ಚಳ್ಳಕೆರೆ : ಪ್ರತಿ ಯುಗಾದಿ ಹಬ್ಬದ ಮರುದಿನ ಪಗಡೆ, ಕವಳಿ, ಚೌಕಬಾರ ಇನ್ನೂ ಇಸ್ಪೀಟು ಈಗೇ ವಿವಿಧ ಹಣವನ್ನು ಪಣಕ್ಕಿಟ್ಟು ಜೂಜು ಆಡುವ ಮಂದಿ ಹೆಚ್ಚು.

ಅದರಂತೆ 2023 ರ ಇಂತಹ ಆಧುನಿಕ ಕಾಲ ಘಟ್ಟದಲ್ಲಿ ಕೂಡ ಗ್ರಾಮೀಣ ಸೊಗಡು ಎಂಬಂತೆ ಜೂಜಾಟವನ್ನು ಆಡುವುದು ವಾಡಿಕೆಯಾಗಿದೆ.

ಆದರೆ ಕಾನೂನು ವಿರುದ್ಧವಾದ ಈ ಜೂಜಾಟಕ್ಕೆ ಪೊಲಿಸ್ ಇಲಾಖೆ ಎಷ್ಟೆ ಕಡಿವಾಣ ಹಾಕಿದರು ಕ್ಯಾರೆ‌ ಎನ್ನದ ಜನರು ಈ ಬಾರಿಯೂ ಕೂಡ ಭರ್ಜರಿಯಾಗಿ ಆಟ ಶುರು ಮಾಡಿದ್ದಾರೆ.

ಅದರಂತೆ ಇಸ್ಪೀಟ್ ನೀಷೇದದ ನಡುವೆಯೂ ಜಿಲ್ಲಾ ವರಿಷ್ಠಾಧಿಕಾರಿ ಕೆ.ಪರಶುರಾಂ ಮಾರ್ಗದರ್ಶನದಲ್ಲಿ ಚಳ್ಳಕೆರೆ ಠಾಣೆಯ ಪಿಐ. ಆರ್.ಎಫ್ ದೇಸಾಯಿ ನೇತೃತ್ವದಲ್ಲಿ ಪಿಎಸ್‌ಐಗಳಾದ ಪ್ರಮೀಳಮ್ಮ, ಸಿಬ್ಬಂದಿಗಳಾದ ಮಂಜುನಾಥ ಮಡಿಕೆ, ಹಾಗೂ ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ತಾಲೂಕಿನ ಹುಲಿಕುಂಟೆ, ತೋಡ್ಲಾರಹಟ್ಟಿ, ನಗರಂಗೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಇಸ್ಟೀಡ್ ಅಡ್ಡೆಗಳ ಮೇಲೆ ದಾಳಿ ನಡೆಸಿ ೩೦ ಜನ ಹಾಗೂ ೫೦ ಸಾವಿರೂ ವಶಕ್ಕೆ ಪಡೆದು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Namma Challakere Local News
error: Content is protected !!