ನಾಯಕನಹಟ್ಟಿ :: ಬಲನಾಯಕನಹಟ್ಟಿ ಗ್ರಾಮದ ಶ್ರೀ ದೊಡ್ಲಮಾರಿಕಾಂಬ ದೇವಿಯು ಗ್ರಾಮದ ಪ್ರತಿಯೊಬ್ಬರಿಗೂ ಆಶೀರ್ವದಿಸಲಿ ಎಂದು ಜೆಡಿಎಸ್ ಪ್ರಬಲ ಟಿಕೆಟ್ ಆಕಾಂಕ್ಷಿ ಟಿವಿರಭದ್ರಪ್ಪ ಹೇಳಿದ್ದಾರೆ.

ಅವರು ಮಂಗಳವಾರ ಸಮೀಪದ ಬಲನಾಯಕನಹಳ್ಳಿ ಗ್ರಾಮದ ಶ್ರೀ ದೊಡ್ಲ ಮಾರಿಕಾಂಬ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದು ನಂತರ ಮಾಧ್ಯಮದೊಂದಿಗೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನತೆಯ ಸೇವೆ ಮಾಡಲು ನಾನು ಸಿದ್ಧನಿದ್ದೇನೆ ಜೆಡಿಎಸ್ ಪಕ್ಷವನ್ನ ಈ ಬಾರಿ ಮತದಾರರು ಆಶೀರ್ವಾದ ಮಾಡಿದರೆ ಜೆಡಿಎಸ್ ಪಕ್ಷ ಮೊಣಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರಕ್ಕೆ ಬರುತ್ತದೆ ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಈಗ ಹೇಳಿರುವಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಯೋಜನೆಯನ್ನು ತಲುಪಿಸುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಕಾರ್ಯನಿರ್ವಹಿಸುತ್ತದೆ ಎಂದರು.

ತಾಲೂಕು ಮಹಾ ಪ್ರಧಾನ ಕಾರ್ಯದರ್ಶಿ ಡಿ ಬಿ ಕರಿಬಸಪ್ಪ ಮಾತನಾಡಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಅಳಿವಿನಂಚಿನಲ್ಲಿತ್ತು ಸುಮಾರು ಆರು ತಿಂಗಳಿನಿಂದ ಇಡಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿ ಟಿವಿ ವೀರಭದ್ರಪ್ಪ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಪ್ರತಿಯೊಂದು ಗ್ರಾಮದ ಕುಡಿಯುವ ನೀರಿನ ವ್ಯವಸ್ಥೆ ಸಿಸಿ ರಸ್ತೆ ಶಾಲೆಗಳು ಗ್ರಾಮಗಳ ಸಮಸ್ಯೆಯನ್ನು ತಿಳಿದಿದ್ದಾರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಟಿ ವೀರಭದ್ರಪ್ಪನವರಿಗೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನತೆ ಆಶೀರ್ವಾದ ಮಾಡಿದರೆ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕಂಕಣಬದ್ಧರಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪ್ರಬಲ ಟಿಕೆಟ್ ಆಕಾಂಕ್ಷಿ ಟಿ. ವೀರಭದ್ರಪ್ಪ, ತಾಲೂಕು ಕಾರ್ಯದರ್ಶಿ ಡಿ ಬಿ ಕರಿಬಸಪ್ಪ, ಜೆಡಿಎಸ್ ಎಸ್ ಟಿ ತಾಲೂಕು ಉಪಾಧ್ಯಕ್ಷ ಸೆಳ್ಳೆಗೌಡ, ಒಬಿಸಿ ತಾಲೂಕು ಅಧ್ಯಕ್ಷ ಅಬ್ಬೇನಹಳ್ಳಿ ಚನ್ನಬಸಪ್ಪ, ಸಂಘಟನಾ ಕಾರ್ಯದರ್ಶಿ ಸುರೇಂದ್ರಪ್ಪ, ಹೋಬಳಿ ಅಧ್ಯಕ್ಷ ವಸಂತ್ ಕುಮಾರ್, ಮಲ್ಲೂರಹಳ್ಳಿ ಗ್ರಾಮದ ಮುಖಂಡ ಸಣ್ಣ ಪಾಲಯ್ಯ, ಪಾಲಯ್ಯ, ಚಿನ್ನಮಲ್ಲಯ್ಯ, ಲೋಕೇಶ್, ಚಿನ್ನಯ್ಯ, ಕಾಮಯ್ಯ, ಮಹಾಂತೇಶ್ ಮಧು ಮಲ್ಲೇಶ್ ಸುರೇಶ್ ಮಲ್ಲಿಕಾರ್ಜುನ್ ಸೇರಿದಂತೆ ಬಲ್ಲ ನಾಯಕನಹಟ್ಟಿಯ ಸಮಸ್ತ ಗ್ರಾಮಸ್ಥರು ಇದ್ದರು.

About The Author

Namma Challakere Local News
error: Content is protected !!