ಚಿತ್ರದುರ್ಗ : ನಗರದ ಎಸ್.ಜೆ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ:24.03.2023ರಿAದ 26.03.2023ರವರೆಗೆ ಮೂರು ದಿನಗಳ ಕಾಲ ಸ್ಫೂರ್ತಿ-2023 ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿದೆ. ದಿನಾಂಕ:24.03.2023ರ ಬೆಳಿಗ್ಗೆ 10.00 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ವಿದ್ಯಾರ್ಥಿಗಳಿಂದ ದೇಸಿಯ ಉಡುಗೆÀ ಪ್ರದರ್ಶನ ಹಾಗೂ ನೃತ್ಯ ಕಾರ್ಯಕ್ರಮವಿರುತ್ತದೆ. ಸಂಜೆ 5.00ಗಂಟೆಯಿAದ “ಡ್ಯಾನ್ಸ್ ಜೆಎಂಐಟಿ ಡ್ಸಾನ್” ನೃತ್ಯ ಸ್ಫರ್ಧಾ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ ಎಂದು ಪ್ರಾಂಶುಪಾಲರಾದ ಡಾ. ಭರತ್ ಪಿ ಬಿ ಹಾಗೂ ಸ್ಫೂರ್ತಿ-2023ರ ಸಂಚಾಲಕ ಡಾ.ಶ್ರೀಶೈಲ ಜೆ ಎಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.