ಚಳ್ಳಕೆರೆೆ :ಎಸ್ಎಸ್ಎಲ್ಸಿ ಪರೀಕ್ಷೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿ ಪರೀಕ್ಷೆಯನ್ನು ಯಶಸ್ವಿಗೊಳಿಸಲು ನಿರ್ಧರಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ತಿಳಿಸಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಾತನಾಡುತ್ತಾ 2022ರ ಫಲಿತಾಂಶ 97.54 ಅನ್ನು ಪಡೆದು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲಿ ತಾಲೂಕು 8ನೇ ಸ್ಥಾನ ಪಡೆದಿತ್ತು ಈ ವರ್ಷ ಮಾರ್ಚ್ ಏಪ್ರಿಲ್ 2023 ಎಸ್ ಎಸ್ ಎಲ್ ಸಿ ಫಲಿತಾಂಶ ಉತ್ತಮ ಪಡಿಸಲು ಅನೇಕ ಯೋಜನೆಗಳನ್ನು ರೂಪಿಸಿ ಶಾಲೆಗಳ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಉತ್ತಮ ಬೋಧನೆ ಕಾರ್ಯಗಳನ್ನು ನಿರ್ವಹಿಸಿದ್ದಾರೆ
ಅದರಂತೆ ಮಕ್ಕಳು ಸಹ ಪರೀಕ್ಷೆ ಎದುರಿಸಲು ಸನ್ನದ್ದರಾಗಿದ್ದಾರೆ ಶಿಕ್ಷಣ ಇಲಾಖೆ ವತಿಯಿಂದ ಮಕ್ಕಳ ಕಲಿಕೆಗಾಗಿ ವರ್ಷಪೂರ್ತಿ ನೆಂಟರ ಶಾಲೆ, ಕಲಿಕಾ ಸಹಾಯವಾಣಿ, ಸರಣಿ ಪರೀಕ್ಷೆ ,ಮನೆ ಮನೆ ಭೇಟಿ, ಮಕ್ಕಳ ದತ್ತು ಕಾರ್ಯಕ್ರಮ ,ಪರೀಕ್ಷಾ ಭಯ ನಿವಾರಣೆ ,ನೇರ ಫೋನ್ ಇನ್ ಕಾರ್ಯಕ್ರಮ, ಮುಖ್ಯ ಶಿಕ್ಷಕರ ಸಭೆ ,ರಾತ್ರಿ ಶಾಲೆ, ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಫಲಿತಾಂಶ ಉತ್ತಮ ಪಡಿಸಲು ಶ್ರಮಿಸಲಾಗಿದೆ
ಪರೀಕ್ಷಾ ದೃಷ್ಟಿಯಿಂದ ಪರೀಕ್ಷೆಯ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರೀಕ್ಷೆ ಕೇಂದ್ರಗಳ ಬಳಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಪೋಷಕರು ಸಹ ಬರುವಂತಿಲ್ಲ ಪರೀಕ್ಷೆ ಸುಗಮವಾಗಿ ನಡೆಯಲು ಸ್ಥಾನಿಕ ಜಾಗೃತ ದಳ ಸಂಚಾರಿ ಜಾಗೃತ ದಳ ಪೊಲೀಸ್ ಇಲಾಖೆ ವೈದ್ಯಕೀಯ ಇಲಾಖೆ ಸೇರಿದಂತೆ ಹಲವು ಕಟ್ಟನಟ್ಟಿನ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಈ ಬಾರಿ ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಗಂಡು 2602 ಹೆಣ್ಣು 2357 ಒಟ್ಟು 4959 ವಿಧ್ಯಾರ್ಥಿಗಳು ನೊಂದಾಯಿಸಿಕೊAಡಿದ್ದಾರೆ
ತಾಲೂಕಿನ 6 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ದಿನಾಂಕ 31-3- 2023 ರಂದು ಶುಕ್ರವಾರ ಪ್ರಥಮ ಭಾಷೆ ಕನ್ನಡ 3-4- 23ರಂದು ಸೋಮವಾರ ಗಣಿತ ಸಮಾಜಶಾಸ್ತ್ರ6-4- 23ರಂದು ದ್ವಿತೀಯ ಭಾಷೆ ಇಂಗ್ಲಿಷ್ 10-4- 23ರಂದು ವಿಜ್ಞಾನ 12-4- 23ರಂದು ತೃತೀಯ ಭಾಷೆ ಹಿಂದಿ 15-4- 23 ರಂದು ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.