.
ನಾಯಕನಹಟ್ಟಿ:: 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಆಶೀರ್ವಾದ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಬುಧವಾರ ರಾತ್ರಿ ಎನ್ ದೇವರಹಳ್ಳಿ ಗ್ರಾಮ ದೇವತೆ ಶ್ರೀ ದೊಡ್ಲ ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ತಿಳಿಸಿ ಶ್ರೀದೇವಿಯ ಆಶೀರ್ವಾದ ಪಡೆದು ನಂತರ ಗ್ರಾಮದ ಕಲಾವಿದರು ಶ್ರೀ ದೊಡ್ಲ ಮಾರಿಕಾಂಬ ದೇವಿ ಜಾತ್ರಾ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಹೂವಿಗಾಗಿ ದುಂಬಿ ಸಾವು ಅರ್ಥಾರ್ಥ ಬಿರುಗಾಳಿಗೆ ಸಿಕ್ಕಿದ ಪ್ರೇಮಿಗಳು ಎಂಬ ಸಾಮಾಜಿಕ ನಾಟಕದಲ್ಲಿ ಮತ್ತು ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಪ್ರೀತಿಗಾಗಿ ಪ್ರಾಣ ತ್ಯಾಗ ಅರ್ಥಾರ್ಥ ಸ್ನೇಹದ ದೋಣಿಯ ಮೇಲೆ ಪ್ರೀತಿಯ ಪಯಣ ಎಂಬ ಸಾಮಾಜಿಕ ನಾಟಕಗಳಲ್ಲಿ ಭಾಗವಹಿಸಿ ಯುವಕರು ಕಲೆಯನ್ನು ಉಳಿಸಿ ಬೆಳೆಸಲು ಕಂಕಣಬದ್ಧರಾಗಿರಬೇಕು ಎಂದು ಕರೆ ನೀಡಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನಿಮ್ಮ ಮನೆಯ ಮಗನಾಗಿ ನಿಮ್ಮ ಸೇವೆ ಮಾಡಲು ನನಗೆ ಈ ಬಾರಿ ಆಶೀರ್ವಾದ ಮಾಡಿ ನಿಮ್ಮ ಋಣ ತೀರಿಸಲು ನಾನು ಸದಾ ಸಿದ್ಧನಿದ್ದೇನೆ ಎಂದು ಜೆಡಿಎಸ್ ಪಕ್ಷದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಟಿ. ವೀರಭದ್ರಪ್ಪ ತಿಳಿಸಿದರು.
ಇದೇ ವೇಳೆ ತಾಲೂಕು ಮಹಾಪ್ರಧಾನ ಕಾರ್ಯದರ್ಶಿ ಡಿ ಬಿ ಕರಿಬಸಪ್ಪ ಚೌಳಕೆರೆ, ಓ ಮಲ್ಲಿಕಾರ್ಜುನ್ ಸೋಮಣ್ಣ ಎನ್ ದೇವರಹಳ್ಳಿ ಪ್ರಕಾಶ್, ಮನು ಮತ್ತು ಗಜ್ಜುಗಾನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ ಎಸ್ ಮಂಜಣ್ಣ, ಮುಖಂಡರಾದ ಶಂಕರ್ ಮೂರ್ತಿ, ಜಿ ಎಸ್ ತಿಪ್ಪೇಸ್ವಾಮಿ, ಸೇರಿದಂತೆ ಪಕ್ಷದ ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.