲಕ್ಷಿö್ಮÃ ಕೃಷ್ಣಮೂರ್ತಿ, ವಿರುಪಾಕ್ಷ, ಸೌಭಾಗ್ಯ ತಿಪ್ಪೆಸ್ವಾಮಿ, ಜಿ.ಟಿ.ಗೊಂವಿದರಾಜ್, ಶೇಖರಪ್ಪ, ಶಿವಸ್ವಾಮಿ, ಭರಮಣ್ಣ, ಸೂರಿ, ಕೃಷ್ಣಮೂರ್ತಿ, ಪುಜಾರಿ ಪರಸಪ್ಪ, ಹಾಯಕಲ್ ವಿರುಪಾಕ್ಷಪ್ಪ, ಸೈಯದ್, ಮುಜೀಬ್, ಸೈಪುಲ್ಲಾ, ಲಕ್ಷಿö್ಮÃದೇವಿ, ಭಾಗ್ಯಮ್ಮ, ಸರಸ್ವತಿ, ಹಳೆನಗರದ ವೀರಭದ್ರ, ಪ್ರಚಾರ ಸಮಿತಿ ಉಪಾಧ್ಯಕ್ಷ ನಗರಂಗೆರೆ ಮಂಜುನಾಥ್ ಇತರರು ಇದ್ದರು.