ಚಳ್ಳಕೆರೆ : ಯುಗಾದಿ ಹಬ್ಬಕ್ಕೆ ಬಂಪರ್ ಗಿಪ್ಟ್ ಕೋಡುವ ಕೆಲ ಇಲಾಖೆಗಳು, ಕಂಪನಿಗಳನ್ನು ನಾವು ನೋಡಿದ್ದೆವೆ ಕಂಡಿದ್ದೆವೆ ಆದರೆ ಕಳೆದ ಎರಡರಿಂದ ಮೂರು ತಿಂಗಳು ಕಳೆದರು ಪೌರಕಾರ್ಮಿಕರಿಗೆ ದಿನ ನಿತ್ಯಮಾಡಿದ ಕೆಲಸದ ವೇತನ ನೀಡದೆ ನಿರ್ಲಕ್ಷ್ಯ ವಹಿಸಿದೆ.
ಇಂತಹ ನಿರ್ಲಕ್ಷ್ಯ ತೋರುವ ಇಲಾಖೆಯನ್ನು ಚಳ್ಳಕೆರೆ ನಗರಸಭೆಯಲ್ಲಿ ಕಾಣಬಹುದು ಹೌದು ನಿಜಕ್ಕೂ ಶೌಚನೀಯ
ಯುಗಾದಿ, ದೀಪಾವಳಿ ಈಗೇ ಹಲವು ಹಬ್ಬಗಳಿಗೆ ತನ್ನ ಸ್ಥಳೀಯ ಸಂಸ್ಥೆಗಳು ದಿನಗೂಲಿ ನೌಕರರಿಗೆ ಭತ್ಯೆ ಹೆಚ್ಚಳ, ವಿಶೇಷವಾದ ಗಿಪ್ಟ್ ಈಗೇ ಉಡುಗೊರೆ ಕೊಡುವುದು ನೋಡೆತ್ತೆವೆ ಆದರೆ ಈ ನಗರಸಭೆ ಯಲ್ಲಿ ಮಾತ್ರ ಯಾವ ಹಬ್ಬಕ್ಕೆ ಕೂಡ ಸರಿಯಾದ ಸಮಯಕ್ಕೆ ಸರಿಯಾದ ವೇತನ ನೀಡದೆ ಪೌರಕಾರ್ಮಿಕರ ಕುಟುಂಬವನ್ನು ಚಿಂತೆಗೀಡು ಮಾಡಿದೆ.
ಇನ್ನೂ ಪೌರಕಾರ್ಮಿಕರು ವೇತನ ಕೇಳಿದರೆ ಕೆಲಸದಿಂದ ತೆರುವ ಭಾಗ್ಯ ಸಿಗುತ್ತದೆ ಇದರಿಂದ ಯಾವ ಪೌರಕಾರ್ಮಿಕರು ಈದರ ಗೋಜಿಗೆ ಗೋಗುವುದಿಲ್ಲ ಆದರೆ ಮನೆ ತುಂಬ ಮಕ್ಕಳು, ನೆಂಟರಿಷ್ಟರು ಹಬ್ಬಕ್ಕೆ ಬಂದ ಸಂದರ್ಭದಲ್ಲಿ ಮಾತ್ರ ತಲೆ ಮೇಲೆ ಕೈ ಹೊತ್ತುಕೂರುವ ಪರಿಸ್ಥಿತಿ ಪೌರಕಾರ್ಮಿಕರ ಮನೆಗಳಲ್ಲಿ ನಿರ್ಮಾಣವಾಗಿದೆ.
ಇದರ ವಾಸ್ಥವತೆ ಅರಿತ ಯಾವೋಬ್ಬ ಅಧಿಕಾರಿಗಳು ಕೂಡ ಇವರ ಬಗ್ಗೆ ಗಮನ ಹರಿಸದೆ ಇರುವುದು ವಿಷಾಧನೀಯ
ಚಳ್ಳಕೆರೆ ನಗರಸಭೆಯಲ್ಲಿ ಸರಿ ಸುಮಾರು ನೂರಕ್ಕೂ ಹೆಚ್ಚು ಪೌರಕಾರ್ಮಿಕರ ಖಾಯಂ, ನೇರಪಾವತಿ, ಗುತ್ತಿಗೆ, ಹೊರ ಗುತ್ತಿಗೆ ಈಗೇ ವಿವಿಧ ಹಂತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಆದರೆ ದಿನ ನಿತ್ಯ ದುಡಿಸಿಕೊಳ್ಳುವ ಅಧಿಕಾರಿ ವರ್ಗ ಮಾತ್ರ ಇವರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೆ ಮೌನ ವಹಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಪ್ರಜ್ಞಾವಂತ ನಾಗರೀಕರು ವಿಮರ್ಷಿಸುವ ಅನಿವಾರ್ಯತೆ ಇದೆ.
ಇನ್ಮೂ ನಗರದ 31 ವಾರ್ಡ್ ಗಳಲ್ಲಿ ತಮ್ಮ ತಮ್ಮ ವಾರ್ಡ್ ಗಳಲ್ಲಿನ ಸ್ಚಚ್ಚತೆ ಹಾಗಿಲ್ಲ ಎಂದು ಕಾರ್ಮಿಕರ ವಿರುದ್ಧ ದಬಾಯಿಸುವ ನಗರಸಭೆ ಸದಸ್ಯರು ಮಾತ್ರ ಕಾರ್ಮಿಕರ ವೇತನದ ಬಗ್ಗೆ ಚಕಾರ ಎತ್ತುವುದಿಲ್ಲ,
ಇನ್ನೂ ಕಳೆದ ಹಲವು ವರ್ಷಗಳಿಂದ ಪೌರಕಾರ್ಮಿಕರ ನೀಡುವ ಇಎಪ್,,ಪಿಎಪ್ ಗಗನ ಕುಸುಮ ಇಂತಹ ಸಮಸ್ಯೆ ಬಗ್ಗೆ ಹಲವು ಪ್ರತಿಭಟಿಸಿದರೂ ಕೂಡ ಸ್ಥಳೀಯ ಜನಪ್ರತಿನಿಧಿಗಳು ಕೂಡ ಯಾವುದೇ ಚಕಾರ ಎತ್ತದೆ ಇರುವುದು ವಿಪರ್ಯಾಸದ ಸಂಗತಿ
ಒಟ್ಟಾರೆ ನಗರದಲ್ಲಿ ಯುಗಾದಿ ಹಬ್ಬದ ಸಂಭ್ರಮ ಎಲ್ಲಾರ ಮನ ಮನೆಗಳಲ್ಲಿ ಹೊಸ ಬಟ್ಟೆ, ಸಿಹಿ ಊಟ ಜೊರಾಗಿದ್ದಾರೆ
ಪೌರಕಾರ್ಮಿಕರ ಕುಟುಂಬಗಳಲ್ಲಿ ಮಾತ್ರ ವೇತನ ಇಲ್ಲದೆ ಕಾಲ ಮುಂದೂಡವ ಅನಿವಾರ್ಯತೆ ಇದೆ.