ಸು.20ಕೋಟಿ ವೆಚ್ಚದಲ್ಲಿ ಕಾಮಗಾರಿ
ಭೂಮಿ ಪೂಜೆ
ನಾಲ್ಕನೇ ಹಂತ ಪ್ಯಾಕೇಜ್
ಚಳ್ಳಕೆರೆ : ಗುಣಮಟ್ಟದ ಕಾಮಗಾರಿಕೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ನಗರ ಪ್ರದೇಶದಲ್ಲಿ ಉತ್ತಮವಾದ ರಸ್ತೆ, ಚರಂಡಿ, ಹಾಗೂ ಸಾರ್ವಜನಿಕರಿಗೆ ಅಧಿಕಾರಿಗಳು ನೆರವಾಗಿಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಬಳ್ಳಾರಿ ರಸ್ತೆಯಲ್ಲಿ ನಗರೊತ್ಥಾನ ಯೋಜನೆಯಡಿ ರಸ್ತೆ ಅಗಲೀಕರಣದ ಭೂಮಿ ಪೂಜೆ ಕಾರ್ಯಕ್ರಮವನ್ನು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿ ಮಾತನಾಡಿದರು.
ನಗರ ಪ್ರದೇಶದಲ್ಲಿ ನಗರೋತ್ಥಾನದ ನಾಲ್ಕನೆ ಹಂತದ 20 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಈಡೀ ನಗರದಲ್ಲಿ ಒಂದೇ ಪ್ಯಾಕೇಜ್ ಹಂತ ಹಂತವಾಗಿ ನಗರದ ಹಲವು ವಾರ್ಡಗಳಲ್ಲಿ ಕಾಮಗಾರಿ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ, ಸದಸ್ಯೆ ಜೈ ತುಂನಬಿ, ಸ್ಥಾಯಿಸಮಿತಿ ಅಧ್ಯಕ್ಷರಾದ ರಾಘವೇಂದ್ರ, ಸದಸ್ಯರುಗಳಾದ ರಮೇಶ್‌ಗೌಡ, ಪ್ರಕಾಶ್, ಮಲ್ಲಿಕಾರ್ಜುನ, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಮಾಜಿ ತಾಲೂಕ ಪಂಚಾಯತ್ ಸದಸ್ಯರಾದ ಎಚ್.ಆಂಜನೇಯ, ಮುಖಂಡರು, ಕಾರ್ಯಕರ್ತರು, ಹಾಗೂ ನಗರಸಭೆ ಪೌರಾಯುಕ್ತರಾದ ರಾಮಕೃಷ್ಣ ಸಿದ್ದನಕೋಳ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪೋಟೋ ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯಲ್ಲಿ ನಗರೊತ್ಥಾನ ಯೋಜನೆಯಡಿ ರಸ್ತೆ ಅಗಲೀಕರಣದ ಭೂಮಿ ಪೂಜೆ ಕಾರ್ಯಕ್ರಮವನ್ನು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿ ಮಾತನಾಡಿದರು.