ನಾಯಕನಹಟ್ಟಿ:: ಮತ್ತೊಮ್ಮೆ ನನಗೆ ಆಶೀರ್ವದಿಸಿ ಮತ ನೀಡಿ ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ಹೇಳಿದ್ದಾರೆ.
ಸಮೀಪದ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಶ್ರೀ ಶಂಕರ ಸ್ವಾಮಿ ಧ್ವಜಾರೋಹಣ ಯುಗಾದಿ ಹಬ್ಬ ಪ್ರಯುಕ್ತ ಶ್ರೀ ಶಂಕರ್ ಸ್ವಾಮಿ ನಾಟ್ಯ ಯುವ ಕಲಾಸಂಘ ವತಿಯಿಂದ ಪ್ರೀತಿಗಾಗಿ ಪ್ರಾಣ ತ್ಯಾಗ ಅರ್ಥಾತ್.
ಸ್ನೇಹದ ದೋಣಿಯ ಮೇಲೆ ಪ್ರೀತಿಯ ಪಯಣ ಎಂಬ ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದ್ದಾರೆ. ಗ್ರಾಮೀಣ ಪ್ರದೇಶದ ಬಯಲಾಟ ಕೋಲಾಟ ಸೋಬಾನ ಅಳಿವಿನಂಚಿನಲ್ಲಿ ನಶಿಸಿ ಹೋಗುತ್ತಿವೆ ಅವನು ಉಳಿಸಿ ಬೆಳೆಸಲು ಪ್ರತಿಯೊಬ್ಬ ಯುವಕರು ಮುಂದಾಗಬೇಕು ಎಂದು ತಿಳಿಸಿದರು.
ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಆಪ್ತ ಸಹಾಯಕ ಜಿ ಎಚ್ ಮೋಹನ್ ಕುಮಾರ್ ಮಾತನಾಡಿ ಗ್ರಾಮದ ಅಭಿವೃದ್ಧಿ ನನ್ನ ಮೂಲ ಗುರಿ ಅದರಿಂದ ಕೇಂದ್ರ ಸಚಿವ ನಾರಾಯಣಸ್ವಾಮಿಯವರು ಗ್ರಾಮಕ್ಕೆ ಹಲವಾರು ಯೋಜನೆಗಳ ಅನುದಾನವನ್ನು ನೀಡಿದ್ದಾರೆ ಗ್ರಾಮದಲ್ಲಿ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.
ಈಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಎಸ್ ಮಂಜಣ್ಣ, ಕೇಂದ್ರ ಸಚಿವರ ಆಪ್ತ ಸಹಾಯಕ ಜಿ ಎಚ್ ಮೋಹನ್ ಕುಮಾರ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ ತಿಪ್ಪೇಸ್ವಾಮಿ (ಕೋಟೆಪ್ಪ) ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಪಾಲಮ್ಮ ಜಿ ಬೋರಯ್ಯ, ಗ್ರಾಮ ಪಂಚಾಯತಿ ಸದಸ್ಯರಾದ ಪ್ರೇಮಲತಾ ಟಿ .ಶಂಕರ್ ಮೂರ್ತಿ , ರಾಧಮ್ಮ ಟಿ ಬೋಜರಾಜ್, ಬಸಕ್ಕ ತಿಪ್ಪೇಸ್ವಾಮಿ ವೈ ಪಿ ಕನ್ನಯ್ಯ, ಡಿ ಬೋರೆಯ್ಯ, ಪ್ರಜಾ ಶಕ್ತಿ ಜಿ ಎಸ್ ತಿಪ್ಪೇಸ್ವಾಮಿ, ಪತ್ರಕರ್ತ ಕೆ ಟಿ ಓಬಳೇಶ್ ನಲಗೇತನಹಟ್ಟಿ, ರಾಮಸಾಗರ ಪಿ .ಪಿ. ಮಹಾಂತೇಶ್ ನಾಯಕ,
ಗುಂತಕೋಲಮ್ಮನಹಳ್ಳಿ ಎಸ್ ಶಿವತಿಪ್ಪೇಸ್ವಾಮಿ, ಸೇರಿದ ಗಜ್ಜುಗಾನಹಳ್ಳಿ ಸಮಸ್ತ ಗ್ರಾಮಸ್ಥರು ಇದ್ದರು