ಚಳ್ಳಕೆರೆ : ಎಣ್ಣೆ ನಗರಿ ಚಳ್ಳಕೆರೆಯಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಉರಿ ಬಿಸಿಲಿಗಿಂತ ಹೆಚ್ಚಾಗಿದೆ ಅದೇ ರೀತಿಯಲ್ಲಿ ಮೂರು ರಾಜಾಕೀಯ ಪಕ್ಷಗಳು ಭರ್ಜರಿ ತಾಲಿಮು ನಡೆಸುತ್ತಿವೆ ಅದರಂತೆ ಕ್ಷೇತ್ರದ ಹಾಲಿ ಶಾಸಕ ಟಿ.ರಘುಮೂರ್ತಿ ಈಗಾಗಲೇ ಎರಡು ಬಾರಿ ಗೆದ್ದು ಅಧಿಕಾರಿದ ಚುಕ್ಕಾಣಿ ಹಿಡಿದು ಕ್ಷೇತ್ರ ವ್ಯಾಪ್ತಿ ತಿರುಗಾಟ ನಡೆಸುತ್ತಿದ್ದಾರೆ.
ಅದರಂತೆ ಇಂದು ಶಾಸಕ ಟಿ.ರಘುಮೂರ್ತಿ ಚಿತ್ರದುರ್ಗ ನಗರದ ಗೃಹ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ಷೇತ್ರ ವ್ಯಾಪ್ತಿಯ ತುರುವನೂರು ಹೋಬಳಿಯ ಹುಣಸೇಕಟ್ಟೆ ಗ್ರಾಮದ ವಿವಿಧ ಪಕ್ಷಗಳ ಮುಖಂಡರುಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಂಡರು,
ಇನ್ನೂ ತುರುವನೂರು ಗ್ರಾಮದಲ್ಲಿ ನಡೆದ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿ ನಿರ್ಮಾಣವಾದ ಕಡಲೆ ಖರೀದಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಂತರ ಚಳ್ಳಕೆರೆ ತಾಲೂಕಿನ ಕಸ್ತೂರಿತಿಮ್ಮನಹಳ್ಳಿ, ದೇವರಮರಿಕುಂಟೆ, ವಡೇರಹಳ್ಳಿ, ಬೊಂಬೇರಹಳ್ಳಿ ಗ್ರಾಮದಲ್ಲಿ ನಡೆದ ಮುಖಂಡರ ಮತ್ತು ಕಾರ್ಯಕರ್ತರ ಕುಂದು ಕೊರತೆಗಳ ಸಭೆಯಲ್ಲಿ ಪಾಲ್ಗೊಂಡು ಪರಿಹಾರ ಕಲ್ಪಿಸುವಂತೆ ಭರವಸೆ ನೀಡಿದರು.