ನಾಯಕನಹಟ್ಟಿ:: ಯುಗಾದಿ ಹಬ್ಬವು ಪ್ರತಿಯೊಬ್ಬರಿಗೂ ಹರ್ಷವನ್ನು ತರಲಿ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಡಾ.ಕಾಟಂಲಿಂಗಯ್ಯ ಹೇಳಿದ್ದಾರೆ.
ಅವರು ಬುಧವಾರ ಸಮೀಪದ ಎನ್ ದೇವರಹಳ್ಳಿ ಗ್ರಾಮದ ಆರಾಧ್ಯದೇವತೆ ಶ್ರೀ ಶ್ರೀ ದಡ್ಲ ಮಾರಿಕಾಂಬ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಪ್ರತಿ ವರ್ಷವೂ ಸಂಪ್ರದಾಯದಂತೆ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ದಡ್ಲ ಮಾರಿಕಾಂಬ ಜಾತ್ರಾ ಮಹೋತ್ಸವ ನಡೆಯುತ್ತಿದೆ.
ಈ ಒಂದು ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಿ, ದೇವಿಯ ದರ್ಶನ ಪಡೆದು ಭಕ್ತರು ತಮ್ಮ ತಮ್ಮ ತೆರಳಿ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ ಅದರಿಂದ ದೇವಿಯ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಗ್ರಾಮ ಪಂಚಾಯತಿ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಸ್ವಚ್ಛತೆ ವ್ಯವಸ್ಥೆ ಸೇರಿದಂತೆ ಕಲ್ಪಿಸಿಕೊಡಲಾಗುತ್ತದೆ ಎಂದರು.
.
ಇದೆ ವೇಳೆ ಗ್ರಾಮ ಪಂಚಾಯತಿ ಸದಸ್ಯ ಆರ್ ಬಸವರಾಜ್ ಮಾತನಾಡಿ. ಗ್ರಾಮದ ದೇವತೆ ದಡ್ಲ ಮಾರಿಕಾಂಬ ಹಲವಾರು ಪವಾಡಗಳನ್ನು ತೂರಿದ್ದಾಳೆ ಅದರಿಂದ ಸುತ್ತ ಮುತ್ತಲಿನ ಗ್ರಾಮಗಳಾದ ಜಂಬೈಯನಹಟ್ಟಿ, ತಿಮ್ಮಪ್ಪಯ್ಯನಳ್ಳಿ ವರವು, ನೇರಲಗುಂಟೆ ,ಭತ್ತೈನಹಟ್ಟಿ, ಗಿಡಪುರ, ಗೌರಿಪುರ, ಕುದಾಪುರ ರಾಮದುರ್ಗ ಬೋಸೆದೇವರಹಟ್ಟಿ ನಲಗೇತನಹಟ್ಟಿ,ಉಪ್ಪಾರಹಟ್ಟಿ, ಎತ್ತಿನಹಟ್ಟಿ, ರಾಮದುರ್ಗ ಸೇರಿದಂತೆ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ ನಂತರ ತಮ್ಮ ತಮ್ಮ ಊರುಗಳಿಗೆ ತೆರಳಿ ಭಕ್ತರು ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿ ಬೇವು ಬೆಲ್ಲ ತಿನ್ನುವುದು ಇಂದಿನಿಂದ ನಡೆದು ಬಂದ ಪದ್ದತಿ ಎಂದು ತಿಳಿಸಿದರು..

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಡಾಕ್ಟರ್ ಕಾಟಂಲಿಂಗಯ್ಯ, ಸದಸ್ಯರಾದ ಆರ್ ಬಸವರಾಜ್, ಎಸ್ ಸಿದ್ದಪ್ಪ ,ರಾಯಮ್ಮ ಜಯಣ್ಣ, ರತ್ನಮ್ಮ ರಾಜಣ್ಣ, ಸುಮಾ ಸುಭಾಷ್ ಚಂದ್ರ ಬೋಸ್, ಸರಿತಾಭಾಯಿ ರಾಜ ನಾಯ್ಕ, ಕಾಟವ್ವನಹಳ್ಳಿ ಶ್ರೀ ಅನ್ನಪೂರ್ಣೇಶ್ವರಿ ಡಾಬಾ ಮಾಲಿಕ ಡಿ ಸುರೇಶ್ ನಾಯಕ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!