ಚಳ್ಳಕೆರೆ : ರಾಜ್ಯದ ಮುಖ್ಯ ಮಂತ್ರಿ ನೀಡುವ 2022ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಚಳ್ಳಕೆರೆ ನಗರದ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೆ.ಸತೀಶ್‌ನಾಯ್ಕ ಆಯ್ಕೆಯಾಗಿದ್ದಾರೆ.
2022 ನೇ ಸಾಲಿನಲ್ಲಿ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಅಂತರಾಜ್ಯ ಚೈನ್, ದ್ವಿಚಕ್ರವಾಹನ, ಮನೆಗಳ್ಳತನ, ಸರಗಳ್ಳತನ, ಅಪಹರಣ, ಒಂದು ಟ್ರಾಕ್ಟರ್ ಕಳವುಬೇದಿಯಲು ಹೋಗಿ ಮೂರು ಟ್ರಾಕ್ಟರ್ ಪತ್ತೆ ಕಳ್ಳತನ ಪ್ರಕರಣಗಳ ಮಾಹಿತಿ ಸಂಗ್ರಹಿಸಿ ಅಪರಾಧಿಗಳನ್ನು ಮಟ್ಟ ಹಾಕಿದ್ದು, ಕಳುವಾಗಿದ್ದ ಮಾಲು ಸಹಿತ ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಮಾಡಿದ ಪಿಎಸ್‌ಐ ಸತೀಶ್‌ನಾಯ್ಕ ಇವರಿಗೆ ಮುಖ್ಯ ಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಪಿಎಸ್‌ಐ ಸತೀಶ್‌ನಾಯ್ಕ ಅವರ ಜನಪರ ಅತ್ಯುತ್ತಮ ಸೇವೆಯನ್ನು ನೋಡಿ ಸರ್ಕಾರ ಮುಖ್ಯಮಂತ್ರಿ ಪದಕ ನೀಡಿ ಮಾ. 31 ರಂದು ಗೌರವಿಸಲಿದೆ.

About The Author

Namma Challakere Local News
error: Content is protected !!