ಚಳ್ಳಕೆರೆ : ಕ್ಷೇತ್ರದಲ್ಲಿ ಸೂರು ಇಲ್ಲದವರಿಗೆ ಸೂರು ಕಲ್ಪಿಸುವ ಮಹತ್ವದ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ಆದರಂತೆ ಬೂದಿಹಳ್ಳಿ ಸಂತ್ರಸ್ತರ ನೆರವಿಗೆ ಕಳೆದ ಹತ್ತು ವರ್ಷಗಳಿಂದ ಸದಾ ಜೋತೆಯಲ್ಲಿದ್ದು ಅವರಿಗೆ ಸೂರು ಕಲ್ಪಿಸಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಬಳ್ಳಾರಿ ರಸ್ತೆಯಲ್ಲಿರುವ ಅಭಿಷೇಕ ನಗರದಲ್ಲಿ ಲಿಡ್ಕರ್ ಸಂಸ್ಥೆಯಿAದ ಆಯೊಜಿಸಿದ್ದ ವಸತಿ ನಿವೇಶನದ ಹಕ್ಕು ಪತ್ರ ವಿತರಣಾ ಕಾರ್ಯಕ್ರದಮಲ್ಲಿ ಭಾಗಿಯಾಗಿ ಮಾತನಾಡಿದರು.
ಗ್ರಾಮೀಣ ಪ್ರದೇಶದಿಂದ ದೌರ್ಜನ್ಯಕ್ಕೆ ಹೊಳಗಾಗಿ ನಗರಪ್ರದೇಶ ಸೇರಿದ ನೂರಾರು ಕುಟುಂಬಗಳಿಗೆ ಆಶ್ರಯ ನೀಡುವ ಮೂಲಕ ಅವರಿಗೆ ಖಾಯಂ ವಸತಿಗೃಹಗಳ ಹಕ್ಕು ಪತ್ರ ವಿತರಣೆ ಮಾಡಲಾಗಿದೆ ಇನ್ನೂ ಇಲ್ಲಿ ಸಂತ್ರಸ್ತರಿಗೆ ಸುಮಾರು 134 ಜನ ನಿರಾಶ್ರಿತರಿಗೆ ಆಶ್ರಯ ನೀಡುವ ಮಹತ್ವದ ಯೊಜನೆಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ ಎಂದರು.
ಒAದೇ ಸ್ಥಳದಲ್ಲಿ ಸುಮಾರು 175 ಜನರಿಗೆ ನಿವೇಶವನ್ನು 5 ಎಕರೆ ಜಾಗದಲ್ಲಿ ಗುರುತಿಸಿ ನೀಡಲಾಗಿದೆ, ಅದರಲ್ಲಿ 41 ಜನರಿಗೆ ಮುಂದಿನ ಹಂತವಾಗಿ ನೀಡಲಾಗುವುದು, ಇನ್ನೂ 162 ನಿವೇಶನದ ಜಾಗ ಸ್ಲಂ ಬೋರ್ಡ್ ಮೂಲಕ ಹಕ್ಕು ಪತ್ರ ನೀಡಲಾಗುತ್ತದೆ. ಐದು ವರ್ಷಗಳಿಂದ ಮನೆ ಕೊಡಲು ಹಾಗಿಲ್ಲ ಆದರೆ ಸರಕಾರ ಬದಲಾವಣೆ ವ್ಯವಸ್ಥೆಯಿಂದ ಕೊಟ್ಟಿಲ್ಲ. ಈ ಬಾರಿ ಲಿಡ್ಕರ್ ಸಂಸ್ಥೆ ನೀಡುತ್ತಿದೆ ಎಂದರು.
ನಗರಸಭೆ ಸದಸ್ಯ ಕೆ.ವೀರಭದ್ರಯ್ಯ ಮಾತನಾಡಿ, ಸೂರು ಇಲ್ಲದೆ ಕಳೆದ 12 ವರ್ಷಗಳಿಂದ ಸಂಕಷ್ಟದ ಪರಸ್ಥಿತಿಯಲ್ಲಿ ಕಾಲ ದೂಡುವ ಸಂಕಷ್ಟದಲ್ಲಿ ಶಾಸಕರು ಇವರ ಕಷ್ಟಗಳಿಗೆ ಸ್ಪಂಧಿಸಿದ್ದಾರೆ ಅದರಂತೆ ಪ್ರತಿನಿತ್ಯ ಸಾರ್ವಜನಿಕರ ಹಿತ ದೃಷ್ಠಿಯಿಂದ ಅವರ ಕಷ್ಟಗಳಿಗೆ ಮರುಗುವ ಸದಸ್ಯನೆಂದರೆ ಅದು ನಗರಸಭೆ ಸದಸ್ಯ ಮಲ್ಲಿಕಾರ್ಜುನ ಒಬ್ಬರು ಅಂತಹ ಸದಸ್ಯರನ್ನು ಪಡೆದ ನೀವುಗಳು ಧನ್ಯರು ಎಂದರು.
ಇನ್ನೂ ಸ್ಥಳದಲ್ಲಿ ಜಿಲ್ಲಾ ಲಿಡ್ಕರ್ ವ್ಯವಸ್ಥಾಪಕ ಗಂಗಾಧರ್, ನಗರಸಭೆ ಅಧ್ಯಕ್ಷೆ ಸುಮಕ್ಕ, ಸದಸ್ಯ ಜೈ ತುನ್ ಬಿ, ಮಲ್ಲಿಕಾರ್ಜುನಾ, ಬಿ.ಟಿ.ರಮೇಶ್ ಗೌಡ, ರಾಘವೇಂದ್ರ, ಮುಖಂಡ ಖಾದರ್, ಟಿ.ವಿಜಯ್ ಕುಮಾರ್, ಶಿವಮೂರ್ತಿ, ಹೊನ್ನುರಾಸ್ವಾಮಿ, ಇತರರು ಇದ್ದರು.