ಚಳ್ಳಕೆರೆ: ಪ್ರತಿ ವರ್ಷದಂತೆ ಈ ವರ್ಷವೂ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದು ಯಾವುದೇ ರೀತಿಯ ಅಹಿತಕರ ಘಟನೆ ನಡೆದಂತೆ ಮುಂಜಾಗ್ರತೆ ವಹಿಸಿ ಪರೀಕ್ಷೆಯನ್ನು ಯಶಸ್ವಿಗೊಳಿಸಲು ನಿರ್ಧರಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ 23ನೇ ಸಾಲಿನ ಫಲಿತಾಂಶ 97.54 ಅನ್ನು ಪಡೆದು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲಿ ತಾಲೂಕು 8ನೇ ಸ್ಥಾನ ಪಡೆದಿತ್ತು ಈ ವರ್ಷ ಮಾರ್ಚ್ ಏಪ್ರಿಲ್ 2023 ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮ ಪಡಿಸಲು ಅನೇಕ ಯೋಜನೆಗಳನ್ನು ರೂಪಿಸಿ ಶಾಲೆಗಳ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಉತ್ತಮ ಬೋಧನೆ ಕಾರ್ಯಗಳನ್ನು ನಿರ್ವಹಿಸಿದ್ದಾರೆ ಅದರಂತೆ ಮಕ್ಕಳು ಸಹ ಪರೀಕ್ಷೆ ಎದುರಿಸಲು ಸನ್ನದ್ದರಾಗಿದ್ದಾರೆ ಶಿಕ್ಷಣ ಇಲಾಖೆ ವತಿಯಿಂದ ಎಲ್ಲ ರೀತಿಯ ಚರ್ಚೆಗಳನ್ನು ಮಾಡಿ ಮಕ್ಕಳ ಕಲಿಕೆಗಾಗಿ ವರ್ಷಪೂರ್ತಿ ಶಾಲೆ, ಕಲಿಕಾ ಸಹಾಯವಾಣಿ, ಮಕ್ಕಳು ಎಕ್ಸಾಮ್ ಬರೆಯುವ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಔಷಧಪಚಾರ ಶಿಕ್ಷಕರಿಗೆ ಊಟದ ವ್ಯವಸ್ಥೆ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಚೀಟಿ ಕೊಡುವುದನ್ನು ತಪ್ಪಿಸಲು ಪೊಲೀಸ್ ಸಿಬ್ಬಂದಿ ವ್ಯವಸ್ಥೆ ಇನ್ನು ಹಲವಾರು ಯೋಜನೆಗಳನ್ನು ರೂಪಿಸಿ ಬರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮಕ್ಕಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳ ,ಪರೀಕ್ಷಾ ಭಯ ನಿವಾರಣೆ ಹಾಗೂ ಪರೀಕ್ಷಾ ಸಮಯದಲ್ಲಿ ಸ್ಕ್ವಾಡ್ ಗಳ ನಿರ್ವಹಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಫಲಿತಾಂಶ ಉತ್ತಮ ಪಡಿಸಲು ಶ್ರಮಿಸಲಾಗಿದೆ ಪರೀಕ್ಷಾ ದೃಷ್ಟಿಯಿಂದ ಪರೀಕ್ಷೆಯ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರೀಕ್ಷೆ ಕೇಂದ್ರಗಳ ಬಳಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಪೋಷಕರು ಸಹ ಬರುವಂತಿಲ್ಲ ಪರೀಕ್ಷೆ ಸುಗಮವಾಗಿ ನಡೆಯಲು ಸ್ಥಾನಿಕ ಜಾಗೃತ ದಳ ಸಂಚಾರಿ ಜಾಗೃತ ದಳ ಪೊಲೀಸ್ ಇಲಾಖೆ ವೈದ್ಯಕೀಯ ಇಲಾಖೆ ಸೇರಿದಂತೆ ಹಲವು ಕಟ್ಟನಟ್ಟಿನ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಈ ಬಾರಿ ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಗಂಡು 2602 ಹೆಣ್ಣು 2357 ಒಟ್ಟು 4959 ವಿಧ್ಯಾರ್ಥಿಗಳು ನೊಂದಾಯಿಸಿಕೊAಡಿದ್ದಾರೆ,
ತಾಲೂಕಿನ 6 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ದಿನಾಂಕ 31-3- 2023 ರಂದು ಶುಕ್ರವಾರ ಪ್ರಥಮ ಭಾಷೆ ಕನ್ನಡ 3-4- 23ರಂದು ಸೋಮವಾರ ಗಣಿತ ಸಮಾಜಶಾಸ್ತ್ರ6-4- 23ರಂದು ದ್ವಿತೀಯ ಭಾಷೆ ಇಂಗ್ಲಿಷ್ 10-4- 23ರಂದು ವಿಜ್ಞಾನ 12-4- 23ರಂದು ತೃತೀಯ ಭಾಷೆ ಹಿಂದಿ 15-4- 23 ರಂದು ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇನ್ನು ಈ ವೇಳೆ ತಾಲೂಕು ಆಡಳಿತದ ಶಿರಸ್ಕಾರ ಕೆ ಎಸ್ ಸದಾಶಿವಪ್ಪ ಮಂಜುನಾಥ ರೆಡ್ಡಿ ಡಿ ಟಿ ಶ್ರೀನಿವಾಸ್ ಮಂಜುಳಾ ಸೇರಿದಂತೆ ಅನೇಕ ಮುಖ್ಯ ಶಿಕ್ಷಕರು ಶಿಕ್ಷಕರು ಭಾಗಿಯಾಗಿದ್ದರು