ಚಳ್ಳಕೆರೆ : ವಿದ್ಯಾವಂತ ಯುವಕರು ಸ್ವಂತ ಉದ್ಯೋಗ ಮಾಡಲು ಹಾಗೂ ಸ್ವಾವಲಂಬಿ ಜೀವನ ನಡೆಸಲು ದ್ವಿಚಕ್ರವಾಹನ ಸೌಲಭ್ಯ ನೀಡಲಾಗಿದ್ದು ಯುವಕರು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಮುಂದೆ ಬರುವಂತೆ ಶಾಸಕ ಟಿ.ರಘುಮೂರ್ತಿ ಕಿವಿಮಾತು ಹೇಳಿದರು.
ನಗರದ ಶಾಸಕರ ಭವನದ ಸಮಾಜ ಕಲ್ತಾಣ ,ಹಿಂದುಳಿದ ವರ್ಗಗಳ ಕಲ್ಯಾಣ ಲಾಖೆ ಸೇರಿದಂತೆ ವಿವಿದ ನಿಗಮಗಳ ಯೋನೆಯಡಿಯಲ್ಲಿ ನಿರುದ್ಯೋಗ ಯುಕರಿಗೆ 50 ಸಾವಿರ ರೂ ಸಹಾಯಧನ ವೆಚ್ಚದಲ್ಲಿ ಆಯ್ಕೆಯಾದ ವಿವಿಧÀ ಫಲಾನುಭವಿಗಳಿಗೆ ದ್ವಿಚಕ್ರ ಸರಕು ಸಾಗಾಣಿಕೆ ವಾಹನಗಳನ್ನು ವಿತರಿಸಿ ಮಾತನಾಡಿದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 80 ದ್ವಿಚಕ್ರವಾಹನಗಳು ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಇಂದು ಸಾಂಕೇತಿಕವಾಗಿ 17 ದ್ವಿಚಕ್ರ ವಾಹನಗಳನ್ನು ವಿತರಣೆ ಮಾಡಲಾಗಿದೆ. 50ಸಾವಿರ ಸಬ್ಸಿಡ್ ದರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 20, ಆದಿಜಾಂಬವ ಅಭಿವೃದ್ಧಿ ನಿಗಮ 20, ತಾಂಡ ಅಭಿವೃದ್ದಿ 10, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 20 ದ್ವಿಚಕ್ರ ಸರಕು ಸಾಗಾಣಿಕೆ ವಾಹನಗಳನ್ನು ವಿತರಣೆ ಮಾಡಲಾಗುತ್ತಿದೆ ಎಮದು ತಿಳಿಸಿದರು.
ಈ ವೇಳೆ, ನಗರಸಭೆ ಅಧ್ಯಕ್ಷೆ ಸುಮಕ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ, ಸದಸ್ಯರಾದ ಮಲ್ಲಿಕಾರ್ಜುನ್, ವೀರಭದ್ರಪ್ಪ, ರಮೇಶ್, ವೈ. ಪ್ರಕಾಶ್, ಜೈತುನ್ಬಿ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ಮಂಜುಳ ಸೇರಿದಂತೆ ಫಲಾನುಭವಿಗಳು ಇತರರಿದ್ದರು.