ನಾಯಕನಹಟ್ಟಿ : ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಪಕ್ಷವು ಅಧಿಕಾರ ಕಳೆದುಕೊಂಡು 10ವರ್ಷಗಳಾಗಿವೆ. ಈಗಾಗಲೇ ಹಲವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮುಖಂಡ ಬಂಡೆಕಪಿಲೆ ಓಬಣ್ಣ ಹೇಳಿದರು.
ಪಟ್ಟಣದ ಯಾತ್ರಿ ನಿವಾಸದಲ್ಲಿ ಗುರುವಾರ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಣತೊಡಬೇಕು, ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಪಕ್ಷವು ಅಧಿಕಾರ ಕಳೆದುಕೊಂಡು 10ವರ್ಷಗಳಾಗಿವೆ. ಈಗಾಗಲೇ ಹಲವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಯೋಗೀಶ್‌ಬಾಬು, ಉಗ್ರಪ್ಪನವರ ಹೆಸರು ಮುಂಚೂಣಿಯಲ್ಲಿದ್ದು, ಈ ಮಧ್ಯೆ ಕೂಡ್ಲಿಗಿ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಕಾಂಗ್ರೆಸ್‌ಗೆ ಬರತುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯಾರೇ ಬಂದರೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟಿತವಾಗಬೇಕಿದೆ ಎಂದರು.
ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿ.ಬಿ.ಮುದಿಯಪ್ಪ ಮಾತನಾಡಿ “ಪ್ರತಿ ಚುನಾವಣೆಯ ಸಮಯದಲ್ಲಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಮ್ಯಾಸನಾಯಕ ಮತ್ತು ಊರುನಾಯಕ ಎಂಬ ಜಾತಿಭೇದವನ್ನು ಹುಟ್ಟಿಹಾಕುವ ಪರಿಪಾಠವನ್ನು ಕೆಲ ರಾಜಕಾರಿಣಿಗಳು ರೂಢಿಸಿಕೊಂಡಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಮ್ಯಾಸನಾಯಕರಿಗೆ ಟಿಕೆಟ್ ನೀಡಿ ಎಂಬ ಕ್ರಮ ಅವೈಜ್ಞಾನಿಕ. ಇದು ಜಾತಿಗಳ ಮಧ್ಯೆ ವಿಷಭೀಜವನ್ನು ಬಿತ್ತುವ ನಡೆಯಾಗಿದೆ. ಇದರಿಂದ ಕ್ಷೇತ್ರದ ಬಹುಸಂಖ್ಯಾತ ಜನಸಮುದಾಯವನ್ನು ವಿಭಜಿಸುವ ಹುನ್ನಾರ ನಡೆಯುತ್ತಿದೆ. ಇದರಿಂದ ಜನರು ಎಚ್ಚೆತ್ತುಕೊಳ್ಳಬೇಕು. ಹಾಗೂ ರಾಜಕೀಯ ನಾಯಕರು ಇಂತಹ ಸಂಗತಿಗಳನ್ನು ಕೈಬಿಡಬೇಕು” ಎಂದರು.
“ಮೊಳಕಾಲ್ಮುರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಯಾರಿಗೆ ಟಿಕೆಟ್ ದೊರೆಯುತ್ತಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಕಾಂಗ್ರೆಸ್ ಪಾಳೆಯದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಪೂಜೆ ನಡೆಯುತ್ತಿದೆ. ಹಾಗಾಗಿ ಪಕ್ಷದ ವರಿಷ್ಠರು ಯಾರಿಗೇ ಟಿಕೆಟ್ ನೀಡಿದರೂ ಒಗ್ಗೂಡಿ ಕೆಲಸ ಮಾಡೋಣ ಎಂದು ಪ.ಪ. ಮಾಜಿ ಸದಸ್ಯ ಟಿ.ಬಸಣ್ಣ ಹೇಳಿದರು.
ಇದಕ್ಕೂ ಮೊದಲು ಮುಖಂಡ ನೇರಲಗುಂಟೆ ಸೂರಯ್ಯ ಮಾತನಾಡಿ, “ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ನಿAದ ಎಲ್ಲ ವಿಷಯದಲ್ಲೂ ಸಮರ್ಥ ರಾಜಕೀಯ ಧುರೀಣ ವಿ.ಎಸ್.ಉಗ್ರಪ್ಪ. ಅವರಿಗೆ ಪಕ್ಷವು ಟಿಕೆಟ್ ನೀಡಿದರೆ ಕ್ಷೇತ್ರ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಹೇಳಿದಾಗ ಸಭೆಯಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ನಂತರ ಸಭೆಯಲ್ಲಿ ಪಕ್ಷದ ಒಗ್ಗಟಿನ ಮಂತ್ರಜಪಿಸಿ ಕಾರ್ಯಕರ್ತರ ಸಭೆಯನ್ನು ಮುಕ್ತಾಯಗೊಳಿಸಿದರು.
ಇದೇವೇಳೆ ತಾ.ಪಂ.ಮಾಜಿ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಮಾಜಿಸದಸ್ಯ ತಿಪ್ಪೇಸ್ವಾಮಿ(ಜಂಭಣ್ಣ), ಗ್ರಾ.ಪಂ.ಉಪಾಧ್ಯಕ್ಷ ಬಿ.ಕಾಟಯ್ಯ, ಮುಖಂಡರಾದ ಜಿ.ಎಸ್.ಪ್ರಭುಸ್ವಾಮಿ, ಚಂದ್ರಣ್ಣ, ಬಿ.ಆರ್.ತಿಮ್ಮಾರೆಡ್ಡಿ, ಚನ್ನಪ್ಪ, ಕೆ.ಪಿ.ತಿಪ್ಪೇಸ್ವಾಮಿ, ದುರುಗಪ್ಪ, ತಿಪ್ಪೇಶ್, ಪ್ರಕಾಶ್, ಪಿ.ಓಬಯ್ಯ, ಮೊಹಮೂದ್ ಅವರೂ ಇದ್ದರು.